ಸುರಪುರ: ಅಯೋಧ್ಯೆ ಮಂತ್ರಾಕ್ಷತೆ ವಿತರಣೆ ಅಂಗವಾಗಿ ನಗರದಲ್ಲಿ ಸಂಘ ಪರಿವಾರ ದಿಂದ ಶೋಭಾಯಾತ್ರೆ ನಡೆಸಲಾಗಿದೆ.ನಗರದ ಗರುಡಾದ್ರಿ ಕಲಾ ಮಂದಿರ ದಿಂದ ಮಹಾತ್ಮ ಗಾಂಧಿ ವೃತ್ತದ ಮೂಲಕ ದರಬಾರ ರಸ್ತೆ, ಸರದಾರ ವಲ್ಲಭಬಾಯಿ ಪಟೇಲ್ ವೃತ್ತದ ಮೂಲಕ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಮೂಲಕ ಹನುಮಾನ ಟಾಕೀಸ್ ರಸ್ತೆ ಮಾರ್ಗವಾಗಿ ಗರುಡಾದ್ರಿ ಕಲಾ ಮಂದಿರಕ್ಕೆ ಬಂದು ತಲುಪಿತು.
ಈ ಸಂದರ್ಭದಲ್ಲಿ ಸಾರೋಟಿನಲ್ಲಿ ಶ್ರೀರಾಮಚಂದ್ರ ಭಾವಚಿತ್ರವನ್ನಿಟ್ಟು,ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಮೆರವಣಿಗೆ ಜರುಗಿತು.ಮೆರವಣಿಗೆಯಲ್ಲಿ ಕುಂಬ ಕಳಸಗಳೊಂದಿಗೆ ಅನೇಕ ಜನ ಮಹಿಳೆಯರು ಹಾಗೂ ಅನೇಕ ಜನ ಬಾಲಕರು ತಲೆಯ ಮೇಲೆ ಜೈ ಶ್ರೀರಾಮ ಎಂದು ಬರೆದ ಶಿಲೆಗಳನ್ನು ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ನಂತರ ಗರುಡಾದ್ರಿ ಕಲಾ ಮಂದಿರದಲ್ಲಿ ಸಮಾವೇಶವನ್ನು ನಡೆಸಿ ಜನೆವರಿ 1 ನೇ ತಾರಿಖಿನಿಂದ 15ನೇ ತಾರಿಖಿನವರೆಗೆ ಮಂತ್ರಾಕ್ಷತೆ ಪ್ರತಿ ಮನೆಗೆ ವಿತರಣೆ ಮಾಡಲಾಗುವುದು ಎಂದು ಮುಖಂಡರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘ ಪರಿವಾರದ ಮುಖಂಡರಾದ ರಾಜೇಂದ್ರ ಜಿ,ಶಂಕರ ಕರಣಗಿ,ಅಯ್ಯಣ್ಣ ಸುಂಗಿ ಹಾಗೂ ರಿಕ್ಷಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ,ಶಿವಪ್ಪ ಕಟ್ಟಿಮನಿ,ಸಂದೀಪ ಜೋಷಿ,ಶರಣು ನಾಯಕ ಡೊಣ್ಣಿಗೇರ,ಸಚಿನ ಕುಮಾರ ನಾಯಕ,ಶರಣು ನಾಯಕ ದಿವಳಗುಡ್ಡ,ಬಲಭೀಮರಾವ್ ಸೇರಿದಂತೆ ನೂರಾರು ಜನ ಹಿಂದು ಅಭಿಮಾನಿಗಳು ಭಾಗವಹಿಸಿದ್ದರು.