ಬೇಡಿಕೆಗಳ ಈಡೇರಿಸಲು ಪೌರಕಾರ್ಮಿಕರು ನಡೆಸಿದ ಧರಣಿ ಅಂತ್ಯ

0
13

ಸುರಪುರ: ನಗರಸಭೆ ಮುಂದೆ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ನೇರ ಪಾವತಿ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆ ಪೌರಕಾರ್ಮಿಕರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಆರಂಭಿಸಲಾಗಿದ್ದ ಧರಣಿ ಅಂತ್ಯಗೊಂಡಿದೆ.

ಎರಡನೇ ದಿನವೂ ಸಂಜೆಯ ವರೆಗೆ ಧರಣಿ ನಡೆಸಲಾಗಿತ್ತು,ಸಂಜೆಯ ವೇಳೆಗೆ ನಗರಸಭೆಯ ಎಲ್ಲಾ ಸದಸ್ಯರು ಧರಣಿ ನಿರತರ ಬಳಿಗೆ ಆಗಮಿಸಿ,ಬೇಡಿಕೆಗಳನ್ನು ಆಲಿಸಿದರು,ನಂತರ ಸ್ಥಳಕ್ಕೆ ನಗರಸಭೆ ಕಮಿಷನರ್ ಜೀವನಕುಮಾರ್ ಕಟ್ಟಿಮನಿಯವರನ್ನು ಕರೆಯಿಸಿ ಎಲ್ಲಾ ಸದಸ್ಯರು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿದ ಕಮಿಷನರ್ ಜೀವನಕುಮಾರ ಕಟ್ಟಿಮನಿ,ಈಗ ಒಂದು ತಿಂಗಳ ವೇತನ ಜೊತೆಗೆ ಉಪಹಾರದ ಹಣವನ್ನು ಹಾಕಲಾಗುವುದು,ಜೊತೆಗೆ ಇನ್ನುಳಿದ ವೇತನವನ್ನು ಎರಡು ವಾರಗಳಲ್ಲಿ ನೀಡುವುದಾಗಿ ಭರವಸೆ ನೀಡಿದರು.ಅಲ್ಲದೆ ಇ.ಎಸ್.ಐ,ಪಿ.ಎಫ್ ಹಣವನ್ನು ಜಮೆ ಮಾಡಿರುವುದಾಗಿ ಸ್ಥಳಕ್ಕೆ ಇಎಸ್‍ಐ,ಪಿ.ಎಫ್ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ ರಸಿದಿ ತೋರಿಸಿದರು,ಸಂಕಷ್ಟ ಭತ್ಯೆ 2000 ರೂಪಾಯಿಗಳಿಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು,ಅಲ್ಲದೆ ಸಮವಸ್ತ್ರಗಳನ್ನು ಶೀಘ್ರದಲ್ಲಿ ಕೊಡಿಸುವ ಭರವಸೆ ನೀಡಿದ ನಂತರ ಮನವಿ ಸಲ್ಲಿಸಿ ಧರಣಿ ನಿಲ್ಲಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಹಿರಿಯ ಸದಸ್ಯರಾದ ರಾಜಾ ಪಿಡ್ಡ ನಾಯಕ (ತಾತಾ),ವೇಣುಮಾಧವ ನಾಯಕ,ನಾಸೀರ್ ಕುಂಡಾಲೆ,ಕಮ್ರುದ್ದಿನ್,ಮಾನಪ್ಪ ಚಳ್ಳಿಗಿಡ,ಶಿವಕುಮಾರ ಕಟ್ಟಿಮನಿ,ನೈರ್ಮಲ್ಯ ನಿರೀಕ್ಷಕ ಗುರುಸ್ವಾಮಿ,ಶಿವಪುತ್ರ,ವ್ಯವಸ್ಥಾಪಕ ಯಲ್ಲಪ್ಪ ನಾಯಕ, ಧರಣಿಯಲ್ಲಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಅಧ್ಯಕ್ಷ ಬಸವರಾಜ ಹುಲ್ಪೇನವರ್,ಬೀದಿ ದೀಪ ನಿರ್ವಹಣೆಗಾರರ ಸಂಘದ ಅಧ್ಯಕ್ಷ ಸಿದ್ಧಾರೂಢ ಜೇರಬಂಡಿ,ಮಹಾದೇವ ಸತ್ಯಂಪೇಟೆ,ರಾಮು ತೇಲ್ಕರ್,ದುರ್ಗಪ್ಪ ಚಿಂಚೋಡಿ, ಶರಣು, ಭೀಮರಾಯ,ಹಣಮಂತ,ಶಂಕರ,ಮಹಾಂತೇಶ,ಯಲ್ಲಪ್ಪ,ಮೋಹನ್,ಕೃಷ್ಣ,ಗೌತಮ್,ಜೀವನ್,ಮೌನೇಶ,ಅಯ್ಯಪ್ಪ,ಶೇಖರ್,ಹಣಮಂತ,ಸತೀಶ ನಾಯಕ,ಅನಿಲಕುಮಾರ ನಾಯಕ,ಶರಣಬಸವ ನಾಯಕ,ಅಯ್ಯಪ್ಪ,ದುರ್ಗಪ್ಪ,ಆಕಾಶ್ ಕಟ್ಟಿಮನಿ,ಗೋಪಾಲ,ಮಲ್ಲಿಕಾರ್ಜುನ,ವೆಂಕಟೇಶ,ಮೋಹನರಾಜ್,ರಾಘವೇಂದ್ರ,ಮಾನೇಶ ಕಟ್ಟಿಮನಿ, ಮಂಜುನಾಥ, ಆಸೀಫ್, ವಿನೋದ,ಅನ್ವರ್,ಬಸವರಾಜ,ಬೆನಕಪ್ಪ,ಬಸವರಾಜ,ನಾಗರಾಜ,ರಾಘವೇಂದ್ರ,ಲಕ್ಷ್ಮೀ,ಮರೆಮ್ಮ,ಸರಸ್ವತಿ,ಪದ್ಮ,ಲಕ್ಷ್ಮೀ ಎಮ್,ದುರ್ಗಮ್ಮ,ಯಲ್ಲಮ್ಮ,ರಿಜ್ವಾನ್,ರೇಣುಕಾ,ಭೀಮವ್ವ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here