ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಮತ್ತು ಸ್ನೇಹ ಮಿಲನ ಕಾರ್ಯಕ್ರಮ

0
129

ಆಳಂದ : ತಾಲೂಕಿನ ಕಮಲ ನಗರ ಸರಕಾರಿ ಪ್ರೌಢ ಶಾಲೆಯಲ್ಲಿ 1997- 98ನೇ ರ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಏರ್ಪಡಿಸಿದ್ದರು. ತಮಗೆ ಜ್ಞಾನರ್ಜನೆ ನೀಡಿದ ಗುರುಗಳನ್ನು ಒಂದೇ ಕಡೆ ಸೇರಿಸಿ ಗೌರವ ಸಲ್ಲಿಸುವ ಒಂದು ಅದ್ಬುತ ಕ್ಷಣಕ್ಕೆ ಇಂದು ಕಮಲ ನಗರ ಹೈಸ್ಕೂಲ್ ಶಾಲಾ ಆವರಣ ಸಾಕ್ಷಿಯಾಯಿತೆಂದು ನಿವೃತ್ತ ಉಪನ್ಯಾಸಕರಾದ ಶಾಂತಲಿಂಗಪ್ಪ ಎಸ್. ಪಾಟೀಲ ಸಂತಸ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಗುರುಗಳ ಮೇಲಿನ ಗೌರವ ಕಡಿಮೆಯಾಗುತ್ತಿರುವುದು ಖೇದದ ಸಂಗತಿಯಾದರೇ, ಇನ್ನೊಂ ದೆಡೆ ಕೆಲ ವಿದ್ಯಾರ್ಥಿಗಳು ಶಿಕ್ಷಣ ನೀಡಿದ ಗುರುಗಳನ್ನು ನೆನೆದು ಶಿಕ್ಷಕ ಗುರುವಂದನೆಯಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶಿಕ್ಷಕರ ಗೌರವವನ್ನು ಹೆಚ್ಚಿಸುವಂತೆ ಮಾಡಿದೆ ಎಂದು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಶಿವಶರಣಪ್ಪಾ ಸಾಲೋಟಗಿ ಮುಖ್ಯ ಗುರುಗಳು ಸರಕಾರಿ ಪ್ರೌಢ ಶಾಲೆ ಗೊಬ್ಬುರು ಮಾತನಾಡಿ ಕೆಸರಲ್ಲೇ ಹುಟ್ಟಿದ್ರು ಕೆಸರನ್ನು ಅಂಟಿಸಿಕೊಂಡಿಲ್ಲ ಅದುವೇ ಈ ನಮ್ಮ ಕಮಲ ನಗರ. ಮನುಷ್ಯನ ಗುಣಗಳಿಗೆ ಸಾವಿಲ್ಲ ಮಾನವನ ಜೊತೆಗೆ ಬರುವುದು ದುಡ್ಡ ಅಲ್ಲ ಮನೆ ಮಠ ಅಲ್ಲ ಆಸ್ತಿ ಅಂತಸ್ತು ಅಲ್ಲ ಜೊತೆಗೆ ಬರುವುದು ಮನುಷ್ಯನ ವ್ಯಕ್ತಿತ್ವ ಒಂದೇ . ಸಮಯದ ಸದುಪಯೋಗ ಪಡೀಕೊಳ್ಳಬೇಕು.ಒಳ್ಳೇದನ್ನ ಮಾಡುವುದಕ್ಕೆ ಯಾವತ್ತೂ ತಡಮಾಡಬಾರದು. ಹಲವು ರೀತಿಯಲ್ಲಿ ಮುಳ್ಳುಗಳು ಬರುತ್ತವೆ ಕೆಟ್ಟವರ ಸಹವಾಸ ಮಾಡ್ಬೇಡಿ ಮಾಡಿದರು ಅದನೆಲ್ಲ ಮೆಟ್ಟಿ ನಿಲ್ಲಿವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕುಪೇಂದ್ರ ಕೆ. ಡೋಣಿ ನಿವೃತ್ತ ಮುಖ್ಯ ಗುರುಗಳು,- ಅವರು ನಡೆದು ಬಂದ ದಾರಿಯ ಬಗ್ಗೆ ಮೆಲಕು ಹಾಕಿದರು.ಅದೇ ರೀತಿ ಲವಕುಮಾರ ನಿವೃತ್ತ ಶಿಕ್ಷಕರು ತಮ್ಮ ಅನುಭವ ಕುರಿತು ಮಾತನಾಡಿದರು. ಹಾಗೆ ವಿದ್ಯರ್ಥಿಯಾದ ಬಸವರಾಜ್ ಬಿರಾದಾರ ಸೇರಿದಂತೆ ಹಲವರು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.

ಗಣಿತ ಗುರುಗಳು ತಮ್ಮಅನುಭವವನ್ನು ಹಂಚಿಕೊಂಡು ಗುರುವನ್ನು ಮೀರಿ ತನ್ನ ವಿದ್ಯಾರ್ಥಿಗಳಿಗೆ ಬೆಳೆದಾಗ ಮಾತ್ರ ಗುರುಗಳಿಗೆ ಹೆಮ್ಮೆಯ ವಿಷಯ ಮತ್ತೊಂದಿಲ್ಲ ಎಂದರು.
ಇನ್ನಿತರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಪ್ರಾಸ್ತಾವಿಕ ಶಿವರುದ್ರಪ್ಪ ನುಡಿ ಆಡಿದರು.
ಪ್ರಕಾಶ್ ರೊಳೆ ನಿರೂಪಿಸಿದರು, ಶಿವರುದ್ರಪ್ಪ ವಂದಿಸಿದರು.
ಇನ್ನೂ ಗುರುವಂದನಾ ಕಾರ್ಯಕ್ರಮದ ಶಿವರುದ್ರಪ್ಪ ಅವರು ಶಿಕ್ಷಕರ ಪರಿಚಯಸಿದರು.

ವೇದಿಕೆ ವತಿಯಿಂದ ವೇದಿಕೆ ಮೇಲಿದ್ದ ಸರ್ವರಿಗೂ ಸನ್ಮಾನಿಸಲಾಯಿತು.ನಿವೃತ್ತ ಉಪನ್ಯಾಸಕರಾದ ಶಾಂತಲಿಂಗಪ್ಪ ಎಸ್. ಪಾಟೀಲ ಅವರು ಬರೆದ ಬಿಸಿಲೂರಿನ ಹಸಿರು ಎಂಬ ಪುಸ್ತಕ ಅವರ ಹಳೆ ವಿದ್ಯಾರ್ಥಿಗಳಿಂದ ಬಿಡುಗಡೆಗೊಳಿಸಲಾಯಿತು.

ಸಮಾಜದ ಸೇವಕರಾದ ಶ್ರೀಕಾಂತ್ ಬಿರಾದಾರ ಅವರಿಂದ ಕವನ ವಾಚನ ಮಾಡಿದರು.ಹಳೇ ವಿದ್ಯಾರ್ಥಿಗಳಿಂದ ಶಾಲೆಗೆ ಕಿರುಕಾಣಿಕೆ ಪ್ರಸ್ತುತ ಓದುತ್ತಿರುವ ಮಕ್ಕಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ದ್ವಿತೀಯ ಸ್ಥಾನ ಪಡೆದ ಮಕ್ಕಳಿಗೆ ಹಳೆ ವಿದ್ಯಾರ್ಥಿಗಳಿಂದ ಕಿರುಕಾಣಿಕೆ ನೀಡಿದರು.

ಒಟ್ಟಿನಲ್ಲಿ ಕಾರ್ಯಕ್ರಮದ ಹಳೆಯ ವಿದ್ಯಾರ್ಥಿಗಳು ಶಿಕ್ಷಕರು, ಸ್ನೇಹಿತರ, ಜೊತೆ ತಮ್ಮ ಸ್ನೇಹ ಮಿಲನ ದಲ್ಲಿ ನಗುತ್ತಾ ತಮ್ಮ ತಮ್ಮ ಬಗ್ಗೆ ಹಂಚಿಕೊಂಡರು. ಇನ್ನೂ ವಿದ್ಯಾರ್ಥಿಗಳ ಬಗ್ಗೆ ಶಿಕ್ಷಕರು ಎಳೆ ಎಳೆಯಾಗಿ ಮೆಲುಕು ಹಾಕಿದರು ಇದೊಂದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಮಚಂದ್ರಪ್ಪ ಗಂಜಿ ನಿವೃತ್ತ ಮುಖ್ಯ ಗುರುಗಳು, ಕುಪೇಂದ್ರ ಕೆ. ಡೋಣಿ ನಿವೃತ್ತ ಮುಖ್ಯ ಗುರುಗಳು, ದೇವಿಂದ್ರಪ್ಪಾ ಕೆ. ಪೋಲಿಸ ಬಿರಾದಾರ ನಿವೃತ್ತ ಶಿಕ್ಷಕರು ಕಮಲ ನಗರ ಎಸ್‌.ಎಸ್. ಯರನಾಳ ನಿವೃತ್ತ ಶಿಕ್ಷಕರು, ಶಾಂತಲಿಂಗಪ್ಪ ಎಸ್. ಪಾಟೀಲ ನಿವೃತ್ತ ಉಪನ್ಯಾಸಕರು, ಕೃಷ್ಣಮೂರ್ತಿ ಕುಲಕರ್ಣಿ ನಿವೃತ್ತ ಉಪನ್ಯಾಸಕರು,ಶಿವಶರಣಪ್ಪಾ ಸಾಲೋಟಗಿ ಮುಖ್ಯ ಗುರುಗಳು ಸರಕಾರಿ ಪ್ರೌಢ ಶಾಲೆ ಗೊಬ್ಬುರ (ಬಿ),ಲವಕುಮಾರ ನಿವೃತ್ತ ಶಿಕ್ಷಕರು,ಮೌನಪ್ಪ ಸುತಾರ ನಿವೃತ್ತ ಶಿಕ್ಷಕರು,ಅಣ್ಣಾರಾವ ಬೆಟ್ಟ ಜೇವರ್ಗಿ ನಿವೃತ್ತ ಶಿಕ್ಷಕರು, ರಾಮಲಿಂಗಪ್ಪ ನಿವೃತ್ತ ಶಿಕ್ಷಕರು,ರಾಣಪ್ಪ ಲೇಂಗಟಿ ನಿವೃತ್ತ ಶಿಕ್ಷಕರು,ಶಂಕರರಾವ ಸಲಗರ ನಿವೃತ್ತ ಶಿಕ್ಷಕರು,ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕಮಲಾನಗರ,ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಮದಾನಗರ ಕಮಲ ನಗರ ಗ್ರಾಮದ ಅನೇಕ ನಾಗರಿಕರು ಭಾಗವಹಿಸಿದ್ದರು .

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here