ಪ್ಯಾಲೆಸ್ತೀನಿಯರ ಹತ್ಯೆ ಖಂಡಿಸಿ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ

0
49

ಕಲಬುರಗಿ: ಪ್ಯಾಲೆಸ್ತೀನಿಯರ ಮೇಲೆ ಇಸ್ರಾಯಿಲ್ ನಿರಂತರವಾಗಿ ನಡೆಸುತ್ತಿರುವ ನರಮೇಧವನ್ನು ನಿಲ್ಲಿಸಬೇಕೆಂದು, ಪ್ಯಾಲೆಸ್ತೀನಿಯರ ಉಳಿವಿಗಾಗಿ ಮತ್ತು ಶಾಂತಿಗೆ ಒತ್ತಾಯಿಸಿ ಕಲಬುರಗಿಯ ಎಲ್ಲಾ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕಳೆದ ಒಂದು ತಿಂಗಳಿಂದ ಇಸ್ರೇಲ್ ದೇಶವು ಗಾಜಾ ಪಟ್ಟಿಯಲ್ಲಿರುವ ಪ್ಯಾಲೇಸ್ತಾನಿ ಮಕ್ಕಳು, ಮಹಿಳೆಯರು ಹಾಗೂ ಹಿರಿಯರ ಮೇಲೆ ಅಮಾನುಷ ಕೃತ್ಯ ಎಸಗುತ್ತಿದೆ ಎಂದು ಕಲಬುರಗಿ ಜಿಲ್ಲೆಯ ಎಲ್ಲಾ ಮುಸ್ಲಿಂ ಸಂಘಟನೆಗಳು ಖಂಡಿಸಿದರು.

Contact Your\'s Advertisement; 9902492681

 

ಇಸ್ರೇಲ್ ದೇಶದ ಪ್ರಧಾನಿ ವಿರುದ್ದ ಘೋಷಣೆ ಕೂಗಿ, ಕೂಡಲೇ ಗಡಿ ಉಲ್ಲಂಘನೆ ವಿರುದ್ಧ ವಿಶ್ವಸಂಸ್ಥೆ ಮದ್ಯಪ್ರವೇಶಿಸಿ ಕ್ರಮಕೈಗೊಳ್ಳಬೇಕು. ಯುದ್ಧ ನಿಲ್ಲಿಸಿ ಶಾಂತಿ ಕಾಪಾಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ಮಂತ್ರಿಗೆ ಮನವಿ ಮಾಡಿದರು.

ಬಳಿಕ ಮಾತನಾಡಿದ ಪ್ರತಿಭಟನಾಕರಾರು, ಕಳೆದ ಒಂದು ತಿಂಗಳಿಂದ ಇಸ್ರೇಲ್ ದೇಶ ಪ್ಯಾಲೇಸ್ತಾನಿ ಅಮಾಯಕರ ಮೇಲೆ ದಾಳಿ ಮಾಡುತ್ತಿದೆ. ಮಕ್ಕಳು, ಮಹಿಳೆಯರು ಮತ್ತು ಆಸ್ಪತ್ರೆಯ ಮೇಲೂ ಬಾಂಬ್ ದಾಳಿ ನಡೆಸುತ್ತಿದ್ದಾರೆ. ಅಲ್ಲದೇ, ಮಸೀದಿ, ನಿರಾಶ್ರಿತ ಕೇಂದ್ರದ ಮೇಲೂ ಇಸ್ರೇಲ್ ದೇಶದ ಸೈನಿಕರು ಅಮಾನವೀಯ ಕೃತ್ಯ ನಡೆಸಿದ್ದಾರೆ. ಹೀಗಾಗಿ ಕೂಡಲೇ ಯುದ್ಧ ನಿಲ್ಲಿಸಿ ಶಾಂತಿ ನೆಲಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಆಫ್ಜಲ್ ಮಹ್ಮದ್, ಮೋಸಿನ, ನೂರ್ ಮೌಲಾನ, ಅಬ್ದುಲ್ ಗೋಲೆ, ಮುಬೀನ್ ಅಹ್ಮದ್, ಅಝೀಜುಲ್ಲಾಹ್, ಅಲೀಮ್ ಇಲಾಹಿ, ಹಿರಿಯ ಪತ್ರಕರ್ತ ಅಜಿಜ್ಜುಲ್ಲಾ ಸರ್ಮಸ್ತ್, ಫಜಲ್ ತಿಮಾಪುರ್, ನಾಸಿರ್ ಅಹ್ಮದ್, ಮಹ್ಮದ್ ಜಮೀರ್, ಅಬ್ದುಲ್ ರಶೀದ್ ಪಲ್ಲಮ್ ಸೇರಿ ಅನೇಕ ಮಹಿಳೆಯರು, ಯುವಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here