ಕಲಬುರಗಿ: ಸೋಮವಾರ 18 ರಂದು ನಾಪತ್ತೆಯಾದ 20 ವರ್ಷದ ಯುವತಿ ಬುಧವಾರ ಚೌಡೇಶ್ವರ ಶಾಲೆ ಹತ್ತಿರ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
ಮಾತಾ ಮಾಣಿಕೇಶ್ವರಿ ಬಡಾವಣೆಯ ನಿವಾಸಿಯಾಗಿರುವ ಮಹಾಲಕ್ಷ್ಮಿ (20) ಮೃತಪಟ್ಟ ಯುವತಿ. ತಂದೆ ಭೀಮಾಶಂಕರ್ ಆಟೋ ಟ್ರೈವರ್ ಆಗಿದ್ದು, ಸೋಮವಾರ ಬೆಳಿಗ್ಗೆಯಿಂದ ಮನೆಯಿಂದ ಮಹಾಲಕ್ಷ್ಮಿ ಮನೆಯಿಂದ ನಾಪತೆಯಾಗಿದ್ದಳು.
ನಾಪತೆಯಾಗಿರುವ ಯುವತಿಯ ತಂದೆ ತಾತಿ ಸೋಮವಾರ ನಗರದ ರಾಘವೇಂದ್ರ ಪೊಲೀಸ್ ಠಾಣೆಗೆ ದೂರು ನೀಡಿದರು. ಇಂದು ಯುವತಿಯ ಶವ ಬಾವಿಯಲ್ಲಿ ಪತ್ತೆಯಾಗಿದ್ದು, ಕೊಲೆ ಮಾಡಲಾಗಿದೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತರಾದ ಚೇತನಕುಮಾರ್ ಆರ್ ಹಾಗೂ ಎಸ್.ಪಿ ಹಾಗೂ ಆರ್.ಜೆ ನಗರ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಂದೆಯ ತಾಯಿ ಅವರ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದೆಂದು ಪೊಲೀಸ್ ಆಯುಕ್ತರು ಈ ಸಂದರ್ಭದಲ್ಲಿ ತಿಳಿಸಿದರು.