ಸ್ಲಂ ನಿವಾಸಿಗಳ ವಸತಿ ಯೋಜನೆಗೆ ಹಣ ಮಂಜೂರು; ಸ್ಲಂ ಜನರ ಹೋರಾಟಕ್ಕೆ ಸಂದ ಜಯ

0
11

ಕಲಬುರಗಿ: ಚುನಾವಣಾ ಪೂರ್ವದಲ್ಲಿ ರಾಜ್ಯದಲ್ಲಿ ಸ್ಲಂ ನಿವಾಸಿಗಳಿಗೆ ಕಾಂಗ್ರೆಸ್ ಪಕ್ಷದ “ಸರ್ವಜನಾಂಗದ ಶಾಂತಿಯ ತೋಟದ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ 21 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೊಳಗೇರಿ ನಿವಾಸಿಗಳಿಗೆ ಮನೆ ನಿರ್ಮಾಣಕ್ಕೆ 6,170 ಕೋಟಿ ಬೃಹತ್ ಪ್ರಮಾಣದ ಅನುದಾನ ಮಂಜೂರು ಮಾಡಿ ಫಲಾನುಭವಿಗಳ ವಂತಿಕೆ ಹಣವನ್ನು ಸರ್ಕಾರವೇ ಪಾವತಿಸಲು ಮುಂದಾಗಿರುವುದನ್ನು ಸ್ಲಂ ಜನಾಂದೋಲನ-ಕರ್ನಾಟಕದಿಂದ ಸ್ವಾಗತಿಸುತ್ತೇವೆ ಎಂದು ಸ್ಲಂ ಜನಾಂದೋಲನ ಸಂಚಾಕಿ ರೇಣುಕಾ ಸರಡಗಿ ಅವರು ಹೇಳಿದರು.

2023ರ ವಿಧಾನ ಸಭಾ ಚುನಾವಣೆಯಲ್ಲಿ ಸ್ಲಂ ಜನಾಂದೋಲನ-ಕರ್ನಾಟಕ ಸಂಘಟನೆಯಿಂದ ರಾಜ್ಯದ ಒಂದು ಸಾವಿರಕ್ಕೂ ಮೇಲ್ಪಟ್ಟ ಕೊಳಚೆ ಪ್ರದೇಶಗಳಲ್ಲಿ “ಸಂವಿಧಾನ ರಕ್ಷಣೆ ಮತ್ತು ಬಹುತ್ವ ಕರ್ನಾಟಕದ ಘೋಷಣೆಯೊಂದಿಗೆ” ನಮ್ಮ ಮತ ವಸತಿ ಹಕ್ಕಿಗಾಗಿ ಹಾಗೂ ಸ್ಲಂ ಜನರ ವಿಮೋಚನೆಗಾಗಿ ಎಂಬ ಜಾಗೃತಿಯೊಂದಿಗೆ ರಾಜ್ಯಾದ್ಯಂತ ಸ್ಲಂ ಜನರಲ್ಲಿ ಜಾಗೃತಿ ಕೈಗೊಂಡ ಪರಿಣಾಮ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣೆ ಹಿಡಿಯಲು ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.

Contact Your\'s Advertisement; 9902492681

ರಾಜ್ಯಾದ್ಯಂತ ಸ್ಲಂ ಜನಾಂದೋಲನ-ಕರ್ನಾಟಕದಿಂದ ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಹಾಗೂ ವಸತಿ ಸಚಿವರ ಮೇಲೆ ನಿರಂತರವಾಗಿ ಒತ್ತಡ ತಂದಿದ್ದರಿಂದ ಸರ್ಕಾರದ 6ನೇ ಗ್ಯಾರಂಟಿ ಸ್ಲಂ ನಿವಾಸಿಗಳ ವಸತಿ ಯೋಜನೆಗೆ ಹಣ ಮಂಜೂರು ಮಾಡಿರುವುದು ಸ್ಲಂ ಜನರ ನಡೆಸಿದ ನಿರಂತರ ಹೋರಾಟಕ್ಕೆ ಸಂದ ಜಯವಾಗಿದೆ.

ಸ್ಲಂ ಜನಾಂದೋಲನ-ಕರ್ನಾಟಕದಿಂದ ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತರಲು, ಕರ್ನಾಟಕ ಸಮಗ್ರ ಸ್ಲಂ ಅಭಿವೃದ್ಧಿ ಕಾಯಿದೆ 2018ರ ಕರಡು ಜಾರಿಗಾಗಿ, ರಾಜ್ಯದಲ್ಲಿ ವಸತಿ ಹಕ್ಕು ಕಾಯಿದೆ ಜಾರಿ ಮಾಡಲು, ಸ್ಲಂ ನಿವಾಸಿಗಳ ಜನಸಂಖ್ಯೆ ಅನುಗುಣವಾಗಿ ಬಜೆಟ್‍ನಲ್ಲಿ ಪಾಲು ನಿಗಧಿಗೊಳಿಸಲು, ಸ್ಲಂ ನಿವಾಸಿಗಳಿಗೆ ಭೂ ಒಡೆತನ ನೀಡಬೇಕೆಂದು, ನಗರ ಲ್ಯಾಂಡ್ ಬ್ಯಾಂಕ್ ಯೋಜನೆ ಜಾರಿಗೊಳಿಸಲು, ಸರ್ಕಾರ ಅಥವಾ ಸ್ಲಂ ಜನರೇ ವಸತಿ ನಿರ್ಮಾಣ ಮಾಡುವ ಸಿ.ಎಂ ಹೌಸಿಂಗ್ ಯೋಜನೆ ಜಾರಿಗೊಳಿಸಲು ಮತ್ತು ರಾಜ್ಯದಲ್ಲಿ ಸ್ಲಂ ಜನಸಂಖ್ಯೆ ಆಧಾರದಲ್ಲಿ ಪ್ರತ್ಯೇಕ ಸಚಿವಾಲಯವನ್ನು ರಚಿಸಬೇಕೆಂದು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ನಮ್ಮ ಹಕ್ಕೋತ್ತಾಯಗಳನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಈಡೇರಿಸಲು ಮುಂದಾಗಬೇಕೆಂದು ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here