ವೇದಾ ಶಾಲೆಯಲ್ಲಿ ವಸ್ತು ಪ್ರದರ್ಶನ

0
19

ಕಲಬುರಗಿ: ನಗರದ ಹೊರವಲಯದ ಸೇಡಂ ರಸ್ತೆಯ ಆಜಾದಪೂರ ಸಮೀಪದಲ್ಲಿರುವ ವೇದಾ ಪಬ್ಲಿಕ್ ಸಿಬಿಎಸ್‍ಸಿ ಸ್ಕೂಲ್‍ನಲ್ಲಿ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ ಜರುಗಿತು.

ವಸ್ತು ಪ್ರದರ್ಶನದಲ್ಲಿ ಕರ್ನಾಟಕ ಒನ್‍ದಿಂದ ಆಧಾರ್ ಕಾರ್ಡ್ ನೋಂದಣಿ, ಆಟೋಟಗಳ ವಿಭಾಗ, ಆಹಾರ ವಿಭಾಗದಲ್ಲಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯತೆ ಮೆರೆದರು. ಅದೇ ರೀತಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಇಸ್ರೋ ಸಂಸ್ಥೆಯ ಚಂದ್ರಯಾನ-3ರ ಯಶಸ್ವಿ ಪ್ರಾತ್ಯಕ್ಷಿತೆ ಮಾದರಿ, ಕನ್ನಡ, ಇಂಗ್ಲಿಷ್, ಹಿಂದಿ, ಸಮಾಜವಿಜ್ಞಾನ, ವಿಜ್ಞಾನ, ಹಿಂದಿ ಮತ್ತು ಪರಿಸರ ಬಗ್ಗೆ ಪ್ರಾತ್ಯಕ್ಷಿತೆ ಮಾದರಿ ಸಿದ್ಧಪಡಿಸಿ ಇತರೆ ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ, ಪ್ರಪಂಚದ ಜ್ಞಾನ ಉಣಬಡಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ ಡಾ. ಎಸ್.ಎಸ್. ಚೆಟ್ಟಿ, ನವದೆಹಲಿಯ ಐಎಸ್‍ಟಿ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯ ಡಾ. ಎಸ್.ಜಿ. ಮಲಶೆಟ್ಟಿ ಅವಲೋಕಿಸಿ, ವಿದ್ಯಾರ್ಥಿಗಳ ಜತೆ ಸಮಾಲೋಚನೆ ನಡೆಸಿದರು. ವೇದಾ ಪಬ್ಲಿಕ್ ಶಾಲೆಯ ಮುಖ್ಯಸ್ಥ ರವಿ. ಮಲಶೆಟ್ಟಿ, ಶಾಲೆಯ ಪ್ರಾಂಶುಪಾಲ ಆರತಿ ಆರ್. ಮಲಶೆಟ್ಟಿ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here