ಕಲಬುರಗಿ: ಚಿತ್ತಾಪುರ ಪಟ್ಟಣದ ಹೊರವಲಯದ ಅರಣ್ಯ ಇಲಾಖೆ ಕಚೇರಿಯ ಹತ್ತಿರ ವ್ಯಕ್ತಿ ಓರ್ವನ ಕೊಲೆಯಾದ ಶವ ಶನಿವಾರ ಸಂಜೆ 5 ಗಂಟೆಗೆ ಪತ್ತೆಯಾಗಿರುವ ಘಟನೆ ಜರುಗಿದೆ.
ಕೊಲೆಯಾದ ವ್ಯಕ್ತಿ ಚಿತ್ತಾಪುರ ಪಟ್ಟಣದ ಹೂ ಮಾರಾಟಗಾರ ಮಹ್ಮದ್ ದಾವಲಸಾಬ(25) ಎಂದು ಗುರುತಿಸಲಾಗಿದೆ.
ಶವ ಗುರುತು ಸಿಗದಂತೆ ಮುಖಕ್ಕೆ ಪ್ರೆಟ್ರೋಲ್ ಹಾಕಿ ಸುಟ್ಟಿದ್ದಾರೆ. ಕೊಲೆಯಾದ ವ್ಯಕ್ತಿಯ ಕಾಲು, ಬಟ್ಟೆ, ಚಪ್ಪಲಿಯಿಂದ ಕೊಲೆಯಾದ ವ್ಯಕ್ತಿಯ ತಾಯಿ ಸ್ಥಳಕ್ಕೆ ಬಂದು ಶವ ಗುರುತಿಸಿ ತಮ್ಮ ಮಗ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಶೈಲ್ ಅಂಬಾಟಿ ಹಾಗೂ ಸಿಪಿಐ ಚಂದ್ರಶೇಖರ ತಿಗಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳಕ್ಕೆ ಶ್ವಾನ ಹಾಗೂ ಸಿಬ್ಬಂದಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೊಲೆ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.