ಕಲಬುರಗಿ ರೈಲ್ವೆ ಎರಡನೇ 2ನೇ ಪಿಟ್ ಲೈನ್ ಸ್ಥಾಪನೆಗೆ ಟೆಂಡರ್ ಆಹ್ವಾನ

0
16

ಕಲಬುರಗಿ: ಸೆಂಟ್ರಲ್ ರೈಲ್ವೇಯ ಸೊಲ್ಲಾಪುರ ವಿಭಾಗವು ಎರಡನೇ ಪಿಟ್‌ಲೈನ್‌ಗೆ ಟೆಂಡರ್ ಆಹ್ವಾನಿಸಿದೆ. 10 ವರ್ಷಗಳಿಂದ ನೇನೆಗುದ್ದಿಗೆ ಬಿದ್ದಿರುವ ಪಿಟ್ ಲೈನ್ ಬೇಡಿಕೆಗೆ ಕೇಂದ್ರ ಸರ್ಕಾರ ಕಲಬುರಗಿಯಲ್ಲಿ 19.5 ಕೋಟಿ ರೂ ಟೆಂಡರ್ ಗೆ ಅನುಮೋದನೆ ನೀಡಿದೆ ಎಂದು ಕಲಬುರಗಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ತಿಳಿಸಿದ್ದಾರೆ.

ಕಲಬುರಗಿ ಈಗಾಗಲೇ 1 ಪಿಟ್ ಲೈನ್ ಹೊಂದಿದ್ದು ಕಲಬುರಗಿ-ಕೊಲ್ಹಾಪುರ ರೈಲು ನಿರ್ವಹಣೆ ಮಾಡಲಾಗುತ್ತಿದೆ, ಎರಡನೇ ಪಿಟ್‌ ಲೈನ್ ಪೂರ್ಣಗೊಂಡ ನಂತರ ಕಲಬುರಗಿ ನಿಲ್ದಾಣದಿಂದ ಹೆಚ್ಚಿನ ರೈಲುಗಳನ್ನು ಪ್ರಾರಂಭಿಸಬಹುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವರಿಗೆ ಜಾದವ್ ಧನ್ಯವಾದ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here