ಕಲಬುರಗಿ : ‘ನಗರದ ರಾಜೀವಗಾಂಧಿ ಆವಾಸ ಯೋಜನೆಯ ಕೊಳಗೇರಿ ನಿವಾಸಿಗಳಿಗೆ ತುರ್ತಾಗಿ ಕುಡಿಯುವ ನೀರಿನ ಸರಬರಾಜು ಮಾಡಲು ಒತ್ತಾಯಿಸಿ ಕಲಬುರಗಿ ದಕ್ಷೀಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿ, ಸಮಿತಿಯ ಜಿಲ್ಲಾ ಸಂಚಾಲಕ ನಾಗೇಂದ್ರಪ್ಪ ಆರ್.ಡಂಡೋತಿಕರ್ ಅವರು ಮಾತನಾಡಿ , ಜಾಫರಾಬಾದ ಸ್ಲಂ ಬೋರ್ಡ ಬಡಾವಣೆಯಲ್ಲಿ ಪಾಲಿಕೆಯಿಂದ ನಾಲ್ಕು ಐದು ವರ್ಷಗಳಿಂದ ಕುಡಿಯುವ ನೀರು ಸರಬರಾಜು ಆಗದೇ ನೀರು ನಿಂತು ಹೋಗಿರುವ ಕಾರಣ,ನಿವಾಸಿಗಳು ಸಾಕಾಷ್ಟು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಕರೆಯಿಸಿ ಸಮಸ್ಯೆ ಕುರಿತು ಮನವರಿಕೆ ಮಾಡಿದ ಕೂಡಲೇ ಅವರು ತುರ್ತಾಗಿ ಸ್ಪಂದಿಸಿ, ಪರಿಹರಿಸಲು ಆದೇಶ ನೀಡಿದರು ಎಂದು ಹೇಳಿದ್ದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಸಯೈದ್ ಅಬ್ದಲ್ ಕರಿಂ, ರಾಮಚಂದ್ರ ಹಯ್ಯಾಳಕರ್, ಅಂಬಣ್ಣ ಹಾಗೂ ಮಮತಾ ಮೇಡಮ ಸೇರಿದಂತೆ ಬಡಾವಣೆಯ ನಾಗರಿಕರು ಭಾಗವಹಿಸಿದ್ದರು.