ಕಲಬುರಗಿ: ಪಟಾಕಿ ಕಂಪನಿಗಳು ಪವಿತ್ರ ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರಾನಿನ ಹಾಳೆಯಿಂದ ಯಾರಿಸಿದ ಪಟಾಕಿಗಳು ಮಾರಾಟ ಮಾಡುತ್ತಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಅನಾಮಿಕ ಕಂಪನಿ ಮತ್ತು ಮಾರಾಟಗಾರ ಅಂಗಡಿ ಮೇಲೆ ಪ್ರಕರಣ ದಾಖಲಾಗಿದೆ.
ಶುಕ್ರವಾರ ನಗರದ ಸೂಪರ್ ಮಾರ್ಕೆಟ್ ನ ಅಂಗಡಿ ಪೂಜಾ ಕಾರ್ಯಕ್ರಮದಲ್ಲಿ ಪಟಾಕಿ ಸಿಡಿಸಲಾಗಿರುವ ತುಣುಕುಗಳಲ್ಲಿ ಕುರಾನ್ ಗ್ರಂಥದ ಆಯಾತ್ (ಶ್ಲೋಕಗಳು) ಇರುವುದು ಕಂಡುಬಂದಿದೆ. ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಪಟಾಕಿ ತಯಾರಿಸಿದ ಕಂಪನಿ ಈ ವಿಕೃತ ಕೃತ್ಯ ನಡೆಸಿದೆ ಎಂದು ಮುಸ್ಲಿಂ ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಡಿಸಿದ ಪಟಾಕಿಗಳ ತುಣುಕುಗಳು ನೀಡಿ ಖಮರ ಎಂಬುವವರು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.