ಅಡ್ಡ ಪರಿಣಾಮಗಳಿಲ್ಲ ಔಷಧ ಎಂದರೆ ಅದು ಆಯುಷ್; ಡಾ:ಆರ್.ವಿ ನಾಯಕ

0
12

ಸುರಪುರ: ಆಯುಷ್ ಎನ್ನುವಂತದ್ದು ಐತಿಹಾಸಿಕವಾದುದಾಗಿದೆ,ಇದರಿಂದ ಮನುಷ್ಯನಿಗೆ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲದ ಔಷಧಿ ಎಂದರೆ ಅದು ಆಯುಷ್ ಆಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ತಿಳಿಸಿದರು.

ನಗರದ ಪ.ಜಾ ಮತ್ತು ಪ.ಪಂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಜಿಲ್ಲಾ ಆಡಳಿತ,ಜಿಲ್ಲಾ ಪಂಚಾಯತ್ ಯಾದಗಿರಿ ಹಾಗೂ ಆಯುಷ್ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಎಸ್.ಸಿ.ಪಿ,ಟಿ.ಎಸ್.ಪಿ ಯೋಜನೆಯಡಿ ಆಯುಷ್ ಔಷಧಿ ಸಸ್ಯವನ ಅಭಿವೃಧ್ಧಿ ಹಾಗೂ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಹೆಚ್ಚಿನ ಜನರಲ್ಲಿ ಅಪೌಷ್ಠಿಕತೆ,ಹೆಣ್ಣು ಮಕ್ಕಳಲ್ಲಿ ರಕ್ತ ಹೀನತೆಯಂತಹ ಕಾಯಿಲೆಗಳಿಗೆ ಆಯುಷ್ ತುಂಬಾ ಉಪಯುಕ್ತವಾಗಿದ್ದು,ಇಲ್ಲಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆಯುಷ್ ಅಧಿಕಾರಿ ಡಾ:ವಂದನಾ ಗಾಳಿಯವರು ಮಾತನಾಡಿ,ಅನೇಕ ವರ್ಷಗಳಿಂದಲೂ ನಮ್ಮ ಆಯುಷ್ ಇಲಾಖೆಯಿಂದ ಇಂತಹ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ,ಇಂದು ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರ ಸದುಪಯೋಗ ಮಾಡಿಕೊಳ್ಳಬೇಕು ಹಾಗೂ ಸಾಧ್ಯವಾದಷ್ಟು ತಾವೆಲ್ಲರು ಔಷಧಿ ಸಸ್ಯಗಳನ್ನು ಬೆಳೆಸಲು ಮುಂದಾಗಬೇಕು,ಅದರಿಂದ ಆಹಾರಕ್ಕೂ ಆ ಸಸ್ಯಗಳು ಉಪಯೋಗವಾಗಲಿವೆ ಹಾಗೂ ಔಷಧಕ್ಕೂ ಲಭ್ಯವಾಗಲಿವೆ ಎಂದು ಸಲಹೆ ನೀಡಿದರು.

ತಾಲೂಕು ಪಂಚಾಯತ್ ಇಓ ಬಸವರಾಜ ಸಜ್ಜನ್ ಮಾತನಾಡಿ,ನಮ್ಮ ಮನೆಗಳಲ್ಲಿಯೇ ಔಷಧಿ ಪದಾರ್ಥಗಳಿರುತ್ತವೆ,ಜೀರಿಗೆ,ಲವಂಗ,ಮೆಣಸು,ಶುಂಠಿ ಇವೆಲ್ಲವೂ ಔಷಧಿ ವಸ್ತುಗಳಾಗಿವೆ ಇವೆಲ್ಲವುಗಳನ್ನು ನಾವು ಸರಿಯಾಗಿ ಸೇವನೆ ಮಾಡಿದಲ್ಲಿ ಯಾವುದೇ ಅಪೌಷ್ಟಿಕತೆ ಕಾಡುವುದಿಲ್ಲ,ಯಾವುದೇ ಕಾಯಿಲೆಗಳು ಬರುವುದಿಲ್ಲ ತಾವೆಲ್ಲರು ಇವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಆಯುಷ್ ಔಷಧಿಯ ಕುರಿತು ವೈದ್ಯಾಧಿಕಾರಿ ಪ್ರಕಾಶ ರಾಜಾಪುರ ವಿವರಿಸಿದರು,ನಂತರ ವೈದ್ಯ ಡಾ:ಇನಾಮ್ ಅವರು ವಿದ್ಯಾರ್ಥಿಗಳು ಆರೋಗ್ಯ ತಪಾಸಣೆ ಮಾಡಿ ಔಷಧಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಬಿ.ಎಲ್.ಸಿ ಮಲ್ಲಪ್ಪ ಗೋನಾಲ,ನೋಡಲ್ ಅಧಿಕಾರಿ ರವಿ ಪಾಟೀಲ್,ನಗರಸಭೆ ನೌರ್ಮಲ್ಯ ನಿರೀಕ್ಷಕ ಶಿವಪುತ್ರ, ವಸತಿ ನಿಲಯದ ಮೇಲ್ವಿಚಾರಕ ಶಿವುಗೌಡ ಬಿರಾದಾರ ಇದ್ದರು.ಬಸವರಾಜ ದೇವಾಪುರ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು,ರಫಿಕ್ ಅಹ್ಮದ್ ವಂದಿಸಿದರು.

ರಾಜು ಬಾಸುತ್ಕರ್, ಹಾಸ್ಟೆಲ್ ವಾರ್ಡನ್‍ಗಳಾದ ಎನ್.ಎಮ್ ಪೀರಗೋಳ,ಮಹಾದೇವಪ್ಪ ಬೊಮ್ಮನಹಳ್ಳಿ,ಗೋವಿಂದಪ್ಪ ಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here