ವಾಡಿ; ಪಟ್ಟಣದ ಅಭಿವೃದ್ಧಿಗಾಗಿ ಹಾಗು ಆದಾನಿ ಒಡೆತನದ ಎಸಿಸಿ ಕಂಪನಿಯ ಪರಿಸರ ನಿಸ್ಕಾಳಜಿ ಬಗ್ಗೆ ಕಳೆದ ನವೆಂಬರ 20 ರಂದು ಪಟ್ಟಣದ ಶ್ರೀನಿವಾಸ ಚೌಕನಲ್ಲಿ ಬೃಹತ ಪ್ರತಿಭಟನೆ ಮೂಲಕ ನ್ಯಾಯಕ್ಕಾಗಿ ಹೋರಾಟ ಮಾಡಿದರು ಯಾವ ಅಧಿಕಾರಿಗಳು ಇನ್ನೂ ವರೆಗೂ ಸ್ಪಂದಿಸದೆ ಅಧಿಕಾರಿಗಳು ಕೈಕಟ್ಟಿ ಕುಳಿತ್ತಿದ್ದಾರೆ ಎಂದು ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದಲ್ಲಿನ ಮುಖ್ಯ ರಸ್ತೆಯ ಕಳಪೆ ಕಾಮಗಾರಿ ಬಗ್ಗೆ, ಎಸಿಸಿ ಕಾರ್ಖಾನೆಯು ಪರಿಸರ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ,ಡಾ ಬಾಬ ಸಾಹೇಬ್ ಅಂಬೇಡ್ಕರ ಅವರ ಭವನ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಬಗ್ಗೆ, ಬಸ್ ನಿಲ್ದಾಣ ನಿರ್ಮಾಣದ ಬಗ್ಗೆ,ಎಸಿಸಿ ಕಂಪನಿಯ ಆಡಳಿತ ಮಂಡಳಿಯವರು ಸ್ಥಳೀಯ ಬಡ ಕಾರ್ಮಿಕರಿಗೆ ಮಾಡಿರುವ ಮತ್ತು ಮಾಡುತ್ತಿರುವ ಅನ್ಯಾಯದ ಬಗ್ಗೆ, ಗ್ರಂಥಾಲಯ, ಆಟದ ಮೈದಾನ ಹಾಗೂ ಸಾರ್ವಜನಿಕ ಉದ್ಯಾನವನ ಸೇರಿದಂತೆ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ಕಳೆದ ನವೆಂಬರ್ 20 ರಂದು ವಾಡಿ ಪಟ್ಟಣದ ಶ್ರೀನಿವಾಸ ಗುಡಿ ವೃತ್ತದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಶಾಂತಿಯುತ ಪ್ರತಿಭಟನೆ ಮಾಡಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ತಾಲೂಕಿನ ತಹಶಿಲ್ದಾರರಾದ ಸೈಯದ್ ಷಾಷಾವಲಿ ಸರ್ ಅವರ ಮುಖಾಂತರ ಮನವಿಸಲ್ಲಿಸಿದ್ದೇವೆ.
ಒಂದು ವಾರದೊಳಗೆ ಇದನ್ನು ಪರಿಹರಿಸಿ ಇಲ್ಲದಿದ್ದರೆ ನಾವು ಮತ್ತೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹೇಳಿದ್ದೇವು. ಒಂದು ವಾರದ ನಂತರ ಮತ್ತೆ ಅವರ ಗಮನಕ್ಕೆ ತಂದರೂ ಯಾವುದೇ ಬೇಡಿಕೆಗೆ ಬೆಲೆ ಕೂಡದೆ ನಮ್ಮ ಹೋರಾಟಕ್ಕೆ , ಪ್ರತಿಭಟನೆಯ ಮನವಿ ಪತ್ರಕ್ಕೆ ಹಿಂಬರಹ ಸಹ ನೀಡಿದೇ ಜವಾಬ್ದಾರಿಯುತ ಅಧಿಕಾರಿಗಳು ತಮ್ಮ ಕರ್ತವ್ಯವೇ ಮರೆತಂತಿದೆ ಎಂದರು.
ಈ ರೀತಿ ನಮ್ಮ ನ್ಯಾಯಯುತ ಹೋರಾಟಕ್ಕೆ ಸ್ಪಂದಿಸದ ಸಂವಿಧಾನ ವಿರೋಧಿ ಮತ್ತು ಜನ ವಿರೋಧಿ ಅಧಿಕಾರಿಗಳ,ಗುತ್ತಿಗೆದಾರರ ಹಾಗೂ ಕಂಪನಿ ಆಡಳಿತ ಮಂಡಳಿಯವರ ವಿರುದ್ಧ ಕೆಲವೇ ದಿನಗಳಲ್ಲಿ ಪಕ್ಷದ ಪ್ರಮುಖರ ಮತ್ತು ಪಟ್ಟಣದ ನಾಗರಿಕ ಅಭಿಪ್ರಾಯ ಪಡೆದು ನ್ಯಾಯಕ್ಕಾಗಿ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.