ಉತ್ತರ ಪ್ರದೇಶದ ಅತ್ಯಾಚಾರ ಘಟನೆಗೆ ಸುರಪುರ ಬಂದ್ ಮಾಡಿ ಖಂಡನೆ

0
105

ಸುರಪುರ: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ದಲಿತ ಸಮುದಾಯದ ಯುವತಿ ಮನಿಷಾ ವಾಲ್ಮೀಕಿ ಮೇಲೆ ನಡೆದ ಅತ್ಯಾಚಾರ ಹಾಗು ಚಿತ್ರಹಿಂಸೆಯಿಂದ ಮೃತಪಟ್ಟ ಘಟನೆಯನ್ನು ಖಂಡಿಸಿ ಸಾಮೂಹಿಕ ಸಂಘಟನೆಗಳ ವೇದಿಕೆ ಕರೆ ನೀಡಿದ್ದ ಸುರಪುರ ಬಂದ್ ಶಾಂತಿಯುತವಾಗಿ ಯಶಸ್ವಿಯಾಯಿತು. ಬೆಳಿಗ್ಗೆಯಿಂದಲೂ ಎಲ್ಲಾ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲಸಿದರು,ವಾಹನಗಳ ಓಡಾಟವು ಕೆಲ ಕಾಲ ಬಂದಾಗಿತ್ತು.

ಬೆಳಿಗ್ಗೆ ೧೦ ಗಂಟೆಯ ವೇಳೆಗೆ ಬಸ್ ನಿಲ್ದಾಣದ ಬಳಿಯ ಡಾ:ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಸೇರಿದ ಸಾವಿರಾರು ಜನ ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಅತ್ಯಾಚಾರಿಗಳ ಹಾಗು ಉತ್ತರ ಪ್ರದೇಶದ ಸರಕಾರ ಮತ್ತು ಮುಖ್ಯಮಂತ್ರಿ ವಿರುಧ್ಧ ಘೋಷಣೆಗಳನ್ನು ಕೂಗಿದರು.ನಂತರ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ಸುರಮಾರು ಎರಡು ಗಂಟೆಗಳಿಗು ಹೆಚ್ಚು ಕಾಲ ಬೀದರ್ ಬೆಂಗಳೂರು ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಉತ್ತರ ಪ್ರದೇಶದಲ್ಲಿ ನಿರಂತರವಾಗಿ ದಲಿತರ ಮೇಲೆ ದಬ್ಬಾಳಿಕೆ ಅನ್ಯಾಯ ಅತ್ಯಾಚಾರ ಕೊಲೆಗಳು ನಡೆಯುತ್ತಿವೆ.ಇದರ ಮುಂದುವರೆದ ಭಾಗವಾಗಿ ಈಗ ದಲಿತ ಸಮುದಾಯದ ಯುವತಿ ಮನಿಷಾ ವಾಲ್ಮೀಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈಯಲಾಗಿದೆ.ಆದರೆ ಅಲ್ಲಿಯ ಸರಕಾರ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳದೆ ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಅಲ್ಲದೆ ದಲಿತರ ವಿರೋಧಿಯಾಗಿರುವ ಉತ್ತರ ಪ್ರದೇಶ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಬೇಕು ಮತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಗ್ರೇಡ-ತಹಸೀಲ್ದಾರ ಸೂಫಿಯಾ ಸುಲ್ತಾನ ಮೂಲಕ ಸಲ್ಲಿಸಿದರು.ಬಂದ್ ಅಂಗವಾಗಿ ಪಿಐ ಎಸ್.ಎಮ್.ಪಾಟೀಲ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿತ್ತು.

ಪ್ರತಿಭಟನೆಯಲ್ಲಿ ಸಾಮೂಹಿಕ ಸಂಘಟನೆಗಳ ಪ್ರಮುಖರಾದ ರಾಜಾ ರಾಮಪ್ಪ ನಾಯಕ (ಜೆಜಿ) ವೆಂಕೋಬ ದೊರೆ ರಮೇಶ ದೊರೆ ಆಲ್ದಾಳ ವೆಂಕಟೇಶ ಬೇಟೆಗಾರ ದೇವಿಂದ್ರಪ್ಪ ಪತ್ತಾರ ವೆಂಕಟೇಶ ಹೊಸ್ಮನಿ ಉಸ್ತಾದ ವಜಾಹತ್ ಹುಸೇನ್ ಇಕ್ಬಾಲ್ ಒಂಟಿ ನಾಗಣ್ಣ ಕಲ್ಲದೇವನಹಳ್ಳಿ ರಾಹುಲ್ ಹುಲಿಮನಿ ಮಾಳಪ್ಪ ಕಿರದಹಳ್ಳಿ ಭೀಮರಾಯ ಸಿಂಧಗೇರಿ ಶಿವಲಿಂಗ ಹಸನಾಪುರ ಅಯ್ಯಣ್ಣ ಹಾಲಬಾವಿ ರಂಗಣ್ಣ ಬುಂಕಲದೊಡ್ಡಿ ಮೌನೇಶ ಬೋವಿ ರಾಜು ಕಟ್ಟಿಮನಿ ಶಿವರಾಜ ಕಲಕೇರಿ ಮಲ್ಲು ದಂಡಿನ್ ವೆಂಕಟೇಶ ನಾಯಕ ಬೈರಿಮಡ್ಡಿ ರವಿ ನಾಯಕ ಬೈರಿಮಡ್ಡಿ ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ ಕೃಷ್ಣಮೂರ್ತಿ ಕೈದಾಳ ಸುರೇಖಾ ಕುಲಕರ್ಣಿ ಗೋಪಾಲ ತಳವಾರ ಮಲ್ಲಪ್ಪ ಹುಬ್ಬಳ್ಳಿ ನಿಂಗಪ್ಪ ಬಿಜಾಸಪುರ ಹಣಮಂತ ನಾಯಕ ಅಮ್ಮಾಪುರ ಖಾಜಾ ಅಜ್ಮೀರ್ ಕೆಎಮ್ ಪಟೇಲ್ ಹುಸೇನಿ ಜೀವಣಗಿ ಸೇರಿದಂತೆ ಸಾವಿರಾರು ಜನರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here