ಸೇಡಂ, ನ.25; ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ರಾಜ್ಯಮಟ್ಟದ `ಅಮ್ಮ ಪ್ರಶಸ್ತಿ ಮತ್ತು ಅಮ್ಮ ಗೌರವ ಪುರಸ್ಕಾರ ಸಮಾರಂಭವು ನ. 26 ರಂದು ಸಂಜೆ 5.30 ಕ್ಕೆ ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ತಿಳಿಸಿದ್ದಾರೆ.
ನಾಲವಾರ ಶ್ರೀ ಕೋರಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೂಜ್ಯ ಡಾ.ಶ್ರೀ ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಹರಿಹರ ಎರೆಹೊಸಳ್ಳಿಯ ರೆಡ್ಡಿ ಗುರುಪೀಠದ ಪೂಜ್ಯ ಶ್ರೀ ವೇಮನಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು.
ಉಭಯ ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ಡಾ.ಶರಣಪ್ರಕಾಶ ಪಾಟೀಲ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ಧರಾಮಯ್ಯ. ಶಾಸನ ತಜ್ಞರಾದ ಡಾ.ದೇವರಕೊಂಡಾರೆಡ್ಡಿ ಬೆಂಗಳೂರು ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕನ್ನಡ ಪ್ರಾಧ್ಯಾಪಕ ಡಾ.ವಿಕ್ರಮ ವಿಸಾಜಿ ಅವರು ಭಾಗವಹಿಸುವರು.
ಕೆ.ಪಿ.ಮೃತ್ಯುಂಜಯ, ಚೈತ್ರಾ ಶಿವಯೋಗಿಮಠ, ದಯಾ ಗಂಗನಘಟ್ಟ, ಕೃಷ್ಣನಾಯಕ, ಸಂತೋಷಕುಮಾರ ಮೆಹಂದಳೆ, ಡಾ.ಸಿ. ಚಂದ್ರಪ್ಪ, ಡಾ.ಮಿರ್ಜಾ ಬಷೀರ್, ಸುಚಿತ್ರಾ ಹೆಗಡೆ, ನಾಗೇಶನಾಯಕ, ಡಾ.ಸ್ವಾಮಿರಾವ ಕುಲಕರ್ಣಿ ಇವರಿಗೆ ಅಮ್ಮ ಪ್ರಶಸ್ತಿ ಲಭಿಸಿದ್ದು, ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಸತ್ಕಾರ ಮತ್ತು ಈ ನೆಲದ ಸಿರಿಧಾನ್ಯ ತೊಗರಿ ಬೇಳೆ ಒಳಗೊಂಡಿರುತ್ತದೆ. `ಅಮ್ಮ ಗೌರವ’ ಪುರಸ್ಕಾರಕ್ಕೆ ಡಾ.ಓಂಪ್ರಕಾಶ ಪಾಟೀಲ ಊಡಗಿ, ನರಸಿಂಗರಾವ ಪಾಟೀಲ ಚಾಂಗಲೇರ, ಎನ್.ಶೇಖರರೆಡ್ಡಿ ಬೆಂಗಳುರು, ಶಶಿಕಲಾ ಮಕ್ತಾಲ್ ಯಾದಗಿರಿ ಮತ್ತು ಶೇಖ್ ಮಹೆಬೂಬ ಸೇಡಂ ಭಾಜನರಾಗಿದ್ದಾರೆ. ನಿವೃತ್ತ ಮೇಷ್ಟ್ರು ದಿ.ನಾಗಪ್ಪ ಮಾಸ್ಟರ್ ಅವರ ಸ್ಮರಣಾರ್ಥ ಇಬ್ಬರು ಹೆಣ್ಣುಮಕ್ಕಳಿಗೆ ಸ್ವಾವಲಂಬಿ ಬದುಕಿಗಾಗಿ ಎರಡು ಹೊಲಿಗೆ ಮಷಿನ್‍ಗಳನ್ನು ವಿತರಿಸಲಾಗುವುದು. ಕಲಬುರಗಿಯ ಸುಕಿ ಸಾಂಸ್ಕøತಿಕ ತಂಡದಿಂದ ಅಮ್ಮನ ಹಾಡುಗಳ ಗಾಯನ ನಡೆಯಲಿದೆ ಎಂದು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ತಿಳಿಸಿದ್ದಾರೆ.