ಕಲಬುರಗಿ: ಮಾದಿಗರ ವಿವಿಧ ಬೇಡಿಕೆಗಳನ್ನು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕೆಂದು ಡಾ.ಬಾಬು ಜಗಜೀವನರಾಮ್ ಅಭಿವೃದ್ಧಿ ಮತ್ತು ಹೋರಾಟ ಸಮಿತಿಯ ಅಧ್ಯಕ್ಷ ರಾಜು ಎಸ್. ಕಟ್ಟಿಮನಿ ಅವರು ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಆಹಾರ ಮತ್ತು ನಾಗರೀಕ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಮಾದಿಗ ಬಹುದಿನಗಳ ಬೇಡಿಕೆಯನ್ನು ಸದನದಲ್ಲಿ ಪ್ರಸ್ತಾಪಿಸಬೇಕು, ಭಾರತ ದೇಶದ ಉಪ ಪ್ರಧಾನಮಂತಿಯಾಗಿದ್ದ ಡಾ: ಬಾಬು ಜಗಜೀವನರಾಮ್ ರವರ ಏಪ್ರಿಲ್ 5ರ ಜಯಂತೋತ್ಸವ ದಿನದಂದು ಸರ್ಕಾರಿ ರಜೆ ಘೋಷಣೆ ಮಾಡಬೇಕು ಹಾಗೂ ಬಾಬೂಜಿಯವರ ಜೀವನ ಚರಿತ್ರೆ, ಸರ್ಕಾರದ ಪಠ್ಯ ಪುಸ್ತಕದಲ್ಲಿ ಅಳವಡಿಸಲು ಸದನದಲ್ಲಿ ಪ್ರಸ್ತಾಪಿಸಿ, ಕರ್ನಾಟಕ ಆದಿ ಜಾಂಭವ ಅಭಿವೃದ್ದಿ ನಿಗಮ ಹಾಗೂ ಬಾಬು ಜಗಜೀವನರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ (ಲಿಡ್ಕರ್) ಎರಡು ನಿಗಮಕ್ಕೆ ಅನುದಾನವನ್ನು ಕಡಿಮೆ ನೀಡಿರುತ್ತೀರಿ ದಲಿತರ ಪರವಾಗಿ ಕಾಂಗ್ರೇಸ್ ಸರ್ಕಾರ ಇದೆ ಎಂದು ಹೇಳುತ್ತೀರಿ ಆದರೆ ನಿಗಮಗಳಿಗೆ ಕಡಿಮೆ ಅನುದಾನವನ್ನು ನೀಡಿರುತ್ತೀರಿ,
ತಮ್ಮ ಸರ್ಕಾರ ದಲಿತರ ಪರವಾಗಿ ಇದ್ದರೆ ಎಲ್ಲಾ ನಿಗಮಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಹಾಗೂ ನಿಗಮದಲ್ಲಿ ಗುರಿಗಳನ್ನು ಹೆಚ್ಚಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಭೀಮಣ್ಣ ಟಿ.ಬಿಲ್ಲವ್, ಸಚೀನ್ ಆರ್ ಕಟ್ಟಿಮನಿ, ಚಂದಪ್ಪ ಎಲ್ ಕಟ್ಟಿಮನಿ, ಸಂಜು ಎನ್.ಕಟ್ಟಿಮನಿ ಇದ್ದರು.