ಸುರಪುರ: ದೇಶದಲ್ಲಿನ ಎಲ್ಲಾ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಜನವೆರಿ 23 ರಿಂದ ಮೂರು ದಿನಗಳ ಕಾಲ ದೇಶದಲ್ಲಿನ ಸಂಸದರ ಮನೆಗಳ ಮುಂದೆ ಪ್ರತಿಭಟನೆಯನ್ನು ನಡೆಸಿ ಒತ್ತಾಯಿಸಲಾಗುವುದು ಎಂದು ಸಿಯಟಿಯು ರಾಜ್ಯಾಧ್ಯಕ್ಷ ಎಸ್.ವರಲಕ್ಷ್ಮೀ ತಿಳಿಸಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿ,ದೇಶದಲ್ಲಿ 48 ಕೋಟಿಯಷ್ಟು ಕಾರ್ಮಿಕರಿದ್ದು ಅನೇಕ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು ಸರಕಾರಗಳು ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ,ಈಗ 2024 ರಲ್ಲಿ ಮತ್ತೆ ಲೋಕಸಭಾ ಚುನಾವಣೆ ಬರುತ್ತಿದ್ದು ಅದಕ್ಕೂ ಮುನ್ನ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲು ಎಲ್ಲಾ ಸಂಸದರ ಮನೆ ಮುಂದೆ ಪ್ರತಿಭಟನೆ ನಡೆಸಿ ಒತ್ತಾಯಿಸಲಾಗುವುದು ಎಂದರು.
ನಮ್ಮ ಪ್ರಮುಖ ಬೇಡಿಕೆ ಎಂದರೆ ದೇಶದಲ್ಲಿನ ಎಲ್ಲಾ ಕಾರ್ಮಿಕರಿಗೆ ಮೊದಲು ಕನಿಷ್ಠ ಸಂಬಳ 31 ಸಾವಿರ ರೂಪಾಯಿ ನೀಡುವ ಕಾನೂನು ಜಾರಿಗೊಳಿಸಬೇಕು ಹಾಗೂ ಇನ್ನುಳಿದ ಎಲ್ಲಾ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಪದಾಧಿಕಾರಿಗಳಾದ ಶಾಂತಾ ಎನ್.ಗಂಟಿ,ಬಸಲಿಂಗಮ್ಮ ನಾಟೆಕರ್,ಸುರೇಖಾ ಕುಲಕರ್ಣಿ,ಬಸಮ್ಮ ಆಲ್ಹಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.