ವೇಮನರ ದಾರ್ಶನಿಕರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಚನ್ನಬಸಪ್ಪ ಕೊಲ್ಲೂರ್

0
9

ಶಹಾಬಾದ : ಜೀವನದ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳನ್ನು ಒಟ್ಟುಗೂಡಿಸಿ ಅನುಸರಣೆ ಮಾಡುವುದೇ ಸಂಸ್ಕಾರ. ಈ ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ವೇಮನರಂತಹ ಮಹನೀಯರ ಸಂದೇಶಗಳನ್ನು ದಿನನಿತ್ಯ ಪಾಲಿಸಬೇಕು ಎಂದು ಅನುದಾನಿತ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಚನ್ನಬಸಪ್ಪ ಕೊಲ್ಲೂರ್ ಹೇಳಿದರು.

ಅವರು ಬುಧವಾರ ನಗರದ ರಾಷ್ಟ್ರಭಾಷಾ ಶಿಕ್ಷಣ ಸಮಿತಿಯಲ್ಲಿ ಆಯೋಜಿಸಲಾದ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಬದುಕಿನ ಎಲ್ಲಾ ಅನುಭವಗಳನ್ನು ಅನುಭವಿಸಿ, ಅದರ ಮೂಲ ಸತ್ಯಾಸತ್ಯತೆ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಿದ ಪ್ರತಿಯೊಬ್ಬರು ಇಂದು ದಾರ್ಶನಿಕರಾಗಿದ್ದಾರೆ. ಜಾತಿ, ಸಮುದಾಯ, ಸಂಕುಚಿತ ಮನೋಭಾವದಿಂದ ಹೊರಬಂದು ದಾರ್ಶನಿಕರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶಿಕ್ಷಕ ಬಾಬಾಸಾಹೇಬ ಸಾಳುಂಕೆ ಮಾತನಾಡಿ, ಶರಣರ ಹಾಗೇ ಅತಿ ಹೆಚ್ಚು ಸಂಶೋಧನೆಗೆ ಒಳಪಟ್ಟವರಲ್ಲಿ ವೇಮನರು ಕೂಡ ಒಬ್ಬರು. ಉತ್ತರ ಕರ್ನಾಟಕದ ಖ್ಯಾತ ಸಂಶೋಧಕ ಪ್ರಕಾರ ವೇಮನರು ೧೪೧೨-೧೪೮೪ ರವರೆಗಿನ ಜೀವನ ನಡೆಸಿದರು ಎಂಬ ಉಲ್ಲೇಖವಿದೆ. ವೇಮನರ ವಚನಗಳು ಹಿಂದಿ, ಇಂಗ್ಲೀ? ಭಾ?ಗಳಿಗೆಲ್ಲಾ ತರ್ಜುಮೆಗೊಂಡಿವೆ. ನೆರೆ ರಾ?ಗಳಾದ ಇಂಗ್ಲೇಂಡ್ ಮತ್ತು ಫ್ರಾನ್ಸ್ ರಾ?ಗಳ ಗ್ರಂಥಾಲಯಗಳಲ್ಲಿ ವೇಮನ ವಚನಗಳ ಸಂಗ್ರಹವಿರುವುದು ಹೆಮ್ಮೆಯ ಸಂಗತಿ ಎಂದರು.

ಮುಖ್ಯಗುರುಗಳಾದ ದಮಯಂತಿ ಸೂರ್ಯವಂಶಿ,ಅನಿತಾ ಶರ್ಮಾ,ಸುಧೀರ ಕುಲಕರ್ಣಿ,ಮಹೇಶ್ವರಿ ಗುಳಿಗಿ, ಗೀತಾ,ರಾಜೇಶ್ವರಿ ಮಹೇಶ,ಮಲ್ಲಿನಾಥ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here