371 ಜೆ ರಚನಾತ್ಮಕ ಜಾರಿಗಾಗಿ ದುಂಡು ಮೇಜಿನ ಸಭೆ ಡಿಸೆಂಬರ್ 3 ರಂದು

0
35

ಕಲಬುರಗಿ: 371ನೇ ಜೇ. ಕಲಂ ಜಾರಿಯಾಗಿ ದಶಕ ಕಳೆದಿರುವ ಹಿನ್ನೆಲೆಯಲ್ಲಿ ಕಲ್ಯಾಣದ ರಚನಾತ್ಮಕ ಪ್ರಗತಿಯ ಬಗ್ಗೆ ಮಹತ್ವದ ದುಂಡು ಮೇಜಿನ ಸಭೆ ಕರೆಯಲಾಗಿದ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಸೆಂಬರ್  3 ರಂದು ರವಿವಾರ ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಕಲಬುರಗಿ ನಗರದ ಹಿಂದಿ ಪ್ರಚಾರ ಸಭಾದಲ್ಲಿ ಕಲ್ಯಾಣ ಕರ್ನಾಟಕದ ಪರಿಣಿತ ತಜ್ಞರ,ಚಿಂತಕರ, ಬುದ್ಧಿಜೀವಿಗಳ ಹಾಗೂ ಸಮಿತಿಯ ಕ್ರಿಯಾ ಸದಸ್ಯರುಗಳ ಮಹತ್ವದ ದುಂಡು ಮೇಜಿನ ಸಭೆಯನ್ನು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಸುದೀರ್ಘ ಹೋರಾಟದ ಫಲ ಸ್ವರೂಪ ಮತ್ತು ರಾಜಕೀಯ ಇಚ್ಛಾಶಕ್ತಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಸಂವಿಧಾನದ 371ನೇ ಜೇ ಕಲಂ ತಿದ್ದುಪಡಿಯಾಗಿ ಜಾರಿಗೆ ಬಂದು ಒಂದು ದಶಕ ಕಳೆದಿರುವ ಹಿನ್ನೆಲೆಯಲ್ಲಿ ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ಮತ್ತು ಕಲ್ಯಾಣದ ರಚನಾತ್ಮಕ ಪ್ರಗತಿಯ ವಿಷಯಗಳು ಒಳಗೊಂಡಂತೆ ಚರ್ಚೆ ನಡೆಯಲಿದ್ದು, ಈ ಮಹತ್ವದ ದುಂಡು ಮೇಜಿನ ಸಭೆಗೆ ಕಲ್ಯಾಣದ ಪರಿಣಿತರು, ಚಿಂತಕರು, ಬುದ್ಧಿಜೀವಿಗಳು, ಸಮಿತಿಯ ಕ್ರಿಯಾ ಸದಸ್ಯರು ತಪ್ಪದೆ ಹಾಜರಾಗಲು ಕೊರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here