ಹಾಸ್ಟಲ್ ಮಕ್ಕಳಿಗೆ ಬ್ಯಾಂಕ್ ವ್ಯವಹಾರ ಜ್ಞಾನ

0
40

ವಾಡಿ: ಪಟ್ಟಣದ ಬಲರಾಮ ಚೌಕ್‍ನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಹಾಸ್ಟಲ್ ಮಕ್ಕಳಿಗೆ ಬ್ಯಾಂಕ್ ವ್ಯೆವಹಾರದ ಕುರಿತು ವಿಶೇಷ ಅರಿವು ಮೂಡಿಸಲಾಯಿತು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಕರ್ನಾಟಕ ಗ್ರಾಮಿಣ ಬ್ಯಾಂಕ್ ನಿವೃತ್ತ ಅಧಿಕಾರಿ ದೇವಿಂದ್ರ ನಿಂಬರ್ಗಾ ಮಾತನಾಡಿ, ಆರ್ಥಿಕ ವ್ಯವಹಾರಕ್ಕೆ ಸಂಬಂದಿಸಿದಂತೆ ಬ್ಯಾಂಕ್‍ಗಳು ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ. ಸರ್ಕಾರ ಅರ್ಹ ಫಲಾನುಭವಿಗಳಿಗೆ ನೀಡುವ ಸಾಲ ಸೌಲಭ್ಯಗಳು ಬ್ಯಾಂಕ್ ಮೂಲಕವೇ ಪಾವತಿ ಮಾಡುತ್ತಿದೆ.

Contact Your\'s Advertisement; 9902492681

ರೈತರಿಗೆ, ವಿದ್ಯಾರ್ಥಿಗಳಿಗೆ ಹಾಗೂ ವ್ಯಾಪಾರಿಗಳಿಗೆ ದೊರಕುವ ಸಾಲ ಸೌಲಭ್ಯಗಳು ನೇರವಾಗಿ ಬ್ಯಾಂಕ್ ಮೂಲಕವೇ ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳ ಉನ್ನತ ಅಭ್ಯಾಸಕ್ಕಾಗಿ ಸಾಲ ಸೌಲಭ್ಯ ಯೋಜನೆಗಳಿರುತ್ತವೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳಾದ ಬ್ಯಾಂಕ್, ಸಾರಿಗೆ ಇಲಾಖೆ, ರೈಲ್ವೆ ಇಲಾಖೆ, ಅಂಚೆ ಕಚೇರಿ ಹಾಗೂ ಸರ್ಕಾರದ ಇತರ ಕಚೇರಿಗಳಲ್ಲಿ ನಮಗೆ ಸಿಗುವ ಸೌಲಭ್ಯಗಳ ಸಾಮಾಜಿಕ ಜ್ಞಾನ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಇರಬೇಕು ಎಂದರು.

ಕಲಬುರಗಿ ನಗರದ ಕರ್ನಾಟಕ ಗ್ರಾಮಿಣ ಬ್ಯಾಂಕ್‍ನ ವ್ಯೆವಸ್ಥಾಪಕ ಅಜಯಕುಮಾರ ದೊಡ್ಡಮನಿ ಮಾತನಾಡಿದರು. ವಸತಿ ನಿಲಯದ ಪ್ರಭಾರಿ ಮೇಲ್ವಿಚಾರಕಿ ಅನಿತಾ ರಾಠೋಡ, ಸಿಬ್ಬಂದಿಗಳಾದ ಶರಣು ಹೇರೂರ, ಗೌಸ್ ಶಹಾ, ವಿದ್ಯಾವತಿ ಬಡಿಗೇರ, ಸಿದ್ದಮ್ಮ ಕಾಶಿ, ಮಹಾದೇವ ಅನಂತರಾವ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here