ಕರ್ನಾಟಕ ಸಂಭ್ರಮ ರಥಯಾತ್ರೆಗೆ ಭವ್ಯ ಸ್ವಾಗತ: ಅದ್ಧೂರಿ ಮೆರವಣಿಗೆ

0
14

ಸುರಪುರ: ಕರ್ನಾಟಕ ನಾಮಕರಣಗೊಂಡು 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಕರ್ನಾಟಕ ಸಂಭ್ರಮ ರಥಯಾತ್ರೆ ನಗರಕ್ಕೆ ಆಗಮಿಸಿದ್ದು ತಾಲೂಕು ಆಡಳಿತ ದಿಂದ ಭವ್ಯ ಸ್ವಾಗತ ಕೋರಿ,ಅದ್ಧೂರಿ ಮೆರವಣಿಗೆ ನಡೆಸಲಾಯಿತು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ರಥ ಯಾತ್ರೆಗೆ ತಾಲೂಕು ಆಡಳಿತ ದಿಂದ ಸ್ವಾಗತಿಸಿ ಕನ್ನಡ ಭುವನೇಶ್ವರಿಗೆ ಪೂಜೆ ಸಲ್ಲಿಸಿ ನಂತರ ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.ನಂತರ ನಗರದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ನಡೆಸಲಾಯಿತು.

Contact Your\'s Advertisement; 9902492681

ರಂಗಂಪೇಟೆಯ ದೊಡ್ಡ ಬಜಾರ ಮೂಲಕ ಪ್ರಮುಖ ಬೀದಿಗಳ ಮೂಲಕ ತಿಮ್ಮಾಪುರ ಮಾರ್ಗವಾಗಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದ ವರೆಗೆ ಅದ್ಧೂರಿ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ಡೊಳ್ಳು ಕುಣಿತ,ಛದ್ಮ ವೇಷ ಸೇರಿದಂತೆ ವಿವಿಧ ಕಲಾ ತಂಡಗಳು ಹಾಗೂ ಶಾಲಾ ಕಾಲೇಜುಗಳ ನೂರಾರು ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ಅಲ್ಲದೆ ಕರವೇ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಅನೇಕ ಮುಖಂಡರು ನೂರಾರು ಕಾರ್ಯಕರ್ತರು ಕನ್ನಡ ಧ್ವಜ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡು ಕನ್ನಡ ಅಭಿಮಾನ ಮೆರೆದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ.ವಿಜಯಕುಮಾರ,ತಾ.ಪಂ ಇಓ ಬಸವರಾಜ ಸಜ್ಜನ್,ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಿಲ್ಲಾ ಉಪ ನಿರ್ದೇಶಕಿ ಉತ್ತರದೇವಿ ಮಠಪತಿ,ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ,ನಗರಸಭೆ ಪೌರಾಯುಕ್ತ ಜೀವನಕುಮಾರ್ ಕಟ್ಟಿಮನಿ,ನಿವೃತ್ತ ಉಪನ್ಯಾಸಕ ವೇಣುಗೋಪಾಲ ನಾಯಕ ಜೇವರ್ಗಿ,ಶೀಕ್ಷಣ ಕ್ಷೇತ್ರದ ಪಂಡಿತ ನಿಂಬೂರ,ಯಲ್ಲಪ್ಪ ಕಾಡ್ಲೂರ,ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ,ಕಸಾಪ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಜಾಲವಾದಿ,ಮುಖಂಡರಾದ ರಮೇಶ ದೊರೆ ಆಲ್ದಾಳ,ವೆಂಕಟೇಶ ಬೇಟೆಗಾರ,ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಮಹಿಳಾ ಮೇಲ್ವಿಚಾರಕಿ ಜಯುಶ್ರೀ ಬಿರಾದಾರ,ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಕುಮುಂದ ನಾಯಕ, ಕರವೇ ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ,ಹೋರಾಟಗಾರರಾದ ನಿಂಗಪ್ಪ ನಾಯಕ ಬಿಜಾಸಪುರ,ಯಲ್ಲಪ್ಪ ನಾಯಕ,ಕಮಲಾಕರ ಅರಳಿಗಿಡ,ಕಲ್ಯಾಣಕುಮಾರ ಸಜ್ಜನಶೆಟ್ಟಿ, ರವಿನಾಯಕ ಬೈರಿಮಡ್ಡಿ,ಯಲ್ಲಪ್ಪ ನಾಯಕ,ಶ್ರೀಶೈಲ ಯಂಕಂಚಿ,ದೇವಿಂದ್ರಪ್ಪ ಕರಡಕಲ್,ರಾಘವೇಂದ್ರ ಭಕ್ರಿ,ಮಲ್ಲು ವಿಷ್ಣು ಸೇನಾ,ಹಣಮೆಗೌಡ ಶಖಾಪುರ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here