ಕಾರ್ಮಿಕರ ಏಳಿಗೆಗೆ ಸಂಘಟನೆಗಳು ಕೆಲಸ ಮಾಡಲಿ

0
17

ಸುರಪುರ: ರಾಜ್ಯದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಸರಕಾರ ಅನೇಕ ಯೋಜನೆಗಳನ್ನು ನೀಡಿದ್ದು ಕಟ್ಟಡ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಾರ್ಮಿಕ ನಿರೀಕ್ಷಕ ವಿಜೇಂದ್ರ ಕೆ ತಿಳಿಸಿದರು.

ನಗರದ ಕೆಂಭಾವಿ ರಸ್ತೆಯಲ್ಲಿನ ಕಚೇರಿಯಲ್ಲಿ ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ತಾಲೂಕು ಘಟಕ ಉದ್ಘಾಟಿಸಿ ಮಾತನಾಡಿ,ನಕಲಿ ಕಟ್ಟಡ ಕಾರ್ಮಿಕರಿಂದ ನೈಜ ಕಟ್ಟಡ ಕಾರ್ಮಿಕರಿಗೆ ಸರಿಯಾಗಿ ಸೌಲಭ್ಯ ಸಿಗುತ್ತಿಲ್ಲ ಎನ್ನುವ ಆರೋಪದ ಮಾತುಗಳು ಕೇಳಿ ಬರುತ್ತಿವೆ,ಅದಕ್ಕಾಗಿಯೇ ನಕಲಿ ಕಟ್ಟಡ ಕಾರ್ಮಿಕರ ಕಾರ್ಡ್‍ಗಳನ್ನು ರದ್ದುಗೊಳಿಸಲಾಗುವುದು,ಇದಕ್ಕೆ ತಾವುಗಳು ಕೈ ಜೋಡಿಸುವಂತೆ ಕರೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಅಬಕಾರಿ ಇಲಾಖೆ ಉಪ ನಿರೀಕ್ಷಕಿ ಪೂಜಾ ಖರ್ಗೆ,ಸಂಘದ ಜಿಲ್ಲಾ ಉಸ್ತುವಾರಿ ಗೋಪಾಲ ದೊರೆ,ಗೌರವಾಧ್ಯಕ್ಷ ಶಿವಶರಣಪ್ಪ ಹೆಡಗಿನಾಳ,ಅಧ್ಯಕ್ಷ ಚಂದ್ರಶೇಖರ ಎಲಿಗಾರ,ಬಾಬು ಶಹಾಪುರ,ಅಮರೇಶ ಡಿಯೊ ಉಪಸ್ಥಿತರಿದ್ದರು.

ಸಂಘದ ಪಾದಾಧಿಕಾರಿಗಳಾದ ಉಪಾಧ್ಯಕ್ಷ ಅಮರಪ್ಪ ಹೊನ್ನಳ್ಳಿ,ಪ್ರಧಾನ ಕಾರ್ಯದರ್ಶಿ ಬಸವರಾಜ ಪೂಜಾರಿ,ಖಜಾಂಚಿ ರಾಜು ಕಲಾಲ್,ಕಾರ್ಯದರ್ಶಿ ಚಂದ್ರಾಮಪ್ಪ ಕುಂಬಾರಪೇಟ,ಸಹ ಕಾರ್ಯದರ್ಶಿ ಎಮ್.ಡಿ ಖದಿರ್,ಸಂಚಾಲಕ ಸಿದ್ರಾಮಪ್ಪ ಕರೆಗಾರ,ಸಂಘಟನಾ ಕಾರ್ಯದರ್ಶಿ ರಾಮಯ್ಯ ಯಕ್ತಾಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here