ನಾಳೆ ಕಲಬುರಗಿಯಲ್ಲಿ ಶ್ರೀವಿಜಯ ಸದನ ಉದ್ಘಾಟನೆ

0
606

ಕಲಬುರಗಿ: ಸಾಹಿತ್ಯ ಪ್ರೇರಕ ಬಿ.ಎಂ.ಪಾಟೀಲ ಕಲ್ಲೂರ ಅವರು ತಮ್ಮ ಅಜ್ಜಿ ಲಿಂ. ಲಕ್ಷ್ಮೀಬಾಯಿ ಗೌಡತಿ ಹಾಗೂ ತಂದೆಂiÀiವರಾದ ಲಿಂ. ಮಲ್ಕಣ್ಣಗೌಡ ಪೊಲೀಸ್ ಪಾಟೀಲ ಅವರ ಸ್ಮರಣಾರ್ಥವಾಗಿ ನಗರದ ಕನ್ನಡ ಭವನದ ಆವರಣದಲ್ಲಿ ನಿರ್ಮಿಸಿಕೊಟ್ಟಿರುವ `ಶ್ರೀವಿಜಯ ಸದನ ದ ಉದ್ಘಾಟನಾ ಸಮಾರಂಭವನ್ನು ಡಿ.16 ರ ಶನಿವಾರದಂದು ಬೆಳಗ್ಗೆ 10.30 ಕ್ಕೆ ಕನ್ನಡ ಭವನದ ಪ್ರಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ನಗರದ ಕನ್ನಡ ಭವನದ ಅಭಿವೃದ್ಧಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಹಿಂದಿನ ಅಧ್ಯಕ್ಷರುಗಳು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ನಾನು ಅಧ್ಯಕ್ಷನಾಗಿ ಈ ಎರಡು ವರ್ಷದ ಅವಧಿಯಲ್ಲಿ ನಿರಂತರ ಸಾಹಿತ್ಯಿಕ-ಸಾಂಸ್ಕøತಿಕ ಕಾರ್ಯಕ್ರಮಗಳ ಸುರಿಮಳೆಯೇ ಸುರಿಸುತ್ತಿದ್ದೇನೆ. ಜತೆಗೆ ಭವನದ ಆವರಣದಲ್ಲಿ ಆತ್ಮೀಯ ದಾನಿಗಳ ಸಹಕಾರದೊಂದಿಗೆ ಭೌತಿಕ ಕಾರ್ಯಗಳೂ ಸಹ ಉತ್ತಮ ರೀತಿಯಲ್ಲಿ ನಡೆದಿವೆ.

Contact Your\'s Advertisement; 9902492681

ಈ ಎರಡು ವರ್ಷದಲ್ಲಿ ಕನ್ನಡ ಭವನಕ್ಕೆ ಹೊಸದೊಂದು ಸ್ಪರ್ಷ ನೀಡಿ, ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾರ್ಪಡಿಸಲಾಗುತ್ತಿದೆ. ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ಆಶಯದಂತೆ ಕೋಟಿ ಸದಸ್ಯತ್ವದ ಅಭಿಯಾನಕ್ಕೂ ಕೂಡ ಪದಾಧಿಕಾರಿಗಳೆಲ್ಲೂರೂ ಸೇರಿಕೊಂಡು ಶ್ರಮಿಸುತ್ತಿದ್ದೇವೆ ಎಂದು ಅವರು ವಿವರಿಸಿದ್ದಾರೆ.

ಕಲಬುರಗಿಯಲ್ಲಿ ಕನ್ನಡ ಭವನದ ನಿರ್ಮಾಣಕ್ಕೆ ಆರಂಭದಲ್ಲಿ ಶ್ರಮ ವಹಿಸಿ ನಿವೇಶನ ಒದಗಿಸುವಲ್ಲಿ ಮತ್ತು ಭವನದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ ಮಾಜಿ ಅಧ್ಯಕ್ಷರುಗಳ ಹೆಸರುಗಳನ್ನು ನಾಮಕರಣ ಮಾಡುವ ಮೂಲಕ ಅವರ ಕನ್ನಡದ ಸೇವಾ ಕಾರ್ಯವನ್ನು ಶಾಶ್ವತವಾಗಿ ಜೀವಂತವಾಗಿಡುವ ಕಾರ್ಯ ಮುಂದಿನ ದಿನಗಳಲ್ಲಿ ಮಾಡುತ್ತೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೆಲೋಗಿ ವಿರಕ್ತ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷರೂ ಆದ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಅವರು ಸದನವನ್ನು ಉದ್ಘಾಟಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕರಾದ ಅಲ್ಲಮಪ್ರಭು ಪಾಟೀಲ, ಬಸವರಾಜ ಮತ್ತಿಮೂಡ, ಎಂಎಲ್ಸಿ ತಿಪ್ಪಣಪ್ಪ ಕಮಕನೂರ, ಮೇಯರ್ ವಿಶಾಲ ಧರ್ಗಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕ್ರೆಡಲ್ ಮಾಜಿ ಅಧ್ಯಕ್ಷ ಚಂದು ಬಿ.ಜಿ.ಪಾಟೀಲ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಅಪ್ಪು ಕಣಕಿ, ಉದ್ಯಮಿ ನೀಲಕಂಠರಾವ ಮೂಲಗೆ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಎಸ್ ಪಾಟೀಲ, ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ಶರಣಕುಮಾರ ಬಿಲ್ಲಾಡ, ರುದ್ರಗೌಡ ಪಾಟೀಲ ಕಲ್ಲೂರ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here