ಕಲಬುರಗಿ ಕಸಾಪ ಅಧ್ಯಕ್ಷರ ಎರಡು ವರ್ಷ ಪೂರೈಕೆ: ಕೃತಿ, ವೆಬಸೈಟ್ ಬಿಡುಗಡೆ

0
151

ಕಲಬುರಗಿ: ನಿತ್ಯ ವಿನೂತನ ಕಾರ್ಯಕ್ರಮಗಳ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಕಲೆ, ಸಾಹಿತ್ಯ, ಸಾಂಸ್ಕøತಿಕ ಮೆರುಗು ಹೆಚ್ಚಿಸುತ್ತಿದೆ. ಉದಯೋನ್ಮುಖ ಬರಹಗಾರರು, ಕವಿ, ಕಲಾವಿದರು, ಸಂಗೀತಗಾರರಿಗೆ ಅವಕಾಶ ಕಲ್ಪಿಸಿ ನಾಡಿಗೆ ಪರಿಚಯಿಸುತ್ತಿರುವ ಕಸಾಪ ದ ಜಿಲ್ಲಾಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡು ಎರಡು ವಷರ್À ಪೂರೈಸಿರುವ ಹಿನ್ನೆಲೆಯಲ್ಲಿ ಈ ತಿಂಗಳ ಕೊನೆಯ ವಾರದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ಸಂಭ್ರಮೋತ್ಸವ ಹಾಗೂ ಎರಡು ವರ್ಷದ ವಿಶೇಷ ಕಾರ್ಯಗಳ ದಾಖಲೀಕರಣದ ಪ್ರತೀಕವಾಗಿ ಪತ್ರಕರ್ತ-ಸಾಹಿತಿ ಡಾ. ಶಿವರಂಜನ್ ಸತ್ಯಂಪೇಟೆ ಅವರ ಸಂಪಾದಕತ್ವದಲ್ಲಿ ಒಂದು ಕೃತಿಯನ್ನೂ ಸಹ ಇದೇ ಸಂದರ್ಭದಲ್ಲಿ ಹೊರತರಲು ನಿರ್ಧರಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ರವಿವಾರ ಜರುಗಿದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾವೈಕ್ಯತೆ, ಸಂಸ್ಕøತಿ ಮತ್ತು ಪರಂಪರೆಗೆ ಹೆಸರುವಾಸಿಯಾದ ಕಲಬುರಗಿ ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ ಸಾಂಸ್ಕøತಿಕ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ವರ್ಗದವರ ಜನರನ್ನು ಒಗ್ಗೂಡಿಸಿಕೊಂಡು ಪರಿಷತ್ತು ನಿರಂತರವಾಗಿ ಶ್ರಮಿಸುತ್ತಿದೆ. ಜತೆಗೆ ಕನ್ನಡ ಭವನದ ಭೌತಿಕ ಅಭಿವೃದ್ಧಿಯೂ ಸಹ ಮಾಡಲಾಗಿದೆ.

Contact Your\'s Advertisement; 9902492681

ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕøತಿ ಮತ್ತು ಜನಪದ ಜತೆಗೆ ಕನ್ನಡ-ಕನ್ನಡಿಗ-ಕರ್ನಾಟಕ ಇವುಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಾಗಿದೆ ಎಂದು ಅವರು ವಿವರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಾದ್ಯಂತ ಹಮ್ಮಿಕೊಂಡು ಬರಲಾಗುತ್ತಿರುವ ವೈವಿದ್ಯಮಯ ಕಾರ್ಯಕ್ರಮಗಳ ಮಾಹಿತಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಜಿಲ್ಲಾ ಘಟಕದಿಂದ ಒಂದು ವೆಬ್‍ಸೈಟ್‍ಯನ್ನು ಅನಾವರಣಗೊಳಿಸಲಾಗುತ್ತಿದ್ದು, ಈ ಮೂಲಕ ಇಲ್ಲಿನ ಕಾರ್ಯಕ್ರಮಗಳು ಇನ್ನಷ್ಟು ಜನಪ್ರಿಯಗೊಳ್ಳಲಿ ಎಂಬ ಆಶಯ ಹೊಂದಿದೆ.

ಸಂಶೋಧಕ ಮುಡುಬಿ ಗುಂಡೇರಾವ ಮಾತನಾಡಿ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಕ್ಷರಶ: ಕನ್ನಡದ ಶಕ್ತಿ ಕೇಂದ್ರವನ್ನಾಗಿದೆ, ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಕನ್ನಡದ ಕೆಲಸ ಮಾಡುವ ನಿಟ್ಟಿನಲ್ಲಿ ಕಂಕಣಬದ್ಧರಾಗಿದ್ದಾರೆ. ಕನ್ನಡ ಭಾಷೆ ಸಂರಕ್ಷಣೆಗೆ ಕಸಾಪ ವಿನೂತನ ಹೆಜ್ಜೆ ಇಟ್ಟಿದೆ. ಇದಕ್ಕೆ ಕನ್ನಡಿಗರಾದ ನಾವೆಲ್ಲರೂ ಬೆಂಬಲಿಸಬೇಕಾಗಿದೆ ಎಂದ ಅವರು, ತೇಗಲತಿಪ್ಪಿ ಅವರು ಅಧ್ಯಕ್ಷರಾಗಿ ಎರಡು ವರ್ಷದ ಈ ಸಂಭ್ರಮೋತ್ಸವ ಕಾರ್ಯಕ್ರಮ ಅಭಿಮಾನೋತ್ಸವದ ರೀತಿಯಲ್ಲಿ ಆಚರಿಸೋಣ ಎಂದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಠಗಿ, ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ಸಾಹಿತಿ ಧರ್ಮಣ್ಣ ಹೆಚ್ ಧನ್ನಿ, ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ಸಿದ್ಧಲಿಂಗ ಬಾಳಿ, ರಾಜೇಂದ್ರ ಮಾಡಬೂಳ, ವಿಶ್ವನಾಥ ತೊಟ್ನಳ್ಳಿ, ಬಿ ಎಂ ಪಾಟೀಲ ಕಲ್ಲೂರ, ಬಾಬುರಾವ ಪಾಟೀಲ, ವಿನೋದಕುಮಾರ ಜೇನವೇರಿ, ಚಂದ್ರಶೇಖರ ಮ್ಯಾಗೇರಿ, ಪ್ರಭವ ಪಟ್ಟಣಕರ್, ಮಲ್ಲಿಕಾರ್ಜುನ ಇಬ್ರಾಹಿಂಪುರ, ಬಸ್ವಂತರಾಯ ಕೋಳಕೂರ ಸೇರಿದಂತೆ ಅನೇಕ ಪದಾಧಿಕಾರಿಗಳು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here