ಚಂದಾಪುರ: “ಬಹುತೇಕ ಮಕ್ಕಳು ಶಾಲಾ-ಕಾಲೇಜು ಹಂತದಲ್ಲಿ ಡಾಕ್ಟರ್, ಇಂಜಿನಿಯರ್, ಪೋಲಿಸ್ ಆಗ ಬಯಸುತ್ತಾರೆ. ಆದರೆ ಸ್ವಂತ ಉದ್ಯಮಗಳನ್ನು ಪ್ರಾರಂಭಿಸುವ ಆಯ್ಕೆಯ ಬಗ್ಗೆಯೂ ಇಂದಿನ ಮಕ್ಕಳು ತಿಳಿದುಕೊಳ್ಳ ಬೇಕಿದೆ” ಎಂದು ಎಂಟರ್ ಪ್ರನರ್ ಜಗದೀಶ್ ಅರಸು ಅಭಿಪ್ರಾಯಪಟ್ಟರು.
ಇಂದು ಇನ್ವಾಲ್ವ್ ಸಂಸ್ಥೆ ಆನೇಕಲ್ ತಾಲ್ಲೂಕಿನ ಚಂದಾಪುರ ಛತ್ರಖಾನೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಉದ್ಯಮ ಶೀಲತೆಯ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡರು.
ವಿದ್ಯಾರ್ಥಿಗಳೊಂದಿಗಿನ ಈ ಸಂವಾದದಲ್ಲಿ ಇನ್ವಾಲ್ವ್ ಸಂಸ್ಥೆಯ ಮಾಳವೀಕ, ವಾಣಿ ಹಾಗೂ ಗಂಧದನಾಡು ಜನಪರ ವೇದಿಕೆ-ಗಜವೇ ಸಂಸ್ಥಾಪಕ ಅಧ್ಯಕ್ಷರಾದ ವಿಜಯರಾಮ ಹಾಜರಿದ್ದರು.