ಕಲಬುರಗಿ: ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಜಿಲ್ಲಾಡಳಿತ ಸಭಾಂಗಣದಲ್ಲಿ ಜಿಲ್ಕಾಧಿಕಾರಿ ಫೌಜಿಯಾ ತರನ್ನುಮ ಅವರ ಅಧ್ಯಕ್ಷತೆಯಲ್ಲಿ ಜರುಗಿತ್ತು
ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಭೌತಿಕ ಆರ್ಥಿಕ ಗುರಿಗಳು ನಿಗದಿತ ಸಮಯದಲ್ಲಿ ಅಧಿಕಾರಿಗಳು ಮಾಡಲು ವೈದ್ಯಾಧಿಕಾರಿಗಳಿಗೆ ಸೂಚಿಸಿದರು
ಸಭೆಯಲ್ಲಿ ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಸಭೆಯ ಹಾಗೂ ಆಡಳಿತ ವೈದ್ಯಾಧಿಕಾರಿಗಳು ಪ್ರಗತಿಯಲ್ಲಿ ಯಾವುದೇ ತರಹ ಸಾಧನೆ ಮಾಡದ ಅಧಿಕಾರಿಗಳು ಮುಂದಿನ. ದಿನಗಳಲ್ಲಿ ಸುಧಾರಣೆ ಮಾಡಬೇಕು ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು
ಮುಂದಿನ ದಿನಗಳಲ್ಲಿ ಎಬಿ ಅರ್ ಕೆ , ಆಯುಷ್ ಮಾನ್ , ಕಾಯಕಲ್ಪ, ಲಕ್ಷ್ಯಾ, ಎನ್ಫಾಸ್ , ತಾಯಿ ಮರಣದ ಬಗ್ಗೆ ಚರ್ಚಿಸಿ ಖಾಸಗಿ ಆಸ್ಪತ್ರೆ ಸೂಕ್ತ ವಾದ ಎಚ್ಚರಿಕೆ ವಹಿಸಲು ತಾಯಿ ಮರಣ ಅಗದಂತೆ ವೈದ್ಯಾಧಿಕಾರಗಳು ಕ್ರಮವಹಿಸಬೇಕು
ಪ್ರಗತಿ ಸುಧಾರಣೆ ಮಾಡಿಕೊಂಡು ಮುಂಬರುವ ದಿನಗಳಲ್ಲಿ ಒಳ್ಳೆಯ ಪ್ರಗತಿಯೊಂದಿಗೆ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿಗಳು ಎಲ್ಲಾ ವೈದ್ಯಾಧಿಕಾರಿಗಳಿಗೆ ತಿಳಿಸಿದರು.ನಿಗದಿತ ಸಮಯಕ್ಕೆ ತಮ್ಮ ,ಆರೋಗ್ಯ ಸಂಸ್ಥೆಗಳಿಗೆ ಹಾಗೂ ಆಸ್ಪತ್ರೆಗಳಿಗೆ ಸರಿಯಾಗಿ ಹೋಗಬೇಕು ಒಂದು ವೇಳೆ ತಪ್ಪು ಕಂಡು ಬಂದಲ್ಲಿ ಶಿಸ್ತಿನ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವಾಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಡಿ ಹೆಚ್ ಓ ಡಾ|| ರಾಜಶೇಖರ ಮಾಲಿ, ಜಿಲ್ಲಾ ಸರ್ಜನ್ ಡಾ|| ಅಂಬಾರಾಯ ರುದ್ರವಾಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು,
ವೈದ್ಯಾಧಿಕಾರಿಗಳು. ಇತರೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು