ನಾಳೆ ಅಂಗವಿಕಲರಿಗೆ ಜಿಲ್ಲಾಮಟ್ಟದ ಕೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆ

0
36

ಕಲಬುರಗಿ: ಡಿಸೆಂಬರ್ 3 ರಂದು ವಿಶ್ವ ಅಂಗವಿಕಲರ ದಿನಾಚರಣೆ ನಿಮಿತ್ತ ನಾಳೆ ನವೆಂಬರ್ 18 ರಂದು ನಗರದ ಚಂದ್ರಶೇಖರ್ ಪಾಟೀಲ್ ಕೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕ್ರೀಡೆ ಮತ್ತು ಸಂಸ್ಕೃತಿಕ ಸ್ಪರ್ಧೆಗಳು ಆಯೋಜಿಸಲಾಗಿದೆ ಎಂದು ಅಂಗವಿಕಲರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಸಾದಿಕ್ ಹುಸೇನ್ ಖಾನ್ ಅವರು ತಿಳಿಸಿದ್ದಾರೆ.

ಸ್ಪರ್ಧೆಗಳು ವಿವರ: 18 ವರ್ಷ ಮೇಲ್ಪಟ ದೈಹಿಕ ಅಂಗವಿಕಲರ ವಿಭಾಗದಲ್ಲಿ 100 ಮೀಟರ್ ಓಟ, ಗುಂಡು ಎಸೆತ ಮತ್ತು ಬುಕೆಟ್ ನಲ್ಲಿ ರಿಂಗ್ ಹಾಕುವ ಸ್ಪರ್ಧೆ. ದೃಷ್ಠಿದೋಷವುಳ್ಳವರಿಗೆ 50 ಮೀಟರ್ ಓಟ, ಗುಂಡು ಎಸೆತ, ಮ್ಯೂಜಿಕಲ್ ಚೇರ್ ಸ್ಪರ್ಧೆ, ಶ್ರವಣದೋಷುಳ್ಳವರಿಗೆ 100 ಮೀಟರ್ ಓಟ, ಗುಂಡು ಎಸೆತ ಮತ್ತು ಉದ್ದ ಜಿಗಿತ ಸ್ಪರ್ಧೆ.

Contact Your\'s Advertisement; 9902492681

ಸ್ಪರ್ಧೆಗಳು ವಿವರ: 6-17 ವರ್ಷದೊಳಗಿನ ಅಂಗವಿಕಲರಿಗೆ 100 ಮೀಟರ್ ಓಟ, ಗುಂಡು ಎಸೆತ ಮತ್ತು ಥ್ರೋಬಾಲ್ ಸ್ಪರ್ಧೆ. ದೃಷ್ಠಿದೋಷವುಳ್ಳವರಿಗೆ 50 ಮೀಟರ್ ಅಂಧರ ಕೆನ ನಡಿಗೆ, ಗುಂಡು ಎಸೆತ ಮತ್ತು ಕೆರೆದಡ ಸ್ಪರ್ಧೆ. ಶ್ರವಣದೋಷುಳ್ಳವರಿಗೆ 100 ಮೀಟರ್ ಓಟ, ಗುಂಡು ಎಸೆತ ಮತ್ತು ಉದ್ದ ಜಿಗಿತ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು, ಗಾಯನ, ಏಕಪಾತ್ರ ಅಭಿನಯ ಸ್ಪರ್ಧೆಗಳು ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕ್ರೀಡೆಗಳಲ್ಲಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುತ್ತದೆ. ಆಸಕ್ತರು ಈ ಸ್ಪರ್ಧೆಗಳಲ್ಲಿ ಭಾಗವಹಿಸಬೇಕೆಂದು ಕೋರಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08472235222 ಪ್ರಕಾಶ್ ಜಾಧವ್ ಮೊ: 9972563646 ಹಾಗೂ ಪ್ರಕಾಶ್ ಜಗತಿ 99845961947 ಕಚೇರಿ ವೇಳೆ ಕರೆ ಮಾಡಿ ಮಾಹಿತಿ ಪಡೆಯಬಹುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here