ಕಲಬುರಗಿ; ಜಿಲ್ಲೆಯ ಕಾಳಗಿ ಪಟ್ಟಣದಲ್ಲಿ ಕುರುಬ ಸಮುದಾಯವನ್ನ ಎಸ್ಟಿಗೆ ಸೇರ್ಪಡೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕುರುಬ ಗೊಂಡ ಸಂಘದಿಂದ ತಾಲ್ಲೂಕ ಅಧ್ಯಕ್ಷ ರೇವಣಸಿದಪ್ಪ ಅಣಕಲ ಗಡಿಖೇಶ್ವಾರ ನೇತೃತ್ವದಲ್ಲಿ ಬೃಹತ ಪ್ರತಿಭಟನೆ ಮಾಡಿದರು.
ಪ್ರತಿಭಟನೆ ಕಾರರು ಪಟ್ಟಣದ ನೀಲಕಂಠ ಕಾಳೇಶ್ವರ ದೇವಸ್ಥಾನದಿಂದ ತಹಸೀಲ್ ಕಛೇರಿವರೆಗೆ ಡೊಳ್ಳಿನ ಮೆರವಣಿಗೆಯೊಂದಿಗೆ ನೂರಾರು ಜನರು ಬೃಹತ್ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕ ಅಧ್ಯಕ್ಷ ರೇವಣಸಿದಪ್ಪ ಅಣಕಲ ಗಡಿಕೇಶ್ವಾರ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಕುರುಬ ಸಮಾಜ ಎಸ್.ಟಿಯಲ್ಲಿ ಇತ್ತು. ಆದರೆ ಕೆಲ ಕುತಂತ್ರಿಗಳಿಂದ ಈಗ 2ಎ ದಲ್ಲಿ ಇದ್ದೇವೆ. ಕಳೆದ 40-50 ವರ್ಷಗಳಿಂದ ನಮ್ಮ ಹಕ್ಕು ನಮಗೆ ನೀಡದೆ ಅನ್ಯಾಯ ಮಾಡುತ್ತಿದ್ದಾರೆ. ಹೀಗಾಗಿ ನಮ್ಮ ಹಕ್ಕಿಗಾಗಿ ನಾವು ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು. ನಮಗೆ ಸರ್ಕಾರದಿಂದ ಸಿಗಬೇಕಾದ ಹಕ್ಕುಗಳು ಸಿಗದಿದ್ದಾಗ ಹೋರಾಟದ ಮೂಲಕ ಪಡೆದುಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಿ. ನಮ್ಮ ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಸರ್ಕಾರಿ ನೌಕರಿಯಲ್ಲಿ ಇತರೆ ಸಮಾಜದವರಿಂದ ಆಗುತ್ತಿರುವ ಅನ್ಯಾಯ ತಪ್ಪಿಸಬೇಕಾದರೆ ಎಸ್.ಟಿ ಬೇಕೇ , ಕುರುಬ , ಗೊಂಡ ಪದ ಒಂದೆ, ಕುರುಬ ಗೊಂಡ ಸಮಾಜಕ್ಕೆ ಎಸ್ಟಿಯಲ್ಲಿ ಸೇರಿಸಬೇಕು ಎಂದು ಈಗಾಗಲೆ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಅನುದಮೊದ ನೀಡಲು ಫೈಲ್ ಕಳುಹಿಸಿದ್ದಾರೆ ಕೇಂದ್ರ ಸರಕಾರ ಕೂಡಲೆ ಅನುಮೋದನೆ ನೀಡಿ ಕುರುಬ ಸಮಾಜಕ್ಕೆ ಎಸ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ. ಗೊಂಡ ಅಂದ್ರೂ ಒಂದೇ ಕುರುಬ ಅಂದ್ರೂ ಒಂದೇ. ಹೀಗಾಗಿ ಕೇಂದ್ರ ಈಗಾಗಲೇ ಗೊಂಡ ಎಸ್ ಟಿ ಯಲ್ಲಿದ್ದು. ಅದರ ಪರ್ಯಾಯ ಪದ ಕುರುಬ ಎಂದು ಪರಿಗಣಿಸಿ ಎಸ್ ಟಿ ಗೆ ಸೇರ್ಪಡೆ ಮಾಡಬೇಕು. 4 ಬಾರಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಕುಲಶಾಸ್ತ್ರ ಅಧ್ಯಯನದ ವರದಿ ಕಳುಹಿಸಿದ್ದರೂ ಸಹ ರಾಜ್ಯದ ಬಿಜೆಪಿ ನಾಯಕರು, ಕೇಂದ್ರ ಸಚಿವರು, ಸಂಸದರು, ಮಾಜಿ ಶಾಸಕರು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಂತಹ ಗೋಜಿಗೆ ಹೋಗಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ನಮ್ಮ ಸಮಾಜಕ್ಕೆ ಎಸ್.ಟಿ ನೀಡದಿದ್ದರೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ಪ್ರದೇಶ ಕುರುಬಗೊಂಡ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ ಮಾತನಾಡಿ, ನಮ್ಮ ಮುಂದಿನ ಪೀಳಿಗೆಗೆ ಸುಸೂತ್ರವಾದ ದಾರಿ ಮಾಡಿಕೊಡಬೇಕಾಗಿದೆ. ಆದ್ದರಿಂದ ನಮ್ಮ ಸಮಾಜಕ್ಕೆ ಈ ಹಿಂದಿನಂತೆ ಎಸ್ ಟಿ ಗೆ ಸೇರ್ಪಡೆ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದೆ ಉಪಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆ ಕುರುಬ ಸಮುದಾಯವನ್ನು ಎಸ್.ಟಿ ಗೆ ಸೇರ್ಪಡೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಕುಲಶಾಸ್ತ್ರ ಅಧ್ಯಯನ ನಡೆಸಿ ವರದಿ ಸಮೇತ ಕಳುಹಿಸಿದ್ರೂ ಸಹ ಇಲ್ಲಿವರೆಗೂ ಸೇರ್ಪಡೆ ಮಾಡಿಲ್ಲ. ಹೀಗಾಗಿ ನಮ್ಮ ಹಕ್ಕು ನಾವು ಪಡೆಯಲು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೇಕಾದರೆ ಹೋರಾಟ ನಡೆಸಿ ಕೇಂದ್ರ ಸರ್ಕಾರದ ಒತ್ತಡ ಹಾಕೋಣ. ಆದರೆ ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಲ್ಲ. ಬಿಜೆಪಿ ನಾಯಕರು ನಿರಂತರವಾಗಿ ಕುರುಬ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಕಾಗಿನೆಲೆ ಕನಕ ಗುರುಪೀಠ ತಿಂಥಣಿಯ ಪೂಜ್ಯ ಲಿಂಗಭೀರದೇವರು ಮಾತನಾಡಿದರು, ಕುರುಬ ಸಮಾಜ ಮುಖಂಡರಾದ ದೇವಿಂದ್ರಪ್ಪ ಮರತೂರ, ರೇವಣಸಿದ್ದಪ್ಪ ಸಾತನೂರ, ಭಗವಂತರಾಯ ಪಾಟೀಲ, ರವಿಗೊಂಡ ಕಟ್ಟಿಮನಿ, ಮಂಜುಳಾ ಸಾತನೂರ, ದೇವಾನಂದ ಹದನೂರ, ಶಿವರಾಜ ಕೊಡದೂರ, ಹಣಮಂತ ಬೆಂಕಿ, ಅರ್ಜುನ ಪೂಜಾರಿ, ಸಿದ್ದಣ್ಣ ವಚ್ಚಾ, ಮಲ್ಲಿಕಾರ್ಜುನ ಖಂಡರಗೋಳ, ಹಣಮಂತ ಕಂದಗೂಳ, ನಿಂಗಣ್ಣ ಪೂಜಾರಿ, ಶರಣು ಪೂಜಾರಿ, ಬಾಬು ಮೋಘಾ, ಅಶೋಕ ಪೂಜಾರಿ, ಮಾಳಪ್ಪ ಪೂಜಾರಿ, ಪ್ರವೀಣ ಮಲಘಾಣ, ಬಾಬು ಗೋಟೂರ, ಸಿದ್ದಣ್ಣ ಸಾಲಹಳ್ಳಿ, ಜಗನ್ನಾಥ ಪೂಜಾರಿ, ಶಾಮರಾವ್ ಮೋಘಾ ಸೇರಿದಂತೆ ಇತರರು ಇದ್ದರು.