ಕಲಬುರಗಿ: 2019ರ ಜ.10 ರಂದು ಬೆಳಗಿನ ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ರಸ್ತೆ ಮೇಲೆ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿದ ಇಬ್ಬರು ಅಪರಾಧಿಗಳಿಗೆ ಇಲ್ಲಿನ 3 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಘೋಷಿಸಿ 40 ಸಾವಿರ ರೂ.ದಂಡ ವಿಧಿಸಿ ಆದೇಶಿಸಿದೆ.
ಜಗತ್ ವೃತದ ಸಂತೋಷ ಲಕ್ಷ್ಮಿಕಾಂತಯ್ಯ ಸ್ವಾಮಿ (39) ಮತ್ತು ಅಕ್ಕಲಕೋಟ್ ಜಿಲ್ಲೆಯ ಮೈಂದರಗಿ ನಿವಾಸಿ ನಾಗರಾಜ ಸಿದ್ದಲಿಂಗಯ್ಯ ಬಜಾರಮಠ(22) ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳು. ಮ್ಯಾನೇಜರ್ ಕೆಲಸದಿಂದ ತೆಗೆದುಹಾಕಿ ವೈಯಕ್ತಿಕವಾಗಿ ಹೀಯಾಳಿಸಲಾಗಿದೆ ಎಂಬ ಉದ್ದೇಶದಿಂದ ಬೈಕ್ ಮೇಲೆ ಬಂದು ಮಾರಕಾಸ್ತ್ರದಿಂದ ಇರಿದು ಮಲ್ಲಿಕಾರ್ಜುನ ಎಂಬುವವರ ಹತ್ಯೆ ಮಾಡಿದ್ದರು.
ಈ ಬಗ್ಗೆ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಲಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. 3 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ಶಿಕ್ಷೆಯ ಪ್ರಮಾಣ ಪ್ರಕಟಿಸಿ, ಕೊಲೆ ಆರೋಪಿಗಳು ಪರಾರಿಯಾಗಲು ಸಹಕರಿಸಿದ ಶರಣಬಸಪ್ಪ ಎಂಬಾತನಿಗೆ 5 ವರ್ಷ ಶಿಕ್ಷೆ ವಿಧಿಸಿದ್ದಾರೆ.
ಸರಕಾರದ ಪರವಾಗಿ 3 ನೇ ಅಪರ ಸರಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ಅವರು ವಾದ ಮಂಡಿಸಿದ್ದರು.