ಅಪರಾಧ ತಡೆಗೆ ಪೋಲಿಸರ ಜೋತೆ ಸಹಕರಿಸಿ: ಕುಬೇರ್ ರಾಯಮಾನೆ

0
25

ಕಲಬುರಗಿ: ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಪೋಲಿಸ್ ಇಲಾಖೆಯೊಂದಿಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದು ರಾಘವೇಂದ್ರ ಪೋಲಿಸ್ ಠಾಣೆಯ CPI ಕುಬೇರ್ ರಾಯಮಾನೆ ಹೇಳಿದರು.

ಅವರು ನಗರದ ನೃಪತುಂಗ ಕಾಲೋನಿಯಲ್ಲಿ ಆಯೋಜನೆ ಮಾಡಿದ ಜನಸಂಪರ್ಕ ಸಭೆ ಹಾಗೂ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಅಪರಾಧ ತಡೆಯುವಲ್ಲಿ ಸಾರ್ವಜನಿಕರ ಪಾತ್ರ ಬಹುಮುಖ್ಯವಾಗಿದೆ ಎಂದರು.

Contact Your\'s Advertisement; 9902492681

ಹೀಗಾಗಿ ನಮ್ಮ ಇಲಾಖೆಯು ಸದಾಕಾಲ ನಿಮ್ಮ ಜೋತೆಯಲ್ಲಿದ್ದು ಸಮಾಜದ ರಕ್ಷಣೆಗೆ ಸದಾ ಬದ್ಧವಾಗಿದೆ ಎಂದರು. ಇನ್ನೂ ಕಾಲೋನಿಯ ಜನರು ಮನೆಯಲ್ಲಿ ಬಂಗಾರ, ಬೆಳ್ಳಿ, ನಗದು ಹಣವನ್ನು ಬ್ಯಾಂಕಿನಲ್ಲಿ ಇಡಬೇಕು ಎಂದರು.

ನಂತರ ಮಾತನಾಡಿದ ರಾಘವೇಂದ್ರ ಪೋಲಿಸ್ ಠಾಣೆಯ PSI ಸುಮಂಗಲಾ ರೆಡ್ಡಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿದರು. ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸುವಾಗ ರಸ್ತೆ ನಿಯಮ ಪಾಲಿಸಿ ಜೀವ ರಕ್ಷಕ ಸಾಧನಗಳನ್ನು ಧರಿಸಬೇಕು ಎಂದರು. ಇನ್ನೂ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ ಹೀಗಾಗಿ ಸಾರ್ವಜನಿಕರು ಉದಾಸೀನತೆ ಒಂದು ಮುಖ್ಯ ಕಾರಣ ಎಂದರು.

ನಂತರ ಪತ್ರಕರ್ತ ಪುರುಷೋತ್ತಮ ಕುಲಕರ್ಣಿ ಮಾತನಾಡಿ ಜನರು ಕಳ್ಳತನದ ಬಗ್ಗೆ ಜಾಗೃತರಾಗಬೇಕಿದೆ. ಅಪರಿಚಿತ ಹೆಣ್ಣು ಮಕ್ಕಳು ಇತರರು ಕಳ್ಳತನ ಮಾಡುವ ಉದ್ದೇಶದಿಂದ ದೇವರ ಜೋಗ ಬೇಡುವ ರೂಪದಲ್ಲಿ ಅಥವಾ ಮನೆ ಬಾಡಿಗೆ ಕೇಳುವ ನೇಪದಲ್ಲಿ ಎಂಬ ಕಾರಣ ಇಟ್ಟುಕೊಂಡು ಬಂದು ಕಳ್ಳತನ ಮಾಡಲು ಯತ್ನಿಸುತ್ತಾರೆ. ಇಂತಹ ಸಂದರ್ಭದಲ್ಲಿ ನಾವು ಪೋಲಿಸರಿಗೆ ತಕ್ಷಣ ಮಾಹಿತಿ ನೀಡಬೇಕು. ಹೀಗಾಗಿ ಅಪರಾಧ ತಡೆಯುವಲ್ಲಿ ಸಾರ್ವಜನಿಕರ ಪಾತ್ರ ಬಹುಮುಖ್ಯ ಎಂದರು.

ಠಾಣೆಯ ಮುಖ್ಯಪೇದೆ ಮಲ್ಲನಗೌಡ ಪಾಟೀಲ್, ಕಾಲೋನಿಯ ಪ್ರಮುಖರಾದ ಸೋಮಶೇಖರ್ ಪಾಟೀಲ್, ಅಯ್ಯಣ್ಣಪೂಜಾರಿ, ಲಕ್ಷ್ಮಣ ಗುತ್ತೇದಾರ್, ಶಿವಶರಣರ ಬಬಲಾದಕರ್, ಬಲಭೀಮ ಏಟೆ, ವಿಠ್ಠಲ್ ತೆಗನೂರ್, ಮಂಜುನಾಥ ಸೇರಿದಂತೆ ಮಹಿಳೆಯರು ಭಾಗಿಯಾಗಿದ್ದರು. ಚಂದ್ರಕಾಂತ ಘೋಡಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here