ಬೀದರ್; ಡಾ. ಬಾಬಾಸಾಹೇಬ ಅಂಬೇ ಡ್ಕರ್ ನೇತೃತ್ವದ ಸಮಿತಿಯು, ವಿಶ್ವದ ಎಲ್ಲ ರಾಷ್ಟ್ರಗಳ ಸಂವಿ ಧಾನಗಳನ್ನು ಗಹನವಾಗಿ ಅಧ್ಯಯನ ಮಾಡಿ, ಅವುಗಳ ಲ್ಲಿನ ಉಪಯೋಗಿ ಅಂಶ ಗಳನ್ನು ಆಳವಡಿಸಿ ನಮ್ಮ ದೇಶದ ಕರಡು ಸಂವಿಧಾನ ವನ್ನು ಸಿದ್ಧಪಡಿಸಿತ್ತು. ನಮ್ಮ ರಾಷ್ಟ್ರದ ಸಂಸತ್ತು ದಿನಾಂಕ 26.11.1949 ರಂದು ಅದನ್ನು ಅಂಗೀಕರಿಸಿತ್ತು. ಸಂಸತ್ತಿನ ಅನುಮೋದನೆಯ ನಂತರ ನಮ್ಮ ಸಂವಿಧಾನವನ್ನು 26.1.1950 ರಂದು ಜಾರಿಗೆ ತರಲಾಗಿತ್ತು. ಅದ್ದರಿಂದ ಪರಿಪೂರ್ಣವಾದ ನಮ್ಮ ರಾಷ್ಟ್ರದ ಸಂವಿಧಾನವನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾ ಗಿದೆ ಎಂದು ಪಶವೈದ್ಯಕೀಯ ವಿವಿ ಯ ನಿವೃತ್ತ ಅಧಿಕಾರಿ ವೀರ ಭದ್ರಪ್ಪ ಉಪ್ಪಿನ್ ರವರು ಅಭಿಪ್ರಾಯ ಪಟ್ಟರು.
ಅವರು ಇಂದು ಬೀದರ್ ನಗರದ ಬರೀದ್ ಶಾಹಿ ಉದ್ಯಾನದಲ್ಲಿ ಸಂವಿಧಾನ ದಿನಾಚರಣೆಯಲ್ಲಿ ಮಾತ ನಾಡುತ್ತಿದ್ದರು. ಮುಂದುವರೆದು ಮಾತ ನಾಡುತ್ತಾ, ನಮ್ಮ ಸಂವಿ ಧಾನವು ಗಟ್ಟಿಯಾಗಿರು ವುದರಿಂದಲೇ ನಮ್ಮ ದೇಶದ ಪ್ರಜಾ ಪ್ರಭುತ್ವವು ಇತರರಿಗೆ ಮಾದರಿಯಾಗಿದೆ. ಪ್ರಜೆಗಳ, ಪ್ರಜೆಗಳಿಗಾಗಿ, ಪ್ರಜೆಗಳಿಂದ ನಡೆಯುವ ಯಾವುದೇ ರಾಜಕೀಯ ಪಕ್ಷದ ಸರ್ಕಾರ ಗಳು ರಾಷ್ಟ್ರದ ಅಭಿವೃದ್ಧಿಗೆ ವಿಶೇಷ ಪೂರಕವಾಗಿ ಕೆಲಸ ಮಾಡು ವುದಕ್ಕೆ ಕಾರಣ ನಮ್ಮ ಸಂವಿಧಾನವೇ ಆಗಿದೆ ಎಂದು ನುಡಿದರು.
ಯೋಗ ಮೇಲ್ವಿ ಚಾರಕ ಹಿರಿಯ ನ್ಯಾಯವಾದಿ ಗಳಾದ ಗಂಗಪ್ಪ ಸಾವಳೆ ಯವರು ಮಾತನಾಡಿ, ರಾಜಕಾರಣಿಗಳು, ಅಧಿ ಕಾರಿಗಳು, ವ್ಯಾಪಾರಸ್ಥರು ಸೇರಿದಂತೆ ದೇಶದ ಸಮಸ್ತ ನಾಗರಿಕರ ಮೇಲೆ ರಾಷ್ಟ್ರದ ಸಂವಿಧಾನದನ್ವಯ ಜಾರಿ ಯಲ್ಲಿರುವ ಕಾಯ್ದೆ – ಕಾನೂನು ಗಳು ಅನ್ವಯವಾಗುವುದರಿಂ ದ, ಸಂವಿಧಾನವು ದೇಶದ ಆಡಳಿತದ ಗೀತಾ, ಬೈಬಲ್, ಕುರಾನ್ ನಂತಿದೆ ಎಂದು ಅಭಿಪ್ರಾಯ ಪಟ್ಟರು. “”ಸರ್ವರಿಗೂ ಸಂವೀಧಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಸಂಜು ಶೀಲವಂತ, ರಮೇಶ್ ಕಪಲಾಪೂರ್, ಮಲ್ಲಿಕಾರ್ಜುನ್ ಪಾಟೀಲ್, ಅಶೋಕ್ ಶೀಲವಂತ, ಈಶ್ವರ್ ಕನೇರಿ, ನಂದಕುಮಾರ್, ಚಂದ್ರಶೇಖರ್ ದೇವಣಿ, ಅರುಣಾ, ಸುಮಿತ್ರಾ, ವಿಜಯಲಕ್ಷ್ಮೀ, ಖುಷಿ, ಅಭಿಷೇಕ್, ಸಂಜು, ವೀರಶೆಟ್ಟಿ ಮುಂತಾದವರು ಭಾಗವಹಿಸಿದ್ದರು.