ಶಹಾಪುರ ತಾಲೂಕಿನ ಸಗರ ಗ್ರಾಮ ಆಡಳಿತ ಅಧಿಕಾರಿ ರಮೇಶ್ ರಾಠೋಡ್
ಶಹಾಪುರ : ರೈತರು ಬೆಳೆವಿಮೆ, ಪರಿಹಾರ,ಸಾಲ ಮನ್ನಾ,ಇತರೆ ಸೇರಿದಂತೆ ಸರ್ಕಾರದ ಯಾವುದೇ ಸೌಲಭ್ಯಗಳು ಪಡೆಯಬೇಕಾದರೆ,ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯವಾಗಿ ಜೋಡಿಸಬೇಕೆಂದು ಸಗರ ಗ್ರಾಮ ಆಡಳಿತ ಅಧಿಕಾರಿ ರಮೇಶ ರಾಥೋಡ್ ತಿಳಿಸಿದ್ದಾರೆ.
ಈ ಕುರಿತು ಸರಕಾರ ಹೊಸ ತಂತ್ರಾಂಶ ಅಭಿವೃದ್ದಿ ಪಡಿಸಿದ್ದು, ಅದನ್ನು ರೈತರು ತಮ್ಮ ಮೊಬೈಲ್ ಮೂಲಕ ಅಥವಾ ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರಕ್ರಿಯೆ ಪೂರ್ಣಗೊಳಿಸಬೇಕು,ಆರ್.ಟಿ.ಸಿ.ಗೆ ಆಧಾರ್ ಸಂಖ್ಯೆ ಜೋಡಣೆಗೆ ಉದಾಸೀನ ಮಾಡಿದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಸೌಲಭ್ಯಗಳು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಜಮೀನಿನ ದಾಖಲೆಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವುದರಿಂದ ಜಮೀನಿನ ದಾಖಲೆಗಳು ಮತ್ತಷ್ಟು ಸುರಕ್ಷಿತವಾಗಿರುತ್ತವೆ, ಅಲ್ಲದೆ ಭೂ ದಾಖಲೆ ಪಡೆಯುವುದು ಹಾಗೂ ಸರ್ಕಾರಿ ಯೋಜನೆಗೆ ಅರ್ಜಿ ಸಲ್ಲಿಸಿವುದು ಮತ್ತು ಸಾಲ ಪ್ರಕ್ರಿಯೆ ಸುಲಭವಾಗುತ್ತದೆ,ಆದ್ದರಿಂದ ರೈತರು ಜುಲೈ ತಿಂಗಳ ಅಂತ್ಯದವರೆಗೆ ತಪ್ಪದೇ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿಸಬೇಕೆಂದು ಈ ಮೂಲಕ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.