ಲೋಕಮಾನ್ಯ ಅಂಬೇಡ್ಕರ್ ವಿಚಾರಗಳು ನಮಗೆ ಸ್ಪೂರ್ತಿ ನೀಡುತ್ತವೆ: ತಹಶೀಲ್ದಾರ ಜಮಖಂಡಿ

0
10

ಚಿಂಚೋಳಿ: ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರವರ ವಿಚಾರಗಳು ನಾವು ಪ್ರತಿನಿತ್ಯ ಮೆಲುಕು ಹಾಕುತ್ತಿದ್ದರೆ ನಮಗೆ ಗೊತ್ತಿಲ್ಲದಂತೆ ನಮ್ಮೊಳಗೊಂದು ಶಕ್ತಿ ತಯ್ಯಾರಾಗುತ್ತದೆ ಎಂದು ಚಿಂಚೋಳಿ ತಾಲೂಕ ದಂಡಾಧಿಕಾರಿಗಳಾದ ಸುಬ್ಬಣ್ಣ ಜಮಖಂಡಿ ಅವರು ಹೇಳಿದ್ದರು.

ಪಟ್ಟಣದ ಬಿಸಿಎಂ ಕಾಲೇಜು ವಸತಿ ನಿಲಯದಲ್ಲಿ ವಿದ್ಯಾರ್ಥಿ ಸಂಘಟನೆಗಳ ಮಾಹಒಕ್ಕೂಟ ಹಾಗೂ ರಾಷ್ಟ್ರೀಯ ಮೂಲನಿವಾಸಿ ಕೂಲಿ ಕಬ್ಬಲಿಗ ಯುವ ಸಂಘಟನೆ ವತಿಯಿಂದ ಹಮ್ಮಿಕೊಂಡಿರುವ ಡಾ ಬಿ ಆರ್ ಅಂಬೇಡ್ಕರವರ 67 ನೇ ಮಾಹಪರಿನಿರ್ವಾಹಣ ಹಾಗೂ ಅಂಬೇಡ್ಕರ್ ದೃಷ್ಟಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಮುಂದುವರೆದು ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಜೊತೆ ಜೊತೆಗೆ ಮಾಹತ್ಮರ ಶರಣರ ಸಂತರ ವಿಚಾರಗಳು ಅರಿತು ನಡೆದರೆ ಬಾಳು ಸಾರ್ಥಕವಾಗುತ್ತದೆ ಎಂದರು.

Contact Your\'s Advertisement; 9902492681

ನಂತರ ಮುಖ್ಯ ಅತಿಥಿಗಳಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಗುರುಪ್ರಸಾದರವರು ಮಾತನಾಡಿ ಭಾರತ ರಾಷ್ಟ್ರವಲ್ಲದೆ ಸುಮಾರು ರಾಷ್ಟ್ರಗಳು ತಮ್ಮ ರಾಷ್ಟ್ರದ ಧ್ವಜವನ್ನು ಅರ್ದಕ್ಕೆ ಇಳಿಸಿ ಬಾಬಾ ಸಾಹೇಬ್ ಅಂಬೇಡ್ಕರವರಿಗೆ ಗೌರವ ನಮನ ಸಲ್ಲಿಸುವುದು ನೋಡಿದರೆ ಅಂಬೇಡ್ಕರ್ ರವರಲ್ಲಿರುವ ಪಾಂಡಿತ್ಯ ಎಂತಹದ್ದು ಎಂದು ನಾವು ತಿಳಿದುಕೊಳ್ಳಬೇಕಾಗಿದೆ ಕಾರ್ಯಕ್ರಮದ ಉಪನ್ಯಾಸವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಕಾಳಗಿಯ ಹಿರಿಯ ಉಪನ್ಯಾಸಕರಾದ ಪ್ರೊ ಸುಭಾಷ್ ಶೀಲವಂತ ರವರು ಸುದೀರ್ಘವಾಗಿ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಈಡಿಗ ಸಮಾಜದ ಅಧ್ಯಕ್ಷರಾದ ಚಂದ್ರಶೇಖರ ಗುತ್ತೆದಾರ, ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷರಾದ ಸಂಜೀವಕುಮಾರ ಪಾಟೀಲ್, ಕೂಲಿ ಸಮಾಜದ ಮುಖಂಡ ಶರಣು ನಾಟಿಕಾರ, ಅನುಸೂಯಾ ಚೌವ್ಹಾಣ್ ಮಾರುತಿ ಗಂಜಗಿರಿ ಗೋಪಾಲ ಗಾರಂಪಳ್ಳಿ ಮೋಹನ ಐನಾಪೂರ ಹರ್ಷವರ್ಧನ ದೀಪಾ ವಿಜಯಲಕ್ಷ್ಮಿ ಸಾಗರ ವಿಜಯ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here