ಅಂಗವಿಕಲರಿಗಿರಲಿ ಅನುದಾನದ ಅರಿವು: ಮುತ್ತಣ್ಣ | ಬುದಿಕಿಗೆ ಅನುಕಂಪಕಿಂತ ಆತ್ಮಸ್ತೈರ್ಯ ಮುಖ್ಯ

0
15

ವಾಡಿ: ಅಂಗವಿಕಲರ ಬದುಕು ಅರಳಲು ಸರ್ಕಾರ ಪ್ರತಿ ಗ್ರಾಪಂ, ಪುರಸಭೆ, ನಗರಸಭೆ, ತಾಪಂ, ಜಿಪಂ, ಮಹಾನಗರಸಭೆಗಳ ಒಟ್ಟು ಅನುದಾನದಲ್ಲಿ ಶೇ.5 ರಷ್ಟು ವಿಶೇಷ ಅನುದಾನ ಮೀಸಲಿಟ್ಟು ಕಾರ್ಯಕ್ರಮಗಳನ್ನು ನೀಡುತ್ತಿದೆ. ಇದರ ಅರಿವು ಅಂಗವಿಕಲಿರಿಗೆ ಇರಬೇಕು ಎಂದು ಪುರಸಭೆ ಸಮುದಾಯ ಸಂಘಟನಾಧಿಕಾರಿ ಮುತ್ತಣ್ಣ ಭಂಡಾರಿ ಹೇಳಿದರು.

ಪಟ್ಟಣದಲ್ಲಿ ವಿಕಲಚೇತನರ ಕ್ಷೇಯೋಭಿವೃದ್ಧಿ ಸಂಘ ಹಾಗೂ ಪುರಸಭೆ ಸಹಯೋದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ದೇಹದ ಊನದೊಂದಿಗೆ ಜನ್ಮ ಪಡೆದ ವಿಕಲಚೇತನರ ಬದುಕು ನರಕವಾಗುವುದನ್ನು ತಪ್ಪಿಸುವ ಹಾಗೂ ಸ್ವಾಭೀಮಾನದ ಬದುಕು ಕಲ್ಪಿಸುವ ಮಹತ್ವದ ಉದ್ದೇಶದಿಂದ ಎಸ್‍ಎಫ್‍ಸಿ, ನಗರೋತ್ಥಾನ ಮತ್ತು ಸ್ಥಳೀಯ ಸಂಸ್ಥೆಗಳ ಪ್ರತಿಯೊಂದು ಯೋಜನೆಯಲ್ಲಿ ಅಂಗವಿಕಲರಿಗಾಗಿ ಶೇ.5 ಮೀಸಲಾತಿ ಅನುದಾನ ಲಭ್ಯವಿರುತ್ತದೆ. ಈ ಅನುದಾನ ಬಳಕೆ ಮಾಡಿಕೊಳ್ಳಲು ಅಂಗವಿಕಲ ಸಂಘ ಮುಂದಾಗಬೇಕು. ಕ್ರೀಯಾಯೋಜನೆ ರೂಪಿಸುವ ಮುನ್ನವೇ ಬೇಡಿಕೆಗಳನ್ನು ಸಲ್ಲಿಸಿದರೆ ಅಗತ್ಯ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದರು.

Contact Your\'s Advertisement; 9902492681

ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ವಿಕಲಚೇತನರ ಮೇಲೆ ಸಮಾಜ ಅನುಕಂಪ ತೋರಿಸುವುದರಲ್ಲಿ ಅರ್ಥವಿಲ್ಲ. ಬದಲಿಗೆ ಅವರಲ್ಲಿ ಆತ್ಮಸ್ತೈರ್ಯವನ್ನು ತುಂಬಿ ಅವರಲ್ಲಿನ ಪ್ರತಿಭೆಯನ್ನು ಹೊರತರಬೇಕು. ಆ ಮೂಲಕ ಅವರಿಗೆ ಸ್ವಾಭೀಮಾನದಿಂದ ಬದುಕಲು ಅನುಕೂಲತೆಗಳನ್ನು ಕಲ್ಪಿಸಬೇಕು. ಅರ್ಹ ಅಂಗವಿಕಲರಿಗೆ ಸಿಗಬೇಕಾದ ಸರ್ಕಾರದ ಸೌಲಭ್ಯಗಳು ನಕಲಿ ಪ್ರಮಾಣಪತ್ರ ಪಡೆದವರ ಪಾಲಾಗುತ್ತಿವೆ. ಈ ನಕಲಿ ಅಂಗವಿಕರಿಂದಾಗಿ ನಿಜವಾದ ಫಲಾನುಭವಿಗಳು ಯೋಜನಾ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ಕುರಿತು ಸರ್ಕಾರ ಎಚ್ಚೆತ್ತುಕೊಂಡು ನಕಲಿ ಅಂಗವಿಕಲ ಪ್ರಮಾಣಪತ್ರ ಪಡೆದವರನ್ನು ಪತ್ತೆ ಮಾಡಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪುರಸಭೆಯ ಪುನರ್‍ವಸತಿ ಕಾರ್ಯಕರ್ತ ಸೂರ್ಯಕಾಂತ ಕೊಂಕನಳ್ಳಿ, ಪುರಸಭೆ ಮಾಜಿ ಸದಸ್ಯ, ಕಾಂಗ್ರೆಸ್ ಯುವ ಮುಖಂಡ ಶರಣು ನಾಟೀಕಾರ, ಮುಸ್ಲಿಂ ಸಮಾಜದ ಮುಖಂಡ ಫೆರೋಜ್ ಖಾನ್ ಮಾತನಾಡಿದರು. ವಿಕಲಚೇತನರ ಕ್ಷೇಯೋಭಿವೃದ್ಧಿ ಸಂಘದ ಅಧ್ಯಕ್ಷ ಮಹ್ಮದ್ ರಫೀಕ್, ಪ್ರಧಾನ ಕಾರ್ಯದರ್ಶಿ ಆನಂದ ರಾಠೋಡ, ಉಪಾಧ್ಯಕ್ಷ ಅಂಬೂ, ಸಹ ಕಾರ್ಯದರ್ಶಿ ಶಶಿಕುಮಾರ ದೊಡ್ಡಮನಿ, ಕೋಶಾಧ್ಯಕ್ಷ ಭಾಸ್ಕರ್ ಮೂಲಗೇಕರ, ಮುಖಂಡರಾದ ಕಾಶೀನಾಥ ಶೆಟಗಾರ, ನಾರಾಯಣ ರಾಠೋಡ, ಸುಭಾಷ ಬಾಳಚಡಿ, ಅರ್ಜುನ ಕಟ್ಟಿಮನಿ, ವಿಜಯಕುಮಾರ ಲಾಡ್ಲಾಪುರ, ಶರಣಪ್ಪ ಕರದಳ್ಳಿ, ಅಂಬ್ರೀಶ ಭಿಮನಳ್ಳಿ, ಮಾರುತಿ ಹರನಾಳ, ಮೋಹನ ಚವ್ಹಾಣ, ಸುಧಾಕರ ಗಾಯಕವಾಡ, ಮೋಹನ ರಾಠೋಡ, ರಾಘವೇಂದ್ರ ಸೇರಿದಂತೆ ವಿವಿಧ ಬಡಾವಣೆಗಳ ಅಂಗವಿಕಲರು ಪಾಲ್ಗೊಂಡಿದ್ದರು. ಬಸವರಾಜ ಕಾಟಮಳ್ಳಿ ನಿರೂಪಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here