ಡಾ: ಭುರ್ಲಿ ಪ್ರಹ್ಲಾದ ಅವರಿಗೆ ಯುವ ವಿಕಾಸ ಪ್ರಶಸ್ತಿ

0
15

ಕಲಬುರಗಿ: ಬಿ.ವಿ.ಎಸ್‍ಯುವಶಕ್ತಿ ಸಂಗಮ್ ಸಮ್ಮೇಳನದಲ್ಲಿ ಡಾ: ಭುರ್ಲಿ ಪ್ರಹ್ಲಾದ್ ಪ್ರಾಚಾರ್ಯರು, ರಮಾಬಾಯಿಜಹಾಗೀರದಾರ ಸ್ವತಂತ್ರ ವಿಜ್ಞಾನ ಪದವಿ ಪೂರ್ವಕಾಲೇಜು ಕಲಬುರಗಿ ಇವರಿಗೆ“ಯುವ ವಿಕಾಸ ಪ್ರಶಸ್ತಿ”ನ್ನು ಯುವ ಸಬಲೀಕರಣ ಕ್ಷೇತ್ರದಲ್ಲಿ ಕಾರ್ಯ ಸಾಧನೆಗೆ ಜಾಗತೀಕ ಯೋಗಾಸಮ್ಮೇಳನ-2023 ಬೆಂಗಳೂರಿನ ಅರಮನೆ ಮೈದಾನದಲ್ಲಿ ನೀಡಲಾಯಿತು.

ಈ ಸಂದರ್ಭದಲ್ಲಿ “ಪ್ರಾಣಿಗಳ ಸಂರಕ್ಷಣೆಯಲ್ಲಿಯುವಕರ ಪಾತ್ರ” ಎಂಬ ವಿಷಯದ ಮೇಲೆ ಸಂಶೋಧನಾ ಉಪನ್ಯಾಸವನ್ನು ಮಂಡಿಸಿದರು. ಈ ಜಾಗತೀಕ ಸಮ್ಮೇಳನದಲ್ಲಿ 21 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕಲ್ಯಾಣ ಕರ್ನಾಟಕ ಭಾಗದಿಂದ ಡಾ. ಭುರ್ಲಿ ಪ್ರಹ್ಲಾದರನ್ನುಆಯ್ಕೆ ಮಾಡಲಾಗಿತ್ತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಡಾ: ವಾಸುದೇವ ಅಗ್ನಿಹೋತ್ರಿ, ಡಾ: ಸಿ.ಆರ್ ಧವಳಗಿ, ಡಾ: ಕವಿತಾ ಮಿಶ್ರಾ, ಪ್ರಭಾಕರ ಜೋಶಿ, ಸಂಜೀವ ಸಿರನೂರಕರ್, ಡಾ: ಜಸ್ಟಿಸ್, ಪದ್ಮಾಕಾ ಖಂಡಕಿ, ನಟ ನಿರ್ದೇಶಕ ಪ್ರಕಾಶ ಬೆಳವಾಡಿ ಉಪಸ್ಥಿತರಿದ್ದರು.

ಈ ಸಾಧನೆಗೆ ಸರದಾರ ವಲ್ಲಭಭಾಯಿ ಪಟೇಲ್ ಆಡಳಿತ ಮಂಡಳಿಯ ಸರ್ವ ಸದಸ್ಯರು, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಬಳಗ, ಮಿತ್ರ ಮಂಡಳಿಯವರು ಶುಭಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here