ಅಧಿಕಾರಿಗಳ ಕುಮ್ಮಕಿನಿಂದ ಸುಲೇಪೇಟನಲ್ಲಿ ಅಕ್ರಮ ಸವಳು ಗಣಿಗಾರಿಕೆ; ವಿಠಲ್ ಎಸ್. ಕುಸಾಳೆ ಆರೋಪ

0
28

ಕಲಬುರಗಿ; ಸುಲೇಪೇಟ ಗ್ರಾಮದಿಂದ ಕೊರವಿ, ಕುಡ್ಡಳ್ಳಿ ಗ್ರಾಮದ ವರೆಗೆ ಗಣಿಲೀಜ್ ಪಡೆಯದೆ. ನೂರಾರು ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ಸವಳು ಗಣಿಗಾರಿ ಮಾಡಿ, ಅದನ್ನು ಹತ್ತಾರು ಟಿಪ್ಪರಗಳಲ್ಲಿ ಲೋಡ್ ಮಾಡಿ ಬೇರೆ ಬೇರೆ ಕಡೆ ಅಕ್ರಮ ಸರಬರಾಜು ಮಾಡುತ್ತಿದ್ದು ಮತ್ತು ಒಂದೆರಡು ಟಿಪ್ಪರಗಳಿಗೆ ಮಾತ್ರ ರಾಯಲ್ಟಿ ಕಟ್ಟಿ, ಉಳಿದ ಟಿಪ್ಪರ್‍ಗಳಿಗೆ ರಾಯಲ್ಟಿ ಕಟ್ಟದೆ ಸರ್ಕಾರಕ್ಕೆ ಮೋಸ ಮತ್ತು ವಂಚನೆ ಮಾಡುತ್ತಿರುವ ವಿಷಯದ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೂರು ಸಲ್ಲಿಸಿದರೂ ಕೂಡ ಯಾವುದೆ ಕ್ರಮ ಕೈಗೊಡಿಲ್ಲಾ ಎಂದು ವೀರ ಕನ್ನಡಿಗರ ಸೇನೆ ತಾಲೂಕಾ ಅಧ್ಯಕ್ಷ ವಿಠಲ್ ಎಸ್. ಕುಸಾಳೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಚಿಂಚೋಳಿ ತಾಲ್ಲೂಕಿನ, ಸುಲೇಪೇಟ ಗ್ರಾಮದಿಂದ ಕಾಳಗಿ ತಾಲ್ಲೂಕಿನ, ಕೋರವಿ, ಕುಡ್ಡಳ್ಳಿ ಗ್ರಾಮದ ವರೆಗೆ ವಿವಿಧ ಸರ್ವೆನಂಬರಗಳಲ್ಲಿ ಸುಮಾರು 15-20 ವರ್ಷಗಳಿಂದ ಕಾನೂನು ಬಾಹಿರವಾಗಿ ಮತ್ತು ಅಕ್ರಮವಾಗಿ ನೂರಾರು ಎಕರೆ ಪ್ರದೇಶದಲ್ಲಿ ಸವಳು ಗಣಿಗಾರಿಕೆ ಮಾಡುತ್ತಿದ್ದಾರೆ. ಇವರು ಕೇವಲ ಎರಡು ಎಕರೆ ಪ್ರದೇಶದ ಸವಳು ಗಣಿಗಾರಿಕೆಗಾರಿಕೆಗಾಗಿ ಲೀಜ್ ಪಡೆದುಕೊಂಡಿದ್ದು, ಉಳಿದ ಜಮೀನಿನಲ್ಲಿ ಕಾನೂನು ಬಾಹಿರವಾಗಿ ಆಕ್ರಮ ಗಣಿಗಾರಿಕೆ ಮಾಡುತ್ತಿದ್ದಾರೆ. ಗಣಿಗಾರಿಕೆಯಿಂದ ತೆಗೆದ ಸವಳು ಮಣ್ಣು ಅಕ್ರಮವಾಗಿ ದಾಸ್ತಾನು ಮಾಡಿ, ಹತ್ತಾರು ಟಿಪ್ಪರಗಳಲ್ಲಿ ಮತ್ತು ಟ್ರ್ಯಾಕ್ಟರಗಳಲ್ಲಿ ಅನ್ಯ ರಾಜ್ಯಗಳಿಗೆ ಸರಬರಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Contact Your\'s Advertisement; 9902492681

ಒಂದು ದಿವಸಕ್ಕೆ 25-30 ಟಿಪ್ಪರಗಳು ಸರಬರಾಜು ಮಾಡಿದರೆ, ಅವರು 2-3 ಟಿಪ್ಪರಗಳಿಗೆ ಮಾತ್ರ ರಾಯಲ್ಟಿ ಕಟ್ಟುತ್ತಿದ್ದಾರೆ. ಉಳಿದ ಟಿಪ್ಪರಗಳ ರಾಯಲ್ಟಿ ಕಟ್ಟದೆ ಸರ್ಕಾರಕ್ಕೆ ಮೋಸ ಮತ್ತು ವಂಚನೆ ಮಾಡಿ, ಸರ್ಕಾರದ ಭೋಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿದ್ದಾರೆ. ಈ ಆಕ್ರಮ ಗಣಿಗಾರಿಕೆಯಲ್ಲಿ ಸ್ಥಳೀಯ ಅಧಿಕಾರಿಗಳೊಂದಿಗೆ ಶಾಮಿಲಾಗಿ ಈ ಆಕ್ರಮ ಚಟುವಟಿಕೆ ಅಧಿಕಾರಿಗಳು ಕುಮ್ಮಕ್ಕು ನೀಡುವಂತಾಗಿದೆ ಎಂದು ತಿಳಿಸಿದ್ದಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆರವರಿಗೆ ಈ ಹಿಂದೆ ಅಂದರೆ ಮೋಖಾದ ಮೇಲೆ ಬಂದು ಪರಿಶೀಲನೆ. ಸರ್ವೆ ಮಾಡಿ, ಅದಕ್ಕೆ ಸಂಬಂಧಿಸಿದ ದಾಖಲಾತಿಗಳು ಕೂಡ ಪರಿಶೀಲನೆ ಮಾಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಮತ್ತು ಮೇಲೆ ತೋರಿಸಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಂಡು, ಕಾನೂನು ಬಾಹಿರವಾಗಿ ನಡೆಸುತ್ತಿರುವ ಸವಳು ಸವಳು ಗಣಿಗಾರಿಕೆ, ಅಕ್ರಮ ದಾಸ್ತಾನು ತಮ್ಮ ಕಬ್ಬೆಗೆ ತೆಗೆದುಕೊಂಡು, ಅವರ ಗಣಿ ಲೀಜ್‍ನ್ನು ರದ್ದುಪಡಿಸಿ, ಗಣಿ ಪ್ರದೇಶ ಸರ್ವೆ ಮಾಡಿ, ಇಲ್ಲಿಯವರೆಗೆ ಎಷ್ಟು ಗಣಿಗಾರಿಕೆ ಮಾಡಿ ಸವಳು ಸರಬರಾಜು ಮಾಡಿರುವ ಮೊತ್ತವನ್ನು ಅವರಿಂದ ವಸೂಲಿ ಮಾಡಿ, ಸರ್ಕಾರದ ಭೋಕ್ಕಸಕ್ಕೆ ಜಮಾ ಮಾಡಿಸಿಕೊಳ್ಳಬೇಕೆಂದು ಸಂಘಟನೆ ಪ್ರತಿಭಟನೆ ಮಾಡಿ ದೂರು ಸಲ್ಲಿಸಿದರು ಪ್ರಯೋಜನವಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಈ ಅಕ್ರಮ ಗಣಿಗಳಿಗೆ ಈ ಎಲ್ಲಾ ಅಧಿಕಾರಿಗಳು ಶಾಮೀಲಾಗಿರವ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಎಂದು ವಿಠಲ್ ಎಸ್. ಕುಸಾಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here