ಕಮಲಾಪುರ; ತಾಲ್ಲೂಕಿನ ನಾಗುರ್ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ತಡಕಲ್ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಸ್ಫೂರ್ತಿ ಗ್ರಾಮೀಣಭಿವೃದ್ಧಿ ಮತ್ತು ಶಿಕ್ಷಣ ಸೇವಾ ಸಂಸ್ಥೆ ಕಡಗಂಚಿ ಇವರ ಸಂಯುಕ್ತ ಆಶ್ರಯದಲ್ಲಿ ಅಸ್ಪೃಶ್ಯತೆ ನಿರ್ಮೂಲನೆ ಕುರಿತು ವಿಚಾರಗೋಷ್ಠಿ ಹಾಗೂ ಜನ ಜಾಗೃತಿ ಮೂಡಿಸುವ ಬೀದಿ ನಾಟಕ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಪ್ರಸ್ತಾವಿಕವಾಗಿ ಮಾತನಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಾ ಅಮಿತಕುಮಾರ ಕೊಳ್ಳದ, ಅಸ್ಪೃಶ್ಯತೆ ಎನ್ನುವುದು ಒಂದು ಸಮಾಜಕ್ಕೆ ಅಂಟಿಕೊಂಡಿರುವ ಪಿಡುಗು ಇದ್ದ ಹಾಗೆ, ಅಸ್ಪೃಶ್ಯತೆ ನಿವಾರಣೆಯಾಗದೆ ಸಮ ಸಮಾಜ ನಿರ್ಮಾಣ ಮಾಡುವುದು ಅಸಾಧ್ಯ. ಬುದ್ಧ, ಬಸವ ಅಂಬೇಡ್ಕರ್ ಅವರಂತಹ ಮಹಾನ್ ಸಮಾಜ ಸುಧಾರಕರು ಕಂಡ ಕನಸು ಸಮ ಸಮಾಜ ನಿರ್ಮಾಣ ಮಾಡುವದೇ ಆಗಿತ್ತು. ಆದರೆ ಅಂತಹ ಸಮ ಸಮಾಜದ ನಿರ್ಮಾಣಕ್ಕೆ ಈ ಅಸ್ಪೃಶ್ಯತೆ ಒಂದು ಮಾರಕವಾಗಿದ್ದು. ಸಮಾಜದಿಂದತೊಲಗಿಸಲು ನಾವೆಲ್ಲರೂ ಶ್ರಮಿಸಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಠ್ಠಲ್ ಚಿಕಣಿ ಅವರು ಸಹ ಮಾತನಾಡಿ ಬಸವಾದಿ ಶರಣರ, ಸೂಪಿ ಸಂತರು ನಡೆದಾಡಿದನಾಡಿನಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಲಕ ಸಹೋದರತೆಯಿಂದ ಬದುಕಬೇಕೆಂದು ಹೇಳಿದರು. ಡಾ. ಶಿವಪ್ಪ ಭೂಸನೂರ ಮಾತನಾಡಿ, ಅಸ್ಪೃಶ್ಯತೆ ಎನ್ನುವುದು ಅನಿಷ್ಟ ಪದ್ಧತಿ ಅದನ್ನು ತೊಲಗಿಸಿ ಸ್ವಸ್ಥಸಮಾಜ ನಿರ್ಮಾಣವಾಗಬೇಕೆಂದು ಹೇಳಿದರು.
ಇದೆ ಸಂಧರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ಸಹ ಮಾತನಾಡಿ ಅಸ್ಪೃಶ್ಯತೆ ಯನ್ನು ತೊಲಗಿಸಿಜಾತಿ ಧರ್ಮ ಎನ್ನದೆ ಎಲ್ಲರು ಒಳ್ಳೆಯ ಭಾಂದವ್ಯ ದಿಂದ್ ಬದುಕಬಹುದು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಗ್ರಾಮದ ಹಿರಿಯರು ಹಾಗೂ ಮುಖಂಡರು ಪಂಚಾಯತ್ ಸದಸ್ಯರು ಮಾತು ಶಾಲೆಯ ಮುದ್ದು ಮಕ್ಕಳು, ಇದ್ದರು ಇದೆ ಸಂಧರ್ಭದಲ್ಲಿ ಪ್ರಭು ಅಷ್ಟಗಿ ಸ್ವಾಗತ ಮಾಡಿದರು.
ಸಂಸ್ಥೆಯ ಅಧ್ಯಕ್ಷರಾದ ಅಂದಪ್ಪ ಡೋಣಿ ಈ ಕಾರ್ಯಕ್ರಮ ಕುರಿತು ವಂದಿಸಿದರು. ಜೊತೆಗೆ ಅಸ್ಪೃಶ್ಯತೆ ಕುರಿತು ಲೋಹಿಯಾ ಕಲಾ ತಂಡದಿಂದ ಬೀದಿ ನಾಟಕ ಪ್ರದರ್ಶನ ಮಾಡಲಾಯಿತು