ಉಜ್ವಲ ಭವಿಷ್ಯಕ್ಕೆ ಕೌಶಲ್ಯಗಳು ಅವಶ್ಯ : ಅಲಿ ರಜಾ ಮೂಸ್ವಿ

0
194

ಕಲಬುರಗಿ: ಒಳ್ಳೆಯ ಅಂಕಗಳು ಒಂದು ಹಂತದ ವರೆಗೆ ಸಹಕಾರಿ. ಆದರೆ ವೃತ್ತಿಯಲ್ಲಿ ಅತ್ಯುನ್ನತ ಸ್ಥಾನ ಪಡೆಯಬೇಕಾದರೆ ಕೌಶಲ್ಯಗಳು ಅವಶ್ಯ ಎಂದು ಕೆಬಿಎನ ವಿವಿ ಉಪ ಕುಲಪತಿ ಪ್ರೊ ಅಲಿ ರಜಾ ಮೂಸ್ವಿ ನುಡಿದರು.

ಅವರು ಶನಿವಾರ ಖಾಜಾ ಬಂದಾನವಾಜ ವಿಶ್ವ ವಿದ್ಯಾಲಯದಲ್ಲಿ ಮೆಡಿಕಲ ಮತ್ತು ಇಂಜಿನಿಯರಿಂಗ ವಿದ್ಯಾರ್ಥಿಗಳಿಗೆ ಆಯೋಜಿಸಿದ ವೃತ್ತಿ ಸಮಾಲೋಚನೆ ಮತ್ತು ಮಾರ್ಗದರ್ಶನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

Contact Your\'s Advertisement; 9902492681

ಈ ಕಾರ್ಯಕ್ರಮದಲ್ಲಿ 1000ಕ್ಕೂ ಹೆಚ್ಚು ಹಾಜರಿದ್ದ ವಿದ್ಯಾರ್ಥಿಗಳನ್ನು ನೋಡಿ ಆನಂದ ಪಟ್ಟರು. ಶಿಕ್ಷಣ, ಕಲಿಕೆ ಅಂಕಗಳ ಜೊತೆ ಜೊತೆಗೆ ಕೌ ಶಲ್ಯಗಳ ತರಬೇತಿ ಕೊಡುವ ಪ್ರಯತ್ನ ಖಾಜಾ ಬಂದಾನವಾಜ ವಿವಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ಇಂತಹ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶೈಕ್ಷಣಿಕ ಜ್ಞಾನದ ಜೊತೆಗೆ ವೃತ್ತಿ ಮಾರ್ಗದರ್ಶನಗಳು ಸಂಪೂರ್ಣ ಬೆಳವಣಿಗೆಗೆ ಪೂರಕ ಎಂದು ಅಭಿಪ್ರಾಯ ಪಟ್ಟರು.

ಇಂಜಿನಿಯರಿಂಗ ವಿದ್ಯಾರ್ಥಿಗಳಿಗೆ v2 ಕೌಶಲ್ಯ ವರ್ಧನೆ ಮತ್ತು ಸಂಪನ್ಮೂಲ ಕೇಂದ್ರದ ನಿರ್ದೇಶಕ ವಿವೇಕ ಹಿರೇಮಠ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಜಯ ಸಿಂಘ ಠಾಕುರ ಎರಡು ಗೋಷ್ಠಿಗಳನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ವಿಡಿಯೋ, ಪ್ರಶ್ನೆ, ಸಹಿ ಉತ್ತರಗಳಿಗೆ ಬಹುಮಾನ, ಸ್ಫೂರ್ತಿದಾಯಕ ಮಾತು, ಸಂದರ್ಶನವನ್ನು ಎದುರಿಸುವ ಬಗೆ ಮುಂತಾದ ತಂತ್ರಗಳನ್ನು ತಿಳಿ ಹೇಳಿದರು.

ಮೆಡಿಕಲ್ ವಿದ್ಯಾರ್ಥಿಗಳಿಗೆ ಬ್ರೈಟ ಮೆಡಿಕಲ ಸಂಸ್ಥೆಯ ನಿರ್ದೇಶಕ ಡಾ ತಮೀಮ ಸೈಫ ಮತ್ತು ಭಾಟಿಯ ಮೆಡಿಕಲ ತರಬೇತಿ ಸಂಸ್ಥೆಯಲ್ಲಿ ಸೂಕ್ಷ್ಮ ಜೀವವಿಜ್ಞಾನ ಪ್ರಾಧ್ಯಾಪಕ ಡಾ ಅಬ್ದುಲ ನಸೀರ ಪಿಜಿ ಪ್ರವೇಶ ಪರೀಕ್ಷೆ ಸಿದ್ಧತೆಯ ಬಗ್ಗೆ ಮಾರ್ಗದರ್ಶನ ನೀಡಿದರು.

ಐ ಕ್ಯೂಎಸಿ ನಿರ್ದೇಶಕ ಡಾ ಬಷೀರ್ ಅಹ್ಮದ್ ಕಾರ್ಯಕ್ರಮದ ವರದಿಯನ್ನು ಪ್ರಸ್ತುತ ಪಡಿಸಿದರು. ಬಯೋಕೆಮಿಸ್ಟ್ರಿ ವಿಭಾಗದ ಪ್ರಾದ್ಯಾಪಕಿ ಸಬಾ ನಜ್ನೀನ ಖಾನ ವಂದಿಸಿದರು. ಡಾ ಇರ್ಫಾನ ಅಲಿ ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ಡಾ ರಾಜಶ್ರೀ ಪಾಲದಿ, ಡಾ ಸೈಯಿದ ನಜಿರ್ ಅಹ್ಮದ, ಡಾ ಜಮಾ ಮೂಸ್ವಿ, ಡಾ ಜಿನಥ್, ಡಾ ಬಿಲಾಲ ಅಹ್ಮದ, ಡಾ ಗುರುಪ್ರಸಾದ, ಡಾ ಜಿಬ್ರಾನ, ಡಾ ಜೈನಬ, ಡಾ ಚೇತನಾ, ಡಾ ಫಹೀಮ, ಡಾ ಮೊಹಸೀನ, ಡಾ ಘಝಲಾ, ಡಾ ಅಫ್ರಾ, ಡಾ ಹುಮೆರಾ, ಡಾ ಹುಮೆರಾ, ಡಾ ಶಹಾಭಾಜ,ಡಾ ಸುಷ್ಮಾ, ಡಾ ಸಾರಾ, ಡಾ ತನಿಯಾತ ಮುಂತಾದವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here