ಕಲಬುರಗಿ: ದೀರ್ಘ ಕಾಲಿನ ಕಾಯಿಲೆಗಳಿಗೆ ಆಯುರ್ವೇದ ಗಿಡಮೂಲಿಕೆ ಔಷಧಿ ಗಳಿಂದ ಗುಣಮುಖವಾಗಲಿದೆ. ಹೀಗಾಗಿ ಆಯುರ್ವೇದ ಉತ್ತಮ ಆರೋಗ್ಯ ಕ್ಕೆ ರಾಮಬಾಣವಾಗಿದೆ ಎಂದು ಸ್ತ್ರೀರೋಗ ಮತ್ತು ಪ್ರಸ್ತುತಿ ತಜ್ಞೆ ಡಾ. ಇಂದಿರಾ ಶಕ್ತಿ ಹೇಳಿದರು.
ನಗರದ ಸಂತ್ರಾಸವಾಡಿಯ ಅತ್ತರ ಕಾಂಪೌಂಡ್ ನಲ್ಲಿ ಶ್ರೀ ಹಿಂಗುಲಾಂಬಿಕಾ ಎಜುಕೇಷನ್ ಸೊಸೈಟಿ ಯ ಆಯುರ್ವೇದ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಪಾಶ್ಚುವಾಯು, ಫಿಜಿಯೋಥೆರಪಿ, ನರಗಳ ದೌರ್ಬಲ್ಯ, ಸೀತ ನೆಗಡಿ ಸೇರಿ ಮಾರಣಾಂತಿಕ ರೋಗ ಉಪಶಮನ ಮಾಡಲಿದೆ. ಈ ನಿಟ್ಟಿನಲ್ಲಿ ರೋಗ ಲಕ್ಷಣಗಳು ಕಂಡೊಂಡನೆ ವೈದ್ಯರು ಮತ್ತು ಆಸ್ಪತ್ರೆಗೆ ಭೇಟಿ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.
ಕೊರೊನಾ ಮುಂಜಾಗ್ರತೆವಹಿಸಿ ರಾಜ್ಯದಲ್ಲಿ ಮತ್ತೆ ಕೋವಿಡ್ ಜೆಎನ್-1 ಸೋಂಕು ಉಲ್ಬಣಸಿದ್ದು, ಸಾರ್ವಜನಿಕರು ಮುಂಜಾಗ್ರತೆವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಬೇಕು. ಅಲ್ಲದೆ ಮನೆ ಸುತ್ತಮುತ್ತ ಸ್ವಚ್ಚತೆ ಕಾಪಾಡಿಕೊಂಡು ರೋಗ ರುಜಿನಗಳು ಹರಡದಂತೆ ಶುಚಿತ್ವ ನರ್ತು ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಆರೋಗ್ಯ ದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಈ ಶಿಬಿರ ದಲ್ಲಿ ಸುಮಾರು 100ಕ್ಕೂ ಹೆಚ್ಚು ರೋಗಿಗಳನ್ನು ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ಇರುವವರಿಗೆ ಔಷಧೋಪಚಾರ ಮಾಡಲಾಯಿತು.
ವೇದಿಕೆಯಲ್ಲಿ ಆಸ್ಪತ್ರೆಯ ಅಧೀಕ್ಷಕಿ ಡಾ. ವಿಜಯಲಕ್ಷ್ಮಿ ಹರನೂರಕರ್, ಕಾಲೇಜಿನ ಪ್ರಾಂಶುಪಾಲ ಡಾ.ಅಲ್ಲಮಪ್ರಭು ಗುಡ್ಡಾ, ಪ್ರಾಧ್ಯಾಪಕ ಡಾ. ರಾಮರಾವ ದೇಶಮುಖ, ಸಹ ಸಂಚಾಲಕಿ ಶೋಭಾ, ವೈದ್ಯರುಗಳಾದ ಡಾ. ಪ್ರದೀಪ, ಶ್ವೇತಾ, ಆಕಾಶ ಸೇರಿದಂತೆ ಅನೇಕರು ಭಾಗವಹಿಸಿದರು.