ಸಂವಿಧಾನ ಸಮರ್ಪಣಾ ದಿನ: ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ

0
44

ಬೆಂಗಳೂರು/ಜಿಗಣಿ: ಗಂಧದನಾಡು ಜನಪರ ವೇದಿಕೆ-ಗಜವೇ ಬೆಂಗಳೂರು ನಗರ ಜಿಲ್ಲಾ ಘಟಕದ ವತಿಯಿಂದ ಭಾರತದ ಸಂವಿಧಾನ ಸಮರ್ಪಣಾ ದಿನದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜಿಗಣಿ ಪುರಸಭಾ ವ್ಯಾಪ್ತಿಯ ಬಂಡೆನಲ್ಲಸಂದ್ರದ ಬುದ್ಧರ ಪ್ರತಿಮೆಯ(ಹೋರಾಟಗಾರ ಜಿಗಣಿ ಶಂಕರ್ ಸ್ಥಾಪಿತ) ಬಳಿ “ಸಂವಿಧಾನ ಪೀಠಿಕೆಯ ಓದಿನ ಕಾರ್ಯಕ್ರಮ”ವನ್ನು ಆಯೋಜಿಸಲಾಗಿತ್ತು.

ಗಂಧದನಾಡು ಜನಪರ ವೇದಿಕೆ-ಗಜವೇ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಸ್ವಾಭಿಮಾನಿ ಸತೀಶ್ ನೇತೃತ್ವದ ಕಾರ್ಯಕ್ರಮದಲ್ಲಿ ಬದುಕು ಕಮ್ಯುನಿಟಿ ಕಾಲೇಜಿನ ನಿರ್ದೇಶಕ ಮುರಳಿ ಮೋಹನ್ ಕಾಟಿ ನೆರೆದಿದ್ದ ಎಲ್ಲರಿಗೂ ಸಂವಿಧಾನ ಪೀಠಿಕೆಯನ್ನು ಓದಿ ಹೇಳಿ ಕೊಟ್ಟರು.

Contact Your\'s Advertisement; 9902492681

ಈ ಸರಳ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ವಕೀಲರು/ಹೋರಾಟಗಾರ ಪುರುಷೋತ್ತಮ್, ಗಜವೇ ಸಂಸ್ಥಾಪಕ ಅಧ್ಯಕ್ಷರಾದ ವಿಜಯರಾಮ, ಗಜವೇ ರಾಜ್ಯ ಕಾರ್ಯದರ್ಶಿ ನಿಸರ್ಗ ದೇವರಾಜ್ ನಾಯ್ಕ, ರಾಜ್ಯ ಸಹ-ಕಾರ್ಯದರ್ಶಿ ಜಗದೀಶ್ ಅರಸು, ಸ್ಥಳಿಯ ಯುವ ಮುಖಂಡ ಜಿಮ್ ಮಂಜು, ಗಜವೇ ಆನೇಕಲ್ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷ ತಿಮ್ಮರಾಯಪ್ಪ, ಪ್ರಧಾನ ಕಾರ್ಯದರ್ಶಿ ಕೌಶಿಕ್ ರೆಡ್ಡಿ, ಬೆಂಗಳೂರು ದ.ವಿ.ಕ್ಷೇತ್ರದ ಅರ್ಜುನ್, ಗ್ರಾಮದ ಯುವ ಮುಖಂಡರುಗಳಾದ ಸುರೇಶ್ ರೆಡ್ಡಿ, ಬೊಮ್ಮಸಂದ್ರ ವೆಂಕಟೇಶ್, ಮಂಜಪ್ಪ, ದ್ಯಾವಸಂದ್ರದ ನಾರಾಯಣಸ್ವಾಮಿ ಕೆ. ವಿ., ಮಂಜುನಾಥ್ ವಿ. ಮಂಜು, ಬಾನು ಎಸ್, ಶೋಭಿತ, ಲಕ್ಷ್ಮಿ ಎಸ್, ವಿಕಾಸಿನಿ, ಸಾಹಿತ್ಯ ಸೇರಿದಂತೆ ಅಂಬೇಡ್ಕರ್ ಅನುಯಾಯಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here