ಸುರಪುರ: ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿರುವ ಅವಧೂಥ ಸುಖಮುನಿ ಮಹಾರಾಜರ ಆಶ್ರಮದಲ್ಲಿ ಶ್ರೀ ಶರಣಬಸವ ಸಾಧು ಮಹಾರಾಜ ಶ್ರಾವಣ ಮಾಸದ ಅಂಗವಾಗಿ ಸತತ ಮೂವತ್ತು ವರ್ಷಗಳಿಂದ ನಡೆಸಿಕೊಂಡು ಬರುವ ಮೌನ ಅನುಷ್ಠಾನ ಕಾರ್ಯಕ್ರಮದ ಮಂಗಲೋತ್ಸವ ಕಾರ್ಯಕ್ರಮ ನಡೆಯಿತು.
ಇದಕ್ಕೂ ಮುನ್ನ ಗ್ರಾಮದ ಬಲಭೀಮೇಶ್ವರ ದೇವಸ್ಥಾನದಲ್ಲಿ ಸತತ ಒಂದು ತಿಂಗಳ ಕಾಲ ನಡೆದ ಭಜನಾ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದ ಅಂಗವಾಗಿ ಶ್ರಾವಣ ಮಾಸದ ಕೊನೆಯ ದಿನ ರಾತ್ರಿಯಿಡೀ ಭಜನೆ ಕಾರ್ಯಕ್ರಮ ನಡೆಸಿ,ಬೆಳಿಗ್ಗೆ ದೇವಸ್ಥಾನದಿಂದ ಗ್ರಾಮದಲ್ಲಿ ಬಲಭೀಮೇಶ್ವರ ಮೆರವಣಿಗೆ ನಡೆಸಿ ಅವಧೂತ ಸುಖಮುನಿ ಮಹಾರಾಜರ ಆಶ್ರಮಕ್ಕೆ ಬಂದು ತಲುಪಿತು.ನಂತರ ಶರಣಬಸವ ಸಾಧು ಮಹಾರಾಜರ ಮೌನ ಅನುಷ್ಠಾನ ಮಂಗಲ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಭೀಮಶೇನರಾವ್ ಜೋಷಿ,ನಂದಣ್ಣ ಪೂಜಾರಿ, ದೇವಸ್ಥಾನದ ಅರ್ಚಕ ಕಟ್ಟೆಪ್ಪ ಪೂಜಾರಿ,ಬಲಭೀಮಪ್ಪ ಸಾಹುಕಾರ,ನಾಗನಗೌಡ ಪಾಟೀಲ,ಬಲಭೀಮಪ್ಪ ಹವಲ್ದಾರ,ಹುಸೇನಬಾಷಾ ಮಂಡಗಳ್ಳಿ,ಭೀಮರಾಯ ಒಂಟೆತ್ತು,ಬಸವರಾಜ ಹವಲ್ದಾರ,ಭೀರಪ್ಪ ಕರಿಕುರಿ,ಸಿದ್ದಣ್ಣ ಸಜ್ಜನ್,ಭೀಮರಾಯ ಪೂಜಾರಿ,ನಾಗಪ್ಪ ಗದ್ದೆಗೋಳ್,ಪರಮಣ್ಣಗೌಡ ದೊಡ್ಡಮನಿ,ಸಿದ್ದಣ್ಣ ದೊರಿ,ಮದನಪ್ಪ ಹವಲ್ದಾರ,ಭೀಮಣಗೌಡ ಪಾಟೀಲ,ನಾಗಪ್ಪ ಗೊರಕಿ,ಹಣಮಯ್ಯ ಗುತ್ತೇದಾರ,ರಾಮಣ್ಣ ಕಂಬಾರ,ಬಸವರಾಜ ಕರಿಕುರಿ,ಯಂಕಪ್ಪ ಪೂಜಾರಿ,ಹಣಮಂತ ದೊರೆ ಸೇರಿದಂತೆ ಅನೇಕರಿದ್ದರು.