ಕಲಬುರಗಿ: ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ರಾಯಚೂರು ಕೃಷಿ ಮಹಾವಿದ್ಯಾಲಯ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಚೌಡಾಪುರದಲ್ಲಿ RAWE (ಗ್ರಾಮೀಣ ಕೃಷಿ ಕೆಲಸದ ಅನುಭವ) ಕಾರ್ಯಕ್ರಮ ಮತ್ತು ವಿವಿಧ ರೋಗಗಳ ಮಾಹಿತಿ ಮತ್ತು ಅದನ್ನು ನಿಯಂತ್ರಿಸುವ ಮಾರ್ಗಗಳನ್ನು ರೈತರಿಗೆ ನೀಡಲು ಸಮಗ್ರ ರೋಗ ನಿರ್ವಹಣೆ ತರಬೇತಿ ಕಾರ್ಯಕ್ರಮ ಜರುಗಿತು.
ಈ ವೇಳೆ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ರೋಗ ವಿಜ್ಞಾನಿ ಡಾ.ಜಹೀರ್ ಅಹ್ಮದ್ ಅವರು ಸಮಗ್ರ ರೋಗ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಪ್ರಮುಖ ರೋಗಗಳೆಂದರೆ ತೊಗರಿ ಒಣ ಬೇರು ಕೊಳೆ ಮತ್ತು ಫೈಟೊಪ್‌ಥೋರಾ ಕೊಳೆ ರೋಗ, ಹತ್ತಿ ಕೆಂಪಾಗುವುದು ಮತ್ತು ಕಬ್ಬಿನಲ್ಲಿ ಸುಳಿಯಲ್ಲಿ ರೋಗ . ರಾಸಾಯನಿಕ ಹಾಗೂ ಪರಿಸರ ಸ್ನೇಹಿ ವಿಧಾನಗಳಿ೦ದ ರೋಗಗಳ ನಿರ್ವಹಣೆಯನ್ನು ವಿವರಿಸಿದರು ಜೊತೆಗೆ ಕಾರ್ಯದಲ್ಲಿನ ಸಮಸ್ಯೆಗಳನ್ನು ಎದುರಿಸಲು ಶೂನ್ಯ ವೆಚ್ಚದ ವಿಧಾನಗಳ ಬಗ್ಗೆ ಅವರು ಕಲಿಸಿದ್ದಾರೆ. ರಾಸಾಯನಿಕಗಳನ್ನು ಸಿಂಪಡಿಸಲು ಡ್ರೊನ್‌ಗಳ ಬಳಕೆ, ಬೀಜ ಬಿತ್ತನೆಯ ಮೊದಲು ಬೀಜ ಉರಚಾರ ಮತ್ತು ರಾಸಾಯನಿಕಗಳ ಸುರಕ್ಷಿತ ಬಳಕೆಯನ್ನು ವರ್ಮಿಕಾಂಪೋಸ್ಟ್ ಘಟಕಗಳನ್ನು ಸ್ಥಾಪಿಸಲು ಅವರು ಯುವಕರನ್ನು ಪ್ರೇರೇಪಿಸಿದರು.
ಕಾರ್ಯಕ್ರಮದಲ್ಲಿ ಡಾ ನಿಂಗಪ್ಪ ಸರ್, ಡಾ ಮಂಜುನಾಥ ನಾಟೇಕರ್ ಉಪಸ್ಥಿತರಿದ್ದರು. ರೈತರಿಂದ ಉತ್ತಮ ಸ್ಪಂದನೆ ದೊರೆತಿದೆ.ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಚೌಡಾಪುರದಲ್ಲಿ ಇಂತಹ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕೃಷಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.