ಸುಲೇಪೇಟ್ ಗ್ರಾಮದ ಅಕ್ರಮ ಸವಳು ಗಣಿಗಾರಿಕೆ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

0
38

ಕಲಬುರಗಿ: ಜಿಲ್ಲೆಯ ಸುಲೇಪೇಟ ಗ್ರಾಮದ ನೂರಾರು ಎಕರೆ ಪ್ರದೇಶದಲ್ಲಿ ಗಣಿಲೀಜ್ ಪಡೆಯದೇ ಅಕ್ರಮವಾಗಿ ಸವಳು ಗಣಿಗಾರಿಕೆ ನಡೆಸಲಾಗುತ್ತಿದ್ದು, ಕೇವಲ ಒಂದೇರಡು ಟಿಪ್ಟರ್‍ಗಳಿಗೆ ಮಾತ್ರ ರಾಯಲ್ಟಿ ತೋರಿಸಿ ಸರ್ಕಾರದ ಬೊಕ್ಕಸಕ್ಕೆ ಹಾನಿ ಮಾಡಲಾಗುತ್ತಿದೆ. ಇಲ್ಲಿನ ಅಕ್ರಮ ಗಣಿಗಾರಿಕೆ ತಡೆಯಲು ಆಗ್ರಹಿಸಿ ವೀರ ಕನ್ನಡಿಗರ ಸೇನೆ ನೆತೃತ್ವದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಎದುರುಗಡೆ ಪ್ರತಿಭಟನೆ ನಡೆಸಿ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

ಚಿಂಚೋಳಿ ತಾಲ್ಲೂಕಿನ ಸಾಲ, ಗ್ರಾಮದ ಮನುಸಂರಲ್ಲಿ ಸುಮಾರು 15-20 ವರ್ಷಗಳಿಂದ ಕಾನೂನು ಬಾಹಿರವಾಗಿ ಮತ್ತು ಅಕ್ರಮವಾಗಿ ನೂರಾರು ಎಕರೆ ಪ್ರದೇಶದಲ್ಲಿ ಸವಳು ಗಣಿಗಾರಿಕೆ ಮಾಡುತ್ತಿದ್ದಾರೆ. ಇವರು ಕೇವಲ ಎರಡು ಎಕರೆ ಪ್ರದೇಶದ ಸರಳು ಗಣಿಗಾರಿಕೆಗಾರಿ- ಕೆಗಾಗಿ ಲೀಜ್ ಪಡೆದುಕೊಂಡಿದ್ದು, ಉಳಿದ ಜಮೀನಿನಲ್ಲಿ ಕಾನೂನು ಬಾಹಿರವಾಗಿ ಆಕ್ರಮ ಗಣಿಗಾರಿಕೆ ಮಾಡುವ ಮೂಲಕ ಸರ್ಕಾರಕ್ಕೆ ತುಂಬೇಕಾದ ರಾಯಲ್ಟಿ ಮೋಸ ಮಾಡಲಾಗುತ್ತಿದೆ.

Contact Your\'s Advertisement; 9902492681

ಇಲ್ಲಿನ ಗಣಿಗಾರಿಕೆಯಿಂದ ತೆ- ಗೆದ ಸವರು ಮಣ್ಣು ಅಕ್ರಮವಾಗಿ ದಾಸ್ತಾನು ಮಾಡಿ, ಹತ್ತಾರು ಟಿಪ್ಪರಗಳಲ್ಲಿ ಮತ್ತು ಟ್ಯಾಕ್ಟರಿಗಳಲ್ಲಿ ಅನ್ಯ ರಾಜ್ಯಗಳಿಗೆ ಸರಬರಾಜು ಮಾಡುತ್ತಿದ್ದಾರೆ.

ಆದರೆ ಒಂದು ದಿವಸಕ್ಕೆ 25- 30 ಟಿಪ್ಪರಗಳು ಸರಬರಾಜು ಮಾಡಿದರೆ, ಅವರು 2-3ಟಿಪ್ಪರಗಳಿಗೆ ಮಾತ್ರ ರಾಯಲ್ಲಿ ಕಟ್ಟುತ್ತಿದ್ದಾರೆ, ಉಳಿದ ಟಿಪ್ಪರಗಳ ರಾಯಲ್ಟಿ ಕಟ್ಟದ ಸರ್ಕಾರಕ್ಕೆ ಮೋಸ ಮತ್ತು ವಂಚನೆ ಮಾಡಿ, ಸರ್ಕಾರದ ಧೋಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿದ್ದಾರೆ.
ಈ ಅಕ್ರಮಗಣಿಗಾರಿಕೆ ನಡೆಸುವವರು, ಸ್ಥಳೀಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಈ ಆಕ್ರಮ ಚಟುವಟಿಕೆ ಮಾಡುತ್ತಿರುವುದರಿಂದ, ಅಧಿಕಾರಿಗಳು ಇದಕ್ಕೆ ಕುಮ್ಮಕ್ಕು ನೀಡುವಂತಾಗಿದೆ. ಇಲ್ಲಿನ ಆಕ್ರಮಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಮತ್ತು ಮೇಲೆ ತೋರಿಸಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಂಡು, ಕಾನೂನುದಾಹಿರವಾಗಿ ನಡೆಸುತ್ತಿರುವ ಸವಳು ಸವಳು ಗಣಿಗಾರಿಕೆ, ಅಕ್ರಮ ದಾಸ್ತಾನು ತಮ್ಮ ಕಣ್ಣಿಗೆ ತೆಗೆದುಕೊಂಡು, ಅವರ ಗಣಿಯ ಲೀಜನ್ನು ರದ್ದುಪಡಿಸಿ, ಗಣಿ ಪ್ರದೇಶ, ಸರ್ವೆ ಮಾಡಿ, ಇಲ್ಲಿಯವರೆಗೆ ಮಾಡಿರುವ ವಂಚನೆಯ ಹಣವನ್ನು ವಸೂಲಿ ಮಾಡಿ, ಸರ್ಕಾರದ ಲೋಕ್ಕಸಕ್ಕೆ ಜಮಾ ಮಾಡಬೇಕು ಎಂದು ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಸೇನೆ ಸಂಸ್ಥಾಪಕ ಅಧ್ಯಕ್ಷ ಅಮೃತ ಸಿ.ಪಾಟೀಲ ಸಿರನೂರ, ತಾಲೂಕ ಅಧ್ಯಕ್ಷ ವಿಠಲ್ ಎಸ್.ಕುಸಾಳೆ, ಕಾರ್ಯಕರ್ತರಾದ ಶಿವಾನಂದ, ಅಣವೀರ, ಜೈಭೀಮ, ಶಿವಾಜಿ ಚವ್ಹಾಣ, ಅನೀಲ್, ಅಹ್ಮದ ಮತ್ತು ಪ್ರಶಾಂತ ಬಿ.ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here