ತಂದೆ-ತಾಯಂದಿರೇ ಮಕ್ಕಳಿಗೆ ನಿಜವಾದ ಗುರುಗಳು

0
16

ಶಹಾಬಾದ: ಮಗುವಿಗೆ ಬೆರಳು ಹಿಡಿದು ನಡೆಯಲು, ಮಾತನಾಡಲು ಕಲಿಸಿ, ಅವರಲ್ಲಿ ಮೌಲ್ಯಗಳನ್ನು ತುಂಬುವ ತಂದೆ-ತಾಯಂದಿರೇ ಮಕ್ಕಳಿಗೆ ನಿಜವಾದ ಗುರುಗಳು ಎಂದು ಮುಗುಳುನಾಗಾವಿಯ ಪೂಜ್ಯ ಅಭಿನವ ಸಿದ್ದಲಿಂಗ ಶಿವಾಚಾರ್ಯರು ಹೇಳಿದರು.

ಅವರು ಶನಿವಾರ ನಗರದ ಎಂಸಿಸಿ ಶಾಲೆಯ 60ನೇ ವಜ್ರ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಪೆÇೀಷಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ತಂದೆ-ತಾಯಿ ಬಿಟ್ಟರೇ ನಿಮ್ಮನ್ನು ತಿದ್ದಿ ತೀಡಿ ಒಳ್ಳೆಯ ರೂಪ ಕೊಡುವವರು ಶಿಕ್ಷಕರು. ಈ ಭಾಗದ ಜನರಿಗೆ ಇಂಗ್ಲಿμï ಕಬ್ಬಿಣದ ಕಡಲೆಕಾಯಿಯಾಗಿತ್ತು.ಇಲ್ಲಿನ ಶಿಕ್ಷಕರು ಹಲವು ದಶಕಗಳಿಂದ ಆಂಗ್ಲ ಅಕ್ಷರದ ಬೀಜವನ್ನು ಬಿತ್ತಿ ಆಂಗ್ಲ ಭಾಷೆ ಸಾಧಕರ ಸೊತ್ತು ಎಂಬುದನ್ನು ಹೇಳಿಕೊಟ್ಟ ಏಕೈಕ ಶಾಲೆ ಎಂಸಿಸಿ ಆಗಿದೆ. ಈ ಶಾಲೆಯಲ್ಲಿ ಕಲಿತಂತಹ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಉತ್ತಮ ಶಿಕ್ಷಣ ಕಲಿಸುವುದರ ಜತೆಗೆ ಸಾಮಾಜಿಕ ಕಾರ್ಯ ಕೈಗೊಳ್ಳುವ ಮೂಲಕ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಈ ದೇಶದಲ್ಲಿ ಕ್ರೈಸ್ತ ಸಮುದಾಯದ ಸಂಸ್ಥೆಗಳು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಸೇವೆ ಅನನ್ಯವಾದುದು.

ಜಾಮೀಯಾ ಮಜೀದ್ ಇಮಾಮ್ ಹಜರತ್ ಮೌಲಾನಾ ಅಬ್ದುಲ್ ಖಾದಿರ್ ಮಾತನಾಡಿ, ಪೆÇೀಷಕರು ತಮ್ಮ ಮಕ್ಕಳನ್ನು ಪ್ರೀತಿ, ವಾತ್ಸಲ್ಯದಿಂದ ಶಿಕ್ಷಕರು ಮಗುವಿನ ವ್ಯಕ್ತಿತ್ವವನ್ನು ರೂಪಿಸುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ತಂದೆ-ತಾಯಿಯ ಮಹತ್ವ ಹಾಗೂ ಕಲಿಸಿದ ಶಿಕ್ಷಕರನ್ನು ಎಂದಿಗೂ ಮರೆಯಬಾರದು. ಅವರನ್ನು ಅಗೌರವಗೊಳಿಸಬಾರದು ಮತ್ತು ಪೆÇೀಷಕರ ದಿನದಂದು ತಂದೆ-ತಾಯಿರನ್ನು ಪೂಜಿಸುವ ಮೂಲಕ ಆಶೀರ್ವಾದ ಪಡೆಯಬೇಕು ಎಂದರು.

ಕಲಬುರಗಿ ಬಿಷಪ್ ಮೈಖೆಲ್ ಮಿರಾಂಡಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಮಕ್ಕಳಿಗೆ ತಂದೆ ತಾಯಿಗಳೇ ನಿಜವಾದ ಹೀರೋಗಳಾಗಬೇಕು.ಪ್ರತಿಯೊಬ್ಬರ ಜೀವನದಲ್ಲಿ ತಮ್ಮ ಸುಖವನ್ನು ಬದಿಗಿಟ್ಟು ಮಕ್ಕಳಲ್ಲಿ ಕಾಣುವ ಪ್ರೀತಿ ತಮ್ಮ ಸುಖ ಎಂದು ಭಾವಿಸುವ ಹಾಗೂ ಯಾವಾಗಲೂ ಮಕ್ಕಳೇ ಶ್ರೇಯಸ್ಸಿಗಾಗಿ ಹಗಲಿರುಳು ದುಡಿಯುವ ತಂದೆ-ತಾಯಿಗಳೇ ನಮಗೆ ದೇವರು.ಅವರ ಆಸೆಗಳನ್ನು ಈಡೇರಿಸುವ ಕೆಲಸ ಮಕ್ಕಳಿಂದಾಗಬೇಕು.ಆ ನಿಟ್ಟಿನಲ್ಲಿ ಮಕ್ಕಳು ಪ್ರಯ್ತನಶೀಲರಾಗಬೇಕೆಂದು ತಿಳಿಸಿದರು.

ಸಮಾರಂಭದ ವೇದಿಕೆ ಮೇಲೆ ಶರಣಗೌಡ ಹೊಸಮನಿ, ಜೆರಾಲ್ಡ್ ಸಾಗರ, ಜೋಸೆಫ್ ಪ್ರವೀಣ, ಸಿಸ್ಟರ್ ಬೀನಾ, ಮುಖ್ಯ ಗುರುಗಳಾದ ಸಿಸ್ಟರ್ ಲಿನೇಟ್ ಸಿಕ್ವೇರಿಯಾ, ಸಿಸ್ಟರ್ ಅನುಪಮಾ, ಪಾಲಕ ಪೆÇೀಷಕರ ಸಂಘದ ಅಧ್ಯಕ್ಷ ಸುನೀಲ್ ಭಗತ್ ಇದ್ದರು.
ನಂತರ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ಸಬ್ರೀನಾ ಸ್ವಾಗತಿಸಿದರು, ಸಾಹೇಬಗೌಡ ಪಾಟೀಲ ಮತ್ತು ಅನಿತಾ ಕುಲಕರ್ಣಿ ನಿರೂಪಿಸಿದರು, ಗೌಡಪ್ಪ ಸರಡಗಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here