ಬೈಕ್ ಅಪಘಾತದಲ್ಲಿ ಮೃತಪಟ್ಟ ಕೆಕೆಆರ್‍ಟಿಸಿ ನೌಕರನ ಕುಟುಂಬಕ್ಕೆ 50 ಲಕ್ಷ ರೂಪಾಯಿ ಚೆಕ್ ವಿತರಣೆ

0
20

ಸುರಪುರ :ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ನೌಕರನಾಗಿದ್ದ ಬಾದ್ಯಾಪುರ ಗ್ರಾಮದ ಶಿವಶಂಕರಗೌಡ ಅವರು ಬೈಕ್ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್‍ನಲ್ಲಿ ಮೃತನ ಕುಟುಂಬಕ್ಕೆ ಬ್ಯಾಂಕ್ ವತಿಯಿಂದ 50 ಲಕ್ಷ ಮೊತ್ತದ ಚೆಕ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಎಸ್‍ಬಿಐ ಬ್ಯಾಂಕ್‍ನ ಯಾದಗಿರಿ ಜಿಲ್ಲೆಯ ಆರ್‍ಒ ಶ್ರೀಪಾದರಾಜು ಅವರು ನೌಕರನ ಪತ್ನಿ ಗೌರಮ್ಮ ಅವರಿಗೆ ಚೆಕ್ ವಿತರಿಸಿ ನಂತರ ಮಾತನಾಡಿ, ಎಸ್‍ಬಿಐ ಬ್ಯಾಂಕ್ ಮತ್ತು ಕೆಕೆಆರ್‍ಟಿಸಿ ಸಹಯೋಗವೊಂದನ್ನು ಮಾಡಿಕೊಂಡ ಹಿನ್ನೆಲೆಯಲ್ಲಿ ಮೃತ ನೌಕರನ ಕುಟುಂಬಕ್ಕೆ 50 ಲಕ್ಷದ ಚೆಕ್ ನೀಡಲಾಗಿದೆ ಎಂದರು.

Contact Your\'s Advertisement; 9902492681

ಕೆಕೆಆರ್‍ಟಿಸಿಯ ಅಧಿಕಾರಿ, ನೌಕರರು ಎಸ್‍ಬಿಐಯಲ್ಲಿ ವೇತನ ಅಕೌಂಟ್ ಹೊಂದಿದ್ದು ಸೇವೆಯಲ್ಲಿ ಅವರಿಗೆ ಏನಾದರೂ ಅನಾಹುತವಾದರೆ ಅವರು ಜೀವಾ ವಿಮೆಗೆ ಒಂದು ರೂಪಾಯಿ ಹಣ ಕಟ್ಟದೆ ಇದ್ದ ಪಕ್ಷದಲ್ಲಿ ಕೂಡ ಅವರಿಗೆ ಬ್ಯಾಂಕ್‍ನಿಂದ 50 ಲಕ್ಷ ನೀಡಲಾಗುತ್ತದೆ. ಸಾರಿಗೆ ನೌಕರ ಶಿವಶಂಕರಗೌಡ ಅವರು ಆಗಸ್ಟ್‍ನಲ್ಲಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರು ಖಾತೆ ನಮ್ಮ ಬ್ಯಾಂಕ್‍ನಲ್ಲಿತ್ತು. ಹೀಗಾಗಿ ಈ ಚೆಕ್ ನೀಡಲಾಗಿದೆ. ಕುಟುಂಬದವರು ಮಕ್ಕಳ ವಿದ್ಯಾಭ್ಯಾಸ, ಇನ್ನಿತರ ಕಲ್ಯಾಣ ಕಾರ್ಯಗಳಿಗೆ ಹಣವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾಮಾನ್ಯ ಖಾತೆ ಹೊಂದಿರುವ ಗ್ರಾಹಕರಿಗೂ ಕೂಡಾ ಬ್ಯಾಂಕ್‍ನಲ್ಲಿ ಬೇರೆ ಬೇರೆ ವಿಮೆ ಯೋಜನೆಗಳಿವೆ. ಪಿಎಂ ಯೋಜನೆ ಅಡಿ ವರ್ಷಕ್ಕೆ 20 ರೂ. ವಿಮೆ ಮಾಡಿಸದ ಗ್ರಾಹಕರು ಅಪಘಾತದಿಂದ ಮೃತಪಟ್ಟರೆ 2 ಲಕ್ಷ, 1 ಸಾವಿರ ವಿಮೆ ಮಾಡಿಸಿದ್ದರೆ. 20 ಲಕ್ಷ. 450 ರೂ ವಿಮೆದಾರರು ಸಹಜವಾಗಿ ಮೃತಪಟ್ಟಲ್ಲಿ, ಹಾವು ಕಚ್ಚಿ ಸತ್ತಲ್ಲಿ 2 ಲಕ್ಷ, ಗಾಯಗೊಂಡಿದ್ದರೆ ಶೇಕಡವಾರು ಪರಿಹಾರ ಸಿಗಲಿದೆ. 50 ಲಕ್ಷ ಚೆಕ್ ವಿತರಣೆ ಮಾಡಿದ್ದು ಕರ್ನಾಟಕದಲ್ಲಿ ಇದು ಆರನೇ ಪ್ರಕರಣವಾಗಿದೆ ಎಂದರು.

ಕೆಕೆಆರ್‍ಟಿಸಿ ಕಾರ್ಮಿಕ ಅಧಿಕಾರಿ ಬಂಗಾರಪ್ಪ ಕಟ್ಟಿಮನಿ ಮಾತನಾಡಿ, ಎಸ್‍ಬಿಐ ಬ್ಯಾಂಕ್‍ನಲ್ಲಿ ಅಕೌಂಟ್ ಇದೆ ಎಂಬ ಕಾರಣಕ್ಕೆ ಮೃತಪಟ್ಟ ನಮ್ಮ ಸಿಬ್ಬಂದಿಯ ಕುಟುಂಬಕ್ಕೆ 50 ಲಕ್ಷ ನೀಡಿ ನೆರವಾಗಿರುವುದಕ್ಕೆ ಎಸ್‍ಬಿಐಗೆ ಖಂಡಿತವಾಗಿಯು ನಾವುಗಳು ಧನ್ಯವಾದ ಹೇಳಬೇಕು. 50 ಲಕ್ಷ ಅದು ಸಣ್ಣ ಮೊತ್ತ ಅಲ್ಲ. ಅಲ್ಲದೇ ಅದು ಶೂನ್ಯ ವಿಮೆಯಲ್ಲಿ. ಇದು ಕೇವಲ ಒಂದೇ ತಿಂಗಳಲ್ಲಿ ಕೊಡಲಾಗಿದೆ. ಯಾದಗಿರಿ ವಿಭಾಗದಲ್ಲಿ 1550 ಸಿಬ್ಬಂದಿಗಳಿದ್ದಾರೆ. ಶೇ.95 ಸಿಬ್ಬಂದಿಗಳು ಎಸ್‍ಬಿಐ ಬ್ಯಾಂಕ್‍ನಲ್ಲಿ ಅಕೌಂಟ್ ಹೊಂದಿರುತ್ತಾರೆ ಎಂದರು.

ಸಾರಿಗೆ ಇಲಾಖೆಯ ಲೆಕ್ಕಾಧಿಕಾರಿ ಯುವರಾಜ, ಬ್ಯಾಂಕ್ ವ್ಯವಸ್ಥಾಪಕರಾದ ಲೋಕೇಶ್, ಭೀಮರಾವ್ ಪಂಚಾಳ ಸೇರಿ ಸಿಬ್ಬಂದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here