ಕಲಬುರಗಿ: ಜಗತ್ತಿನಲ್ಲಿಯೇ ಆಯುರ್ವೇದವು ಹೆಸರುವಾಸಿಯಾಗಿದ್ದು, ಸರ್ಕಾರವು ಆಯುರ್ವೇದ ಔಷಧಿಗಳಿಗೆ ಉತ್ತೇಜನ ನೀಡುತ್ತಿದೆ ಎಂದು ಅಫಜಲಪೂರ ಶಾಸಕ ಎಂ.ವೈ.ಪಾಟೀಲ ಅವರು ಹೇಳಿದರು.
ಶುಕ್ರವಾರದಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಂಸ್ಕೃತಿಕ ಸಂಘದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆಯುಷ್ ಇಲಾಖೆ,ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ೮ನೇ ರಾಷ್ಟಿಯ ಆಯುರ್ವೇದ ದಿನಾಚರಣೆಯನ್ನು ಧನ್ವಂತ್ರಿ ದೇವಿ ಭಾವ ಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಸಿ ಗಿಡ ಬೇರುಗಳಿಂದ ಔಷಧಿ ತಯಾರಿಸಿ ನೀಡುತ್ತಾರೆ ವೈಜ್ಞಾನಿಕವಾಗಿ ಅದು ಸೇವನೆ ಮಾಡುವುದು ಕಡಿಮೆಯಾಗಿದೆ ಪುರಾತನ ಔಷಧಿ ಆಯುರ್ವೇದಕ ಚಿಕಿತ್ಸೆ ಮುಖ್ಯವಾಗಿದೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಆಯುರ್ವೇದ ಆಸ್ಪತ್ರೆಗೆ ಸ್ಥಳದ ಸೌಲಭ್ಯ ಮಾಡುವ ಕೆಲಸ ಮಾಡುತ್ತೇನೆ ಮುಂದಿನ ಜನಾಂಗಕ್ಕೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.
ದಕ್ಷಿಣ ವಿಧಾನ ಸಭೆ ಶಾಸಕರು ಅಲ್ಲಮ ಪ್ರಭು ಪಾಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ. ಮಾನವ ಭೂಮಿಗೆ ಬಂದಾಗಿನಿಂದಲೆ ಆಯುರ್ವೇದ ಬಂದಿದೆ. ಹಿಂದಿನ ಕಾಲದಲ್ಲಿ ಆಯುರ್ವೇದ ಚಿಕಿತ್ಸೆಗೆ ಹೆಚ್ಚು ಪಡೆಯುತ್ತಿದ್ದರು ಬೇರುಗಳನ್ನು ಹೊಂದಿರುವ ಆಯುರ್ವೇದವು ಪ್ರಾಚೀನ ಚಿಕಿತ್ಸಾ ವ್ಯವಸ್ಥೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸುತ್ತದೆ ಎಂದರು.
ಸಿರಿಧಾನ್ಯ ಸೇವೆನೆ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಯಾವುದೆ ರೋಗ್ಯ ಸುಳಿಯುದಿಲ್ಲ ಮತ್ತು ಕಡಿಮೆ ಖರ್ಚಿನ ಚಿಕಿತ್ಸೆಯಾಗಿದೆ ಮುಂದೆ ಬರುವ ಪೀಳಿಗೆಗೆ ಅರಿವು ಮೂಡಿಸಬೇಕು ಹೆಚ್ಚಿನ ಒತ್ತು ನೀಡಬೇಕು ನಮ್ಮ ಭಾಗದಲ್ಲಿ ಇಂತಹ ಆಸ್ಪತ್ರೆ ಕಟ್ಟಲು ಸರ್ಕಾರದಿಂದ ಸಹಾಯ ಮಾಡುತ್ತೇನೆ ಎಲ್ಲಾ ರೀತಿಯ ಬೇಡಿಕೆಗಳಿಗೆ ಸೌಲ್ಯಭ ನೀಡುತ್ತೇನೆ ಎಂದರು.
ಜಿಲ್ಲಾ ಆಯುಷ ಅಧಿಕಾರಿ ಡಾ.ಗಿರಿಜಾ ಎಸ್.ಯು ಅವರು ಮಾತನಾಡಿ ಆಯುರ್ವೇದ ಚಿಕಿತ್ಸೆ ಬರಿ ಮನುಷ್ಯರಿಗಲ್ಲದೆ ಪ್ರಾಣಿಗಳಿಗೂ ಸಹಾ ಚಿಕಿತ್ಸೆ ನೀಡಲಾಗುತ್ತದೆ ಆಯುರ್ವೇದ ಇಡೀ ವಿಶ್ವಕೆ ಪ್ರಚಾರ ಆಗಬೇಕು ರೋಗಬಾದೆ ತಡಗಟುವುದೇ ಇದರ ಉದ್ದೇಶವಾಗಿದೆ ಆಯುರ್ವೇದ ಬಗ್ಗೆ ಹಲವಾರು ಶಾಲೆಗಳಲ್ಲಿ ತಾಲೂಕುಗಳಲ್ಲಿ ಕ್ಯಾಂಪ್‌ಗಳು ಮಾಡಲಾಗಿದೆ ಕಾರ್ಯಕ್ರಮ ಮೂಲಕ ಅರಿವು ಮೂಡಿಸುವ ಕೆಲಸ ಮಾಡಲಾಗಿದೆ ಎಂದರು.
ಆಯು ಡಾ.ಸುಧಿರ ಕುಳಗೇರಿ ಅವರು ಸ್ವಾಗತಿಸಿದರು ಹಾಗೂ ಡಾ.ಶ್ರೀಶೈಲ ಪಾಟೀಲ ಅವರು ನಿರೂಪಣೆ ನೀಡಿದರು ಡಾ. ಕೆ.ಬಿ.ಬಬಲಾದ ವಂದನಾರ್ಪಣೆ ಮಾಡಿದರು.
ಡಾ.ಸುಧಿರ ಕುಳಗೇರಿ ಅವರು ಸ್ವಾಗತಿಸಿದರು ಹಾಗೂ ಡಾ.ಶ್ರೀಶೈಲ ಪಾಟೀಲ ಅವರು ನಿರೂಪಣೆ ನೀಡಿದರು
ಡಾ. ಕೆ.ಬಿ.ಬಬಲಾದ ವಂದನಾರ್ಪಣೆ ಮಾಡಿದರು.
ಹಿಂಗುಲಾಂಬಿಕಾ ಆಯುರ್ವೇದ ಕಾಲೇಜು ಪ್ರಾಂಶುಪಾಲರು ಡಾ.ಅಲ್ಲಮಪ್ರಭು.ಗುಡಾ, ಬಸವೇಶ್ವರ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರು ಡಾ.ಚನ್ನಮಲ್ಲಿಕಾರ್ಜುನ ದೇವಣಗಾಂವ, ಸಮತಾ ಕಾಲೇಜಿನ ಪ್ರಾಶುಪಾಲರು ಡಾ. ಸೋಮನಾಥ ಹಾಗೂ ಎಲ್ಲಾ ಕಾಲೇಜನ ವಿದ್ಯಾರ್ಥಿಗಳು ಅಂಗನವಾಡಿ ಕಾರ್ಯಕತೆಯರು ಆಯುರ್ವೇದಲ್ಲಿ ಕೆಲಸ ಮಾಡುವ ಸಿಬಂದ್ದಿಗಳು ಉಪಸ್ಥಿತರಿಂದರು.