ವಾಡಿ: ಪಟ್ಟಣದಲ್ಲಿ ಪಂಚರಾಜ್ಯಗಳ ಚುನಾವಣೆ ಫಲಿತಾಂಶದಿಂದ ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯದೊಂದಿಗೆ ಅಧಿಕಾರ ಹಿಡಿಯುತ್ತಿರುವುದರಿಂದ ಬಿಜೆಪಿ ಮುಖಂಡರ ಸಂಭ್ರಮಾಚರಣೆ ಜರುಗಿತು.
ಫಲಿತಾಂಶ ಹೂರಬೀಳುತ್ತಿದಂತೆ ಪಟ್ಟಣದ ಬಿಜೆಪಿ ಕಛೇರಿ ಹತ್ತಿರ ಇರುವ ಹನುಮಾನ ಮಂದಿರದ ಮುಂಭಾಗದಲ್ಲಿ ಜಮಾಯಿಸಿದ ಮುಖಂಡರು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ,ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಬಿಎಸ್ ಯಡಿಯೂರಪ್ಪನವರ ಬೃಹತ್ ಕಟೌಟ ಗಳಿಗೆ ಹಾಲಿನ ಅಭಿಷೇಕ ಮಾಡಿ,ತೆಂಗುಗಳನ್ನು ಒಡೆದು, ಪಟಾಕಿ ಸಿಡಿಸಿ,ಸಿಹಿ ಹಂಚಿ ಡೋಲಿ ಬಾಜದೊಂದಿಗೆ ಹೆಜ್ಜೆಹಾಕಿ ಸಂಭ್ರಮಿಸಿದರು.
ತಾಲೂಕ ಎಸ್ ಸಿ ಮೂರ್ಚಾ ಅಧ್ಯಕ್ಷ ರಾಜು ಮುಕ್ಕಣ್ಣ, ಪುರಸಭೆ ಮಾಜಿ ವಿರೋಧ ಪಕ್ಷದ ನಾಯಕ ಭೀಮಶಾ ಜಿರೋಳ್ಳಿ, ಹಿರಿಯ ಮುಖಂಡ ಸಿದ್ದಣ್ಣ ಕಲ್ಲಶೆಟ್ಟಿ ಹಾಗೂ ಶಕ್ತಿ ಕೇಂದ್ರ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿದರು.
ತಾಲ್ಲೂಕು ಮಂಡಲ ಉಪಾಧ್ಯಕ್ಷ ಗಿರಿಮಲ್ಲಪ್ಪ ಕಟ್ಟಿಮನಿ,ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ,ಮುಖಂಡರಾದ ವಿಠಲ ನಾಯಕ,ರಾಮಚಂದ್ರ ರಡ್ಡಿ,ಹರಿ ಗಲಾಂಡೆ,ಅಶೋಕ ಹರನಾಳ, ಶರಣಗೌಡ ಚಾಮನೂರ,ಕಿಶನ ಜಾಧವ,ಅಂಬದಾಸ ಜಾಧವ,ರಿಚರ್ಡ್ ಮಾರೆಡ್ಡಿ,ಯಮನಪ್ಪ ನವನಳ್ಳಿ, ರವಿ ಕಾರಬಾರಿ,ಅಶೋಕ ಪವಾರ,ಪ್ರಮೂದ ಚೊಪಡೆ, ಜಯಂತ ಪವಾರ,ಕುಮಾರ ಜಾಧವ,ಪ್ರೇಮ ರಾಠೋಡ, ಅಯ್ಯಣ್ಣ ದಂಡೋತಿ,ದೇವೇಂದ್ರ ಪಂಚಾಳ,ಮಹಾಲಿಂಗ ಶೆಳ್ಳಗಿ, ಕೃಷ್ಣ ಮೂರ್ತಿ ,ನಿರ್ಮಲ ಇಂಡಿ,ಯಂಕಮ್ಮ ಗೌಡಗಾಂವ,ಸತೀಶ ಸಾವಳಗಿ ಬನಶಂಕರಮೂಸ್ಟುರ, ಮಹೇಂದ್ರ ಕುಮಾರ ಪುಜಾರಿ, ರಾಜಶೇಖರ ಧೂಪದ,ಬಸವರಾಜ ಪಗಡಿಕರ, ಮಲ್ಲಿಕಾರ್ಜುನ ಸಾತಖೇಡ,ದತ್ತಾತ್ರೇಯ ಗೌಡಗಾಂವ, ವಿಶ್ವರಾಧ್ಯ ತಳವಾರ,ಮಲ್ಲಿಕಾರ್ಜುನ ಧರ್ಮಾಪುರ ಆನಂದ ಇಂಗಳಗಿ,ಪರಮೇಶ್ವರ ಚೊಪಡೆ,ಆನಂದ ರಾಠೋಡ,ಶಿವಾಜಿ ಸೂರ್ವಂಶಿ,ಭದ್ರಯ್ಯ ಸ್ವಾಮಿ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡು ಸಂಭ್ರಮಿಸಿದರು.