ಕಲಬುರಗಿ: ನವೋದಯ ಪರಿಶೀಷ್ಠ ಜಾತಿ ಪತ್ತಿನ ಸಹಕಾರ ಸಂಘದ 12ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಇದೇ 8 ರಂದು ನಗರದ ಹನುಮಾನ ಮಂದಿರದ ಶಿವ ಮಂಟಪದಲ್ಲಿ ಜರುಗಲಿದೆ ಎಂದು ಸಂದ ಅಧ್ಯಕ್ಷ ಡಾ. ಸುರೇಶ ಎಲ್ ಶರ್ಮಾ ಅವರು ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ಕಳೆದ ಮೂರು ವರ್ಷಗಳಲ್ಲಿ ಪತ್ತಿನ ಸಹಕಾರ ಸಂಘ ಒಂದು ಕೋಟೆಯ ಹೆಚ್ಚು ವಹಿವಾಟು ನಡೆಸಿದ್ದು, ತಮ್ಮ ಸಾಧನೆಗೆ ಹರ್ಷವ್ಯಕ್ತಪಡಿಸಿ ಮಾತನಾಡಿದ ಅವರು ಮುಂದಿನ ವರ್ಷ ನವೋದಯ ಸಂಸ್ಥೆ ಸ್ವಂತ ಕಟ್ಟಡ ನಿರ್ಮಿಸುವ ಗುರಿ ಹೊಂದಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ನಂತರ ಸಂಘದ ಉಪಾಧ್ಯಕ್ಷ ಶಿವಶರಣಪ್ಪ ಅನವಾರ ಮಾತನಾಡಿ ಸಂಸ್ಥೆ ತಮ್ಮ ಗುರಿತಲುಪಲು ಸಹಕರಿಸ ಸರ್ವ ಸದಸ್ಯರಿಗೆ ಧನ್ಯವಾದ ಸಲ್ಲಿಸಿ 8 ರಂದು ನಡೆಯಲಿರುವ ಸಭೆಗೆ ಸರ್ವ ಸದಸ್ಯರು ಹಾಜರಾಗಲು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಕೆ ಕಲ್ಯಾಣ ರಾವ ಭಾವನಿ, ಬಿ.ಆರ್ ಗುಡ್ದಾ, ಈಶ್ವರ ಇಂಧನ, ಚಂದ್ರಕಾಂತ ಅಸ್ಟಗಿ, ಶೀವಪ್ಪ ಮೇಲಿನ ಮನಿ, ಚಂದ್ರಾಮ್ ಹುಬಳ್ಳಿ ಇದ್ದರು.