ಅಂತರಾಳ ಅಭಿನಂದನಾ ಗ್ರಂಥ ಬಿಡುಗಡೆ 6ರಂದು

0
23

ಶಹಾಬಾದ :ತಾಲೂಕಿನ ಭಂಕೂರ ಗ್ರಾಮದ ಕರ್ನಾಟಕ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ. ಪಿ.ಎಸ್. ಕೊಕಟನೂರ್ ಅವರು 60 ವಸಂತಗಳನ್ನು ಪೂರೈಸಿದ ನಿಮಿತ್ತ ಅವರ ವಿದ್ಯಾರ್ಥಿ ಬಳಗ ಮತ್ತು ಹಿತೈಷಿಗಳ ವತಿಯಿಂದ ಅವರ ಷಷ್ಠಿ ಪೂರ್ತಿ ಹಾಗೂ ಅಂತರಾಳ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಹಮ್ಮಿಕೊಂಡಿದ್ದೆವೆ ಎಂದು ಉಪನ್ಯಾಸಕ ಹಾಗೂ ವಿದ್ಯಾರ್ಥಿ ಬಳಗದ ಮರಲಿಂಗ ಯಾದಗಿರಿ ತಿಳಿಸಿದರು.

ಅವರು ನಗರದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಭಂಕೂರ ಗ್ರಾಮದ ಶಾಂತನಗರದ ಗಾಯಕ್ವಾಡ್ ಫಂಕ್ಷನ್ ಹಾಲ್‍ನಲ್ಲಿ ಅಗಸ್ಟ 6 ರಂದು ಬೆಳಗ್ಗೆ 11:30 ಕ್ಕೆ ಸಮಾರಂಭ ಜರುಗಲಿದೆ. ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಮುಗುಳನಾಗಾವನ ಸಿದ್ದಲಿಂಗ ಶಿವಾಚಾರ್ಯರು ಹಾಗೂ ರಾವೂರ ಗ್ರಾಮದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸುವರು. ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮ ಪ್ರಭು ಪಾಟೀಲ್ ಸಮಾರಂಭವನ್ನು ಉದ್ಘಾಟಿಸುವರು.

Contact Your\'s Advertisement; 9902492681

ಕಸಾಪ ಮಾಜಿ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ, ಸಾಹಿತಿ ಡಾ.ಶಿವರಂಜನ್ ಸತ್ಯಂಪೇಟೆ ಪುಸ್ತಕ ಬಿಡುಗಡೆ ಮಾಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಮುಖಂಡರಾದ ಚೆನ್ನವೀರಪ್ಪ ಗೌಡ ಪಾಟೀಲ್ ವಹಿಕೊಳ್ಳಲಿದ್ದಾರೆ. ಡಾ. ಮಲ್ಲಿನಾಥ ತಳವಾರ ಪುಸ್ತಕ ಪರಿಚಯ ಮಾಡುವರು. ಈ ಸಂದರ್ಭದಲ್ಲಿ ಉನ್ನತ ಸ್ಥಾನಕ್ಕೇರಿದÀ ಅವರ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಶಿಕಾಂತ್ ಮಡಿವಾಳ, ಹನುಮಂತ ಕುಂಬಾರ್, ರಾಜಶೇಖರ ದಂಡಾವತಿ, ವಿಶ್ವರಾಧ್ಯ ಕಟ್ಟಿ , ಅನಿಲ್ ಮೈನಾಲ್ಕರ್, ಪ್ರವೀಣ್ ರಾಜನ್, ಮಹೇಶ್ ಕಾಂಬಳೆ, ಭೀಮರಾಯ ಮಂತಟ್ಟಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here