ವಾಡಿ ಪುರಸಭೆ ಚುನಾವಣೆ; ಬಿಜೆಪಿಯಿಂದ ಪೂರ್ವಭಾವಿ ಸಭೆ

0
146

ವಾಡಿ; ಪಟ್ಟಣದಲ್ಲಿ ಪುರಸಭೆ ಚುನಾವಣೆ ಅಧಿಸೂಚನೆ ಬಂದಿರುವುದರಿಂದ ಬಿಜೆಪಿ ಕಛೇರಿಯಲ್ಲಿ ಪಕ್ಷದ ಮುಖಂಡರ, ವಾರ್ಡ್ ಹಾಗೂ ಬೂತ್ ಮಟ್ಟದ ಪ್ರತಿನಿಧಿಗಳ ಸಭೆಯು ಜರಗಿತು.

ಪಟ್ಟಣದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ ಈ ಸಭೆಯು ಪುರಸಭೆ ಚುನಾವಣೆಯ ಪೂರ್ವಬಾವಿ ಸಿದ್ದತೆಯ ಸಭೆಯಾಗಿದ್ದು , ಎಲ್ಲಾ ವಾರ್ಡುಗಳಲ್ಲಿ ಹಲವು ಅಭ್ಯರ್ಥಿಗಳು ಆಕಾಂಕ್ಷಿಗಳಿದ್ದು ಪಕ್ಷದ ನಿಷ್ಟೆ ಹಾಗೂ ಸೇವೆಯನ್ನು ಒಳಗೊಂಡ ಅರ್ಹ ಅಭ್ಯರ್ಥಿಗಳಿಗೆ ಅವಕಾಶವನ್ನು ನೀಡಲಾಗುವುದು.ಅವರನ್ನು ಪಕ್ಷದ ಎಲ್ಲಾ ಹಿರಿಯಯರ ಮಾರ್ಗದರ್ಶನದಲ್ಲಿ, ದಿವಂಗತ ವಾಲ್ಮೀಕ ನಾಯಕರ ಆಸೆಯಂತೆ ಪುರಸಭೆ ಅಧಿಕಾರ‌ ಹಿಡಿಯುವಲ್ಲಿ ನಾವು ಶ್ರಮಿಸಬೇಕಾಗಿದೆ. ಚುನಾವಣೆಗೆ ಸ್ಪರ್ದಿಸುವ ಆಕಾಂಕ್ಷಿಗಳು ಪಕ್ಷದ ಅಭ್ಯರ್ಥಿತನದ ಅರ್ಜಿಗಳನ್ನು ಕಚೇರಿಯಿಂದ ಪಡಕೊಳ್ಳತಕ್ಕದ್ದು ಎಂದು ಹೇಳಿದರು.

Contact Your\'s Advertisement; 9902492681

ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ ವಾಡಿಯಲ್ಲಿ ಬಿಜೆಪಿ ಬಲಿಷ್ಠ ವಾಗಿ ನೆಲೆಯೂರಲು ನಮ್ಮ
ವಾಲ್ಮೀಕ‌ ನಾಯಕರೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವುದರ ಫಲವಾಗಿದೆ. ಈ ಪುರಸಭೆಯಲ್ಲಿ ಅಧಿಕಾರಕ್ಕೇರುವ ಮುಖಾಂತರ ಅದರ ಫಲವನ್ನು ನಮ್ಮರು ಪಡೆಯಬೇಕಾಗಿದೆ.ಸೂಕ್ತವಾದ ಚುನಾವಣೆಯ ತಂತ್ರಗಾರಿಕೆ ಮೂಲಕ,ಪಟ್ಟಣ ಜನರ ಸಮಗ್ರ‌ ಕಲ್ಯಾಣಕ್ಕಾಗಿ, ವಾಡಿ ಪಟ್ಟಣ ರಾಜ್ಯದಲ್ಲಿ ಮಾದರಿ ಪಟ್ಟಣ ಮಾಡುವ ನಮ್ಮ ಗುರಿ ಜನರ ಮುಂದೆ ಹೋಗಿ ಬಿಂಬಿಸಿ ಅವರ ಬೆಂಬಲ ಪಡೆಯುವಂತ ಕೆಲಸ ಆಗಬೇಕಾಗಿದೆ ಎಂದರು.

ತಾಲ್ಲೂಕು ಎಸ್ ಸಿ ಮೂರ್ಚಾ ಅಧ್ಯಕ್ಷ ರಾಜು ಮುಕ್ಕಣ್ಣ ಮಾತನಾಡಿ ಚುನಾವಣೆಗೆ ಸ್ಪರ್ದಿಸುವ ಅಭ್ಯರ್ಥಿಗಳಿಗೆ ಕಠಿಣ ಶ್ರಮ ಹಾಗೂ ಚುನಾವಣೆ ಪೂರ್ವ ತಯಾರಿ ಹಾಗೂ ಕಾರ್ಯವೈಖರಿ ಬಗ್ಗೆ ತಿಳಿಸಿದರು.

ಪುರಸಭೆ ಮಾಜಿ ವಿರೋಧ ಪಕ್ಷದ ನಾಯಕ ಭೀಮಶಾ ಜಿರೋಳ್ಳಿ ತಮ್ಮ ಐದು ವರ್ಷಗಳ ಅವಧಿಯಲ್ಲಿ ವಾಡಿ ಪಟ್ಟಣದ ಜನರ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದ ಅನುಭವವನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ತಾಲ್ಲೂಕು ಉಪಾಧ್ಯಕ್ಷ ಗುರಿಮಲ್ಲಪ್ಪ ಕಟ್ಡಿಮನಿ,ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಮಹಿಳಾ ಮೂರ್ಚಾದ ಅಧ್ಯಕ್ಷ ಚಂದ್ರಕಲಾ ಬುದಡಕರ್,ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ ಮುಖಂಡರಾದ ವಿಠಲ ನಾಯಕ, ರಾಮಚಂದ್ರ ರಡ್ಡಿ,ಸಿದ್ದಣ್ಣ ಕಲ್ಲಶೆಟ್ಟಿ, ಭಗವತ ಸುಳೆ,ಅರ್ಜುನ ಕಾಳೆಕರ್,ಭೀಮರಾವ ದೊರೆ,ಶರಣಗೌಡ ಚಾಮನೂರ,ಅಶೋಕ ಪವಾರ,ಹರಿ ಗಲಾಂಡೆ,ರಿಚರ್ಡ್ ಮಾರೆಡ್ಡಿ, ಬಸವರಾಜ ಕಿರಣಗಿ,ಶಿವಶಂಕರ ಕಾಶೆಟ್ಟಿ, ಅಶೋಕ ಗುತ್ತೆದಾರ,ವಿಶಾಲ ನಿಂಬರ್ಗಾ,ಮಹೇಂದ್ರ ಕುಮಾರ, ಅರ್ಜುನ ದಹಿಹಂಡೆ,ಸಂತೋಷ ಪವಾರ,ದತ್ತಾ ಖೈರೆ,ಮನೀಷ ವಾಲಿಯ,ಚನ್ನಯ್ಯ ಸ್ವಾಮಿ ,ಬಾಬು ಗುತ್ತೆದಾರ,ಜುಗಲ ಕಿಶೋರ,ಮಲ್ಲಿಕಾರ್ಜುನ ಸಾತಖೇಡ, ಪ್ರಕಾಶ ಪುಜಾರಿ,ಕಿಶನ ಜಾಧವ್,ಅಂಬದಾಸ ಜಾಧವ್, ಪ್ರೇಮ ರಾಠೋಡ, ಕುಮಾರ ಜಾಧವ್, ಜಯಂತ ಪವಾರ,ಸತೀಶ್ ಸಾವಳಗಿ,ರಮೇಶ್ ಜಾಧವ್, ಅಯ್ಯಣ್ಣ ದಂಡೋತಿ, ಆನಂದ ಇಂಗಳಗಿ,ಮಹೇಶ ಕುರಕುಂಟ,ಯಂಕಮ್ಮ ಗೌಡಗಾಂವ,ಅನ್ನಪೂರ್ಣ ದೊಡ್ಡಮನಿ,ಶರಣಮ್ಮ ಯಾದಗಿರ,ಉಮಾಬಾಯಿ ದಹಿದಂಡೆ,ಅನುಸುಯಾ ಬಾಯಿ ಪವಾರ, ದೇವಕ್ಕಿ ಪುಜಾರಿ,ದೇವೇಂದ್ರ ಬಡಿಗೇರ,ಗಣೇಶ ಪವಾರ,ಬಸವರಾಜ ಪಗಡಿಕರ್,ಪಪ್ಪು ಮೋರೆ,ಅಭಿಷೇಕ ರಾಠೋಡ, ವಿಶಾಲ ನಿಂಬರ್ಗಾ,ವಿಶ್ವ ತಳವಾರ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here